ಟೀಸರ್ ಮೂಲಕ ಸಾಕಷ್ಟು ಸಾಂಚಲನ ಸೃಷ್ಟಿಸಿದ್ದ “ಕರ್ಮಣ್ಯೆ ವಾಧಿಕಾರಸ್ತೆ” ಚಿತ್ರ ಸಿನಿಮಾ ಥಿಯೇಟರ್ ಗಳಿಗೆ ಎಂಟ್ರಿ ಕೊಡಲು ಸಿದ್ದವಾಗಿದೆ. ಕೊರೋನಾ ಸಾಂಕ್ರಾಮಿಕ ರೋಗದಿಂದಾಗಿ ಸರ್ಕಾರವು ವಿಧಿಸಿರುವ ನಿರ್ಬಂಧಗಳನ್ನು ತೆರವಾಗುವುದನ್ನೇ ಚಿತ್ರತಂಡ ನಿರೀಕ್ಷಿಸುತ್ತಿದೆ.
ಈ ಚಿತ್ರದಲ್ಲಿ ಪ್ರತೀಕ್ ದಿವ್ಯಾ, ತ್ಸೆರಿಂಗ್ ಡೊಲ್ಮಾ ಮತ್ತು ಉಗ್ರಮ್ ಮಂಜು ಪ್ರಮುಖ ಪಾತ್ರದಲ್ಲಿದ್ದಾರೆ. ಚಿತ್ರತಂಡ ಇದೀಗ ಟ್ರೈಲರ್ ಬಿಡುಗಡೆಗೊಳಿಸಲು ಸಿದ್ದವಾಗುತ್ತಿದ್ದು ಮುಂಬರುವ ದಿನಗಳಲ್ಲಿ ಆಡಿಯೋವನ್ನು ಡಿಬೀಟ್ಸ್ ಮ್ಯೂಸಿಕ್ ಚಾನೆಲ್ನಲ್ಲಿ ರಿಲೀಸ್ ಮಾಡಲಾಗುತ್ತದೆ.
ಶ್ರೀಹರಿ ಆನಂದ್ ಅವರಿಗಿದು ಚೊಚ್ಚಲ ನಿರ್ದೇಶನದ ಚಿತ್ರವಾಗಿದೆ. ಚಿತ್ರವು ಎಂಗೇಜಿಂಗ್ ಥ್ರಿಲ್ಲರ್ ಕಥಾನಕ ಎಂದು ಅವರು ಹೇಳಿದ್ದಾರೆ.ಚಿತ್ರವು ಒಂದು ಕಲ್ಲನ್ನು ಕೇಂದ್ರವಾಗಿಸಿಕೊಂಡಿದ್ದು ಆ ಕಲ್ಲಿನ ಸುತ್ತ ಶತಮಾನಗಳ ಇತಿಹಾಸವನ್ನು ಹೊಂದಿದೆ.
ಅವನಿ ಪ್ರೊಡಕ್ಷನ್ಸ್ ನಿರ್ಮಿಸಿರುವ ಚಿತ್ರಕ್ಕೆ ರಮೇಶ್ ರಾಮಯ್ಯ ಬೆಂಬಲ ಸೂಚಿಸಿದ್ದಾರೆ.ರಿತ್ವಿಕ್ ಮುರಳೀಧರ್ ಸಂಗೀತ ನೀಡಿದ್ದರೆ ಸಂಜಿತ್ ಹೆಗ್ಡೆ, ಅನನ್ಯಾ ಭಟ್ ಮತ್ತು ಅಶ್ವಿನಿ ಜೋಶಿ ಹಿನ್ನೆಲೆ ಗಾಯಕರಾಗಿದ್ದಾರೆ.ಉದಯ್ ಲೀಲಾ ಚಿತ್ರದ ಛಾಯಾಗ್ರಾಹಕರಾಗಿದ್ದಾರೆ.ವಿಜೇತ್ ಚಂದ್ರ ಚಿತ್ರದ ಎಡಿಟಿಂಗ್ ಕೆಲಸ ನಿರ್ವಹಿಸಿದ್ದಾರೆ.
https://youtu.be/CuOWYdDpoU0





Pingback: Power to Choose Houston