ಚಿತ್ರ: ಕರ್ಕಿ
ನಿರ್ದೇಶನ: ಪವಿತ್ರನ್
ತಾರಾಗಣ: ಜಯಪ್ರಕಾಶ್, ಮೀನಾಕ್ಷಿ, ಬಲರಾಜವಾಡಿ, ಸಾಧು ಕೋಕಿಲ, ಮಿಮಿಕ್ರಿ ಗೋಪಿ, ಸ್ವಾತಿ ಗುರುದತ್ ಇತರರು
ರೇಟಿಂಗ್: 3.5/5
ಸಮಾಜದಲ್ಲಿ ಇರುವ ಜಾತಿ ಪದ್ಧತಿ, ಸಾಮಾಜಿಕ ತಾರತಮ್ಯ ಮೊದಲಾದ ಅನಿಷ್ಟಗಳಿಗೆ ಕನ್ನಡಿ ಹಿಡಿಯುವ ಚಿತ್ರ ಈ ವಾರ ಬಿಡುಗಡೆ ಆಗಿರುವ ಕರ್ಕಿ.
ಇದು ತಮಿಳು ಚಿತ್ರದ ರಿಮೇಕ್. ಚಿತ್ರದಲ್ಲಿ ಪ್ರೀತಿಗೆ ಜಾತಿ ಹೇಗೆ ಅಡ್ಡ ಬರುತ್ತದೆ? ಮೇಲು ಕೇಳು ಎನ್ನುವ ತಾರತಮ್ಯ ಯಾವ ರೀತಿ ಇದೆ ಎನ್ನುವುದನ್ನು ನಿರ್ದೇಶಕರು ಚಿತ್ರದಲ್ಲಿ ಹೇಳುವ ಯತ್ನವನ್ನು ಮಾಡಿದ್ದಾರೆ.
ತಮಿಳು ಮೂಲ ಚಿತ್ರ ಪರಿಯೇರು ಪೆರುಮಾಳ್ ಪಡಿಯಚ್ಚು ಈ ಚಿತ್ರ. ಮಾರಿ ಸೆಲ್ವರಾಜ್ ನಿರ್ದೇಶಿಸಿದ ಈ ಚಿತ್ರದಂತೆ ಗಾಡ ಅನುಭವಗಳು ಪ್ರೇಕ್ಷಕರಿಗೆ ತಲುಪುತ್ತವೆಯೇ ಎನ್ನುವುದನ್ನು ಹೇಳುವುದು ಕಷ್ಟ. ಆದರೂ ನಿರ್ದೇಶಕರು ಕಥೆಯ ಆಶಯಕ್ಕೆ ಧಕ್ಕೆ ಬರದಂತೆ ಚಿತ್ರವನ್ನು ಹೆಣೆದಿದ್ದಾರೆ.
ಚಿತ್ರದಲ್ಲಿ ಜಯಪ್ರಕಾಶ್, ಬಲ ರಾಜವಾಡಿ ಅವರ ನಟನೆ ಮನಸ್ಸಿನಲ್ಲಿ ಉಳಿಯುತ್ತದೆ. ಚಿತ್ರದಲ್ಲಿ ಸಾಧು ಕೋಕಿಲ ನಗಿಸುವ ಯತ್ನವನ್ನು ಚೆನ್ನಾಗಿ ಮಾಡಿದ್ದಾರೆ. ಯತಿರಾಜ್ ಹಾಗೂ ಸ್ವಾತಿ ಅವರ ಪಾತ್ರಗಳು ಕಥೆಗೆ ಪೂರಕವಾಗಿವೆ.
ಒಟ್ಟಾರೆ ಚಿತ್ರದಲ್ಲಿ ಪ್ರೀತಿ, ಜಾತಿ, ಕ್ರೌರ್ಯ, ಸಾಮಾಜಿಕ ಮೈಲಿಗೆಯ ಅನಾವರಣ ಆಗಿದೆ.
Be the first to comment