ಉದ್ಯಾನ ನಗರಿ ಬೆಂಗಳೂರಿನಲ್ಲಿ ಯುವ ಪ್ರತಿಭಾ ವಿನ್ಯಾಸಕಾರರನ್ನ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕರ್ನಾಟಕ ಫ್ಯಾಷನ್ ಲೀಗ್ ಈವೇಂಟ್ ಮೊದಲ ಆವೃತ್ತಿ ನಗರದ ಲಲಿತ್ ಅಶೋಕ ಸಭಾಂಗಣದಲ್ಲಿ ಇದೇ ಎಪ್ರಿಲ್ 8 ಮತ್ತು 9 ರಂದು ಸಂಜೆ 6 ಗಂಟೆಗೆ ಆಯೋಜಿಸಲಾಗಿದೆ.
ಜಾಗತಿಕ ಮಟ್ಟದಲ್ಲಿ ವಿನ್ಯಾಸ ( ಡಿಸೈನರ್) ಉದ್ಯಮವು ಶೀರ್ಘಗತಿಯಲ್ಲಿ ಬೆಳೆಯುತ್ತಿರುವ ಈ ಕಾಲಘಟ್ಟದಲ್ಲಿ ಯುವ ಪ್ರತಿಭೆ ಹಾಗೂ ಗ್ರಾಹಕರ ಅಗತ್ಯತೆಗಳನ್ನು ಪೂರೈಸುವ ನಿಟ್ಟಿನಲ್ಲಿ ಶ್ರೀ ಹರೀಶ್ ಅಕ್ಕಿಶೆಟ್ಟಿ ಅವರ ಮಹತ್ವಾಕಾಂಕ್ಷೆಯ ಕರ್ನಾಟಕ ಫ್ಯಾಷನ್ ಲೀಗ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ
ಇಂದಿನ ಯುವ ಸಮುದಾಯವು ಭಾರತೀಯ ಕಲೆ ಮತ್ತು ಸಂಸ್ಕೃತಿಯನ್ನು ನಿರಂತರವಾಗಿ ಸಾದರಪಡಿಸುವಲ್ಲಿ ಸಹಕಾರ ನೀಡಲು ಡಿಯೋರ್ಸ ಫ್ಯಾಷನ್ ಶೋ. ಭಾರತದಲ್ಲಿ ವೇದಿಯನ್ನ ಕಲ್ಪಿಸಿದೆ. ಇದರ ಜೊತೆ ಜೊತೆಗೆ ನೀತಾ ಮುಖೇಶ್ ಅಂಭಾನಿ ಸಾಂಸ್ಕೃತಿಕ ಕೇಂದ್ರವನ್ನ ತೆರೆಯುವದರೊಂದಿಗೆ ಭಾರತದ ಪ್ರತಿಭಾವಂತ ಉದಯೋನ್ಮುಖ ವಿನ್ಯಾಸಕಾರರು ಕಾರ್ಪೋರೇಟ್ ವಲಯದ ಫ್ಯಾಷನ್ ವಿನ್ಯಾಸ ಉದ್ಯಮದಲ್ಲಿ ಯಶ ಕಾಣಲು ಸಫಲರಾಗುತ್ತಾರೆ.
ಉದಯೋನ್ಮುಖ ಫ್ಯಾಷನ್ ವಿನ್ಯಾಸಕಾರರು ಅವರ ಪರಿಕಲ್ಪನೆಗಳನ್ನು ಫ್ಯಾಷನ್ ಡಿಸೈನಿಂಗ್ ಸಮೂಹದ ಉದ್ಯಮದಲ್ಲಿ ಪ್ರದತ್ಶಿಸಲು ಕರ್ನಾಟಕ ಫ್ಯಾಷನ್ ಲೀಗ್ ಈವೇಂಟ್ ಒಂದು ವೇದಿಕೆಯಾಗಿದೆ.
.ಶ್ರೀ ಹರೀಶ್ ಅಕ್ಕಿಶೆಟ್ಟಿಯವರ ದೂರದೃಷ್ಢಿತ್ವ ಕರ್ನಾಟಕ ಫ್ಯಾಷನ್ ಲೀಗ್ ಶೋ ವಿಶಿಷ್ಟ ರಚನೆಗಳ ಹಿಂದೆ ವಿನ್ಯಾಸಕಾರರಿಗೆ ಅಗತ್ಯ ಮಾಹಿತಿ ನೀಡುವ ಉದ್ದೇಶ ಮತ್ತು ಕಾರ್ಯಕ್ಷಮತೆಗೆ ಪ್ರೋತ್ಸಾಹ ನೀಡುವುದಾಗಿದೆ.
ಡ್ರೀಮ್ಸ್ ರನ್ ವೇ ಎಜೆನ್ಸಿ ಕೊಕೊಬೆರಿಯ ಸಹ ಸಂಸ್ಥಾಪಕರಾದ ಅಂಜಲಿ ರಾವತ್ ಹಾಗೂ ಅಲೆಸಿಯ ರಾವತ್ ಅವರ ಸಹಯೋಗದಲ್ಲಿ ಫ್ಯಾಷನ್ ಶೋ ಉದ್ಯಮಕ್ಕೆ ಹೊಸ ಅವಕಾಶಗಳನ್ನು ನೀಡುವುದರ ಜೊತೆಗೆ ಸ್ಥಾಪಿತ ವ್ಯವಸ್ಥೆಯ ಲೇಬಲ್ಗಳನ್ನು ಪ್ರದರ್ಶಿಸುತ್ತಿದೆ.
ಕರ್ನಾಟಕ ಫ್ಯಾಷನ್ ಲೀಗ್ ಈವೆಂಟಿನಲ್ಲಿ ಪ್ರಸಿದ್ಧ ನೃತ್ಯ ನಿರ್ದೇಶಕರಾದ ಸೈಯದ್ ಖಿಜಾರ್ ಹುಸೇನ್ ರವನಿತ್ ಗೊರಯಾ ಮತ್ತು ಫಹೀಮ್ ಇವರು ಜೊತೆಗೆ ಹೆಸರಾಂತ ವಿನ್ಯಾಸಕಾರರಾದ ಅಲೆಸಿಯ ರಾವತ್ ದಿಪ್ತಿ ಗಿಜಾಲ್ , ಕ್ಯಾಂಡಿಸ್ ಪಿಂಟೊ ಸೋನಿ ಕೌರ್ ಹೊಸ ಪ್ರತಿಭೆಗಳ ಜೊತೆ ಇನ್ನೂರಕ್ಕೂ ಹೆಚ್ಚು ಉಡುಪುಗಳೊಂದಿಗೆ ಮಾಡೆಲ್ ಗಳ ಜೊತೆ ಹೆಜ್ಹೆ ಹಾಕಲಿದ್ದಾರೆ.
ಕಾರ್ಯಕ್ರಮದಲ್ಲಿ ತುಮುಹ್ , ಸುರಭಿ ಮಿತ್ತಲ್, ಆಕಾಂಕ್ಷಾ ಕಶ್ಯಪ್ ಶ್ರೀ ಡಿಸೈನರ್ ನಾಗಾರ್ಜುನ ಬೆಂಗಳೂರಿನ ಜೆ.ಡಿ. ಇನ್ಸ್ಟಿಟ್ಯೂಟ್ ಆಫ್ ಫ್ಯಾಷನ್ ಟಕ್ನಾಲಜಿ ವಿನ್ಯಾಸಕಾರರಯ ಪ್ರದರ್ಶನ ನೀಡಲಿದ್ದಾರೆ.
Be the first to comment