ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ನೂತನ ಅಧ್ಯಕ್ಷರಾಗಿ ಶ್ರೀ.ಶ್ರೀನಿವಾಸ ಬಾಬು.ಎಲ್ ಆಯ್ಕೆ :

ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ನೂತನ ಅಧ್ಯಕ್ಷರಾಗಿ ಶ್ರೀ.ಶ್ರೀನಿವಾಸ ಬಾಬು.ಎಲ್ ವಕೀಲರು ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಧಿಕಾರವನ್ನೂ ವಹಿಸಿದ ನಂತರ ಮಾತನಾಡಿದ ಶ್ರೀ.ಶ್ರೀನಿವಾಸ ಬಾಬು ಅವರು “ಪರಿಸರ ಉಳಿಸಿ, ಪರಿಸರ ಬೆಳೆಸಿ, ಎಂಬ ಧೇಯವಾಕ್ಯದೊಂದಿಗೆ ಗಿಡ ನೆಡುವ ಮುಖೇನ ಪರಿಸರವನ್ನೂ ಉಳಿಸಿ ಬೆಳಸಬೇಕೆಂದು ಹೇಳಿದರು. ಗ್ರಾಮೀಣ ಪ್ರದೇಶದಿಂದ ಬಂದು ನೂತನವಾಗಿ ವಕೀಲ ವೃತ್ತಿ ನಡೆಸುವವರಿಗೆ ಆರ್ಥಿಕ ಸಹಾಯವನ್ನು ಒದಗಿಸುವುದು, ವಕೀಲರಿಗೆ ಮೂಲಭೂತ ಸೌಕರ್ಯವಾದ ಗ್ರಂಥಾಲಯ, ನೂತನ ತಂತ್ರಜ್ಞಾನ ಹಾಗೂ ಕಂಪ್ಯೂಟರ್‌ಗಳನ್ನೂ ಒದಗಿಸುವುದಕ್ಕೆ ಹೆಚ್ಚಿನ ಆಸಕ್ತಿವಹಿಸುವುದಾಗಿ ಹೇಳಿದರು.

ಕೋವಿಡ್-೧೯ ಸಂಕ್ರಾಮಿಕ ರೋಗದ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ವಕೀಲರಿಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಆರ್ಥಿಕ ಸಹಾಯವನ್ನೂ ಒದಗಿಸುವ ಉದ್ದೇಶವನ್ನೂ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷರಾಗಿ ಶ್ರೀ ಕಲ್ಮೇಶ್ವರ್ ಕಿವಡ, ವಕೀಲರು, ಚಿಕ್ಕೋಡಿ, ಭಾರತೀಯ ವಕೀಲರ ಪರಿಷತ್ತಿನ ಸದಸ್ಯರು ಹಾಗೂ ಕೋ-ಛೇರಮನ್ ಆದ ಶ್ರೀ ವೈ.ಆರ್. ಸದಾಶಿವರೆಡ್ಡಿ ಮತ್ತು ಪರಿಷತ್ತಿನ ಎಲ್ಲಾ ಪದಾಧಿಕಾರಿಗಳು ಶುಭಾಶಯವನ್ನು ಕೋರಿದರು. ನಿರ್ಗಮಿತ ಅಧ್ಯಕ್ಷರಾದ ಶ್ರೀ ಅನಿಲ್ ಕುಮಾರ್ ಜೆ.ಎಂ ಮತ್ತು ಉಪಾಧ್ಯಕ್ಷರಾದ ಶ್ರೀ ಶಿವಕುಮಾರ್ .ಎನ್ ನೂತನ ಅಧ್ಯಕ್ಷರಿಗೆ ಹಾಗು ಉಪಾಧ್ಯಕ್ಷರಿಗೆ ಅಧಿಕಾರವನ್ನೂ ಹಸ್ತಾಂತರಿಸಿ ಮಾತಾನಾಡಿ, ರಾಜ್ಯ ವಕೀಲರ ಪರಿಷತ್ತಿನ ಧ್ಯೇಯಗಳನ್ನೂ ಹಾಗೂ ಗ್ರಾಮೀಣ ಭಾಗದಲ್ಲಿ ವಕೀಲ ವೃತ್ತಿ ನಡೆಸುವ ವಕೀಲರಿಗೆ ಕಾರ್ಯಾಗಾರ ಹಾಗೂ ವೃತ್ತಿಪರತೆಯನ್ನೂ ಹೆಚ್ಚಿಸುವಲ್ಲಿ ಶ್ರಮಿಸಬೇಕೇಂದು ಕಿವಿ ಮಾತನ್ನೂ ಹೇಳಿದರು.ಕರ್ನಾಟಕದ ಮೂಲೆಮೂಲೆಗಳಿಂದ ಆಗಮಿಸಿದ ವಕೀಲರು ಮತ್ತು ಸ್ನೇಹಿತರು ನೂತನ ಅಧ್ಯಕ್ಷರಿಗೆ ಶುಭಾಶಯವನ್ನು ಕೋರಿದರು.

Be the first to comment

Leave a Reply

Your email address will not be published. Required fields are marked *

Translate »
error: Content is protected !!