ಮುಖ್ಯಮಂತ್ರಿ

ಮುಖ್ಯಮಂತ್ರಿ ಭೇಟಿಮಾಡಿದ‌ KFCC ನೂತನ ಪದಾಧಿಕಾರಿಗಳು

ಇತ್ತೀಚಿಗೆ ನಡೆದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆಯಲ್ಲಿ ವಿಜೇತರಾದ ಅಧ್ಯಕ್ಷ ಎಂ.ನರಸಿಂಹಲು, ಉಪಾಧ್ಯಕ್ಷರಾದ ಕೆ.ವಿ.ವೆಂಕಟೇಶ್, ‌ಶಿಲ್ಪ ಶ್ರೀನಿವಾಸ್, ಕೆ.ಓ.ರಂಗಪ್ಪ,‌ ಗೌರವ ಕಾರ್ಯದರ್ಶಿಗಳಾದ ಡಿ.ಕೆ.ರಾಮಕೃಷ್ಣ, ಎಂ.ಎನ್.ಕುಮಾರ್, ಎಲ್ ಸಿ ಕುಶಾಲ್ ಹಾಗೂ ಖಜಾಂಚಿ ಬಿ.ಮಹದೇವ್ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷರು ಹಾಗೂ ಕನ್ನಡ ಪರ ಹೋರಾಟಗಾರರಾದ ಸಾ.ರಾ.ಗೋವಿಂದು ಅವರ ನೇತೃತ್ವದಲ್ಲಿ ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಹಾಗೂ ಸನ್ಮಾನ್ಯ ಗೃಹ ಸಚಿವ ಶ್ರೀ ಜಿ.ಪರಮೇಶ್ವರ್ ಅವರನ್ನು ಭೇಟಿ ಮಾಡಿದರು. ಇದೇ ವೇಳೆ ಚಿತ್ರರಂಗದ ಕೆಲವು ಸಮಸ್ಯೆಗಳ ಬಗ್ಗೆ ಚರ್ಚಿಸಿದರು. ಚಿತ್ರರಂಗದ ಹೆಚ್ಚಿನ ವಿಷಯಗಳ ಚರ್ಚಿಸುವ ಸಲುವಾಗಿ ಸಮಯಾವಕಾಶವನ್ನು ನೀಡಬೇಕೆಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪದಾಧಿಕಾರಿಗಳು ಈ ಸಮಯದಲ್ಲಿ ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿದರು.

ಮುಖ್ಯಮಂತ್ರಿ

Be the first to comment

Leave a Reply

Your email address will not be published. Required fields are marked *

Translate »
error: Content is protected !!