ಸಲ್ಮಾನ್ ಖಾನ್, ಶಾರುಖ್ ಖಾನ್ ಜತೆಯಾಗಿ ನಟಿಸಿದ್ದ, ರಾಕೇಶ್ ರೋಷನ್ ನಿರ್ದೇಶನ ಮಾಡಿದ್ದ ಫ್ಯಾಮಿಲಿ ಡ್ರಾಮಾ ‘ಕರಣ್ ಅರ್ಜುನ್’ ಸಿನಿಮಾ 30 ವರ್ಷದ ಬಳಿಕ ಥಿಯೇಟರ್ನಲ್ಲಿ ತೆರೆ ಕಾಣಲಿದೆ.
ಸಹೋದರತ್ವ ಹಾಗೂ ತಾಯಿ ಬಾಂಧವ್ಯದ ಸುತ್ತ ಸಾಗಿದ ‘ಕರಣ್ ಅರ್ಜುನ್’ ನವೆಂಬರ್ 22 ರಂದು ಗ್ಲೋಬಲ್ ರಿಲೀಸ್ ಆಗಲಿದೆ ಎಂದು ನಿರ್ದೇಶಕ ರಾಕೇಶ್ ರೋಷನ್ ಸಿನಿಮಾದ ತುಣುಕವೊಂದನ್ನು ಹಂಚಿಕೊಂಡು ತಿಳಿಸಿದ್ದಾರೆ.
‘ಕರಣ್ ಅರ್ಜುನ್’ ಚಿತ್ರದಲ್ಲಿ ಶಾರುಖ್, ಸಲ್ಮಾನ್ ಜತೆ ರಾಖಿ ಗುಲ್ಜಾರ್, ಕಾಜೋಲ್, ಮಮತಾ ಕುಲಕರ್ಣಿ, ಅಮರೀಶ್ ಪುರಿ, ರಂಜಿತ್ ಮುಂತಾದವರು ನಟಿಸಿದ್ದಾರೆ.
ಚಿತ್ರದ “ಮೇರೆ ಕರಣ್ ಅರ್ಜುನ್ ಆಯೇಂಗೆ..” ಎನ್ನುವ ಡೈಲಾಗ್ ಇಂದಿಗೂ ಬಾಲಿವುಡ್ನಲ್ಲಿ ಎವರ್ ಗ್ರೀನ್ ಆಗಿದೆ. ಸಹೋದರರಾಗಿ ಸಲ್ಮಾನ್, ಶಾರುಖ್ ಅವರು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.
1995ರ ಜನವರಿಯಲ್ಲಿ ತೆರೆಗೆ ಬಂದಿದ್ದ ‘ಕರಣ್ ಅರ್ಜುನ್’ ಬಾಕ್ಸಾಫೀಸ್ನಲ್ಲಿ ದೊಡ್ಡ ಹಿಟ್ ಆಗಿತ್ತು, ಸಿನಿಮಾದ ಕಥೆ, ಹಾಡು, ನಟನೆ ಎಲ್ಲಾ ವಿಭಾಗದಲ್ಲೂ ‘ಕರಣ್ ಅರ್ಜುನ್ʼ ಸದ್ದು ಮಾಡಿತ್ತು.
Be the first to comment