ಚಿತ್ರ: ಕಪಟಿ
ನಿರ್ದೇಶನ: ರವಿಕಿರಣ್.ಡಿ ಮತ್ತು ಚೇತನ್ ಎಸ್.ಪಿ
ನಿರ್ಮಾಣ: ದಯಾಳ್ ಪದ್ಮನಾಭನ್
ತಾರಾಗಣ: ಸುಕೃತಾ ವಾಘ್ಲೆ, ಶಂಕರ್ನಾರಾಯಣ್ ಮೊದಲಾದವರು
ರೇಟಿಂಗ್: 3.5
ತಂತ್ರಜ್ಞಾನದ ದುರುಪಯೋಗ ಹೇಗೆಲ್ಲ ಜನರನ್ನು ಮಾನಸಿಕ ಅಸ್ವಸ್ಥರನ್ನಾಗಿ ಮಾಡಬಲ್ಲದು ಎನ್ನುವುದನ್ನು ತೋರಿಸಿರುವಂಥ ಚಿತ್ರ ಕಪಟಿ. 2 ಗಂಟೆಗಳ ಕಾಲಾವಧಿಯ ಈ ಚಿತ್ರವು ಸಸ್ಪೆನ್ಸ್ ಥ್ರಿಲ್ಲರ್ ಮಾದರಿಯಲ್ಲಿ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಂತೆ ಮೂಡಿಬಂದಿದೆ.
ಪ್ರಿಯಾ ಒಬ್ಬ ಜನಪ್ರಿಯ ವಸ್ತ್ರವಿನ್ಯಾಸಕಿ. ಒಂದು ಕಾಲದಲ್ಲಿ ಸಂತೋಷವಾಗಿದ್ದ ಈಕೆಯ ತಂದೆ ಮತ್ತು ಸಹೋದರ ಈಗ ಒಂದು ದುಃಖದಲ್ಲಿ ಮುಳುಗಿದ್ದಾರೆ. ಪ್ರಿಯಾ ತಂದೆ ರಾಷ್ಟ್ರಮಟ್ಟದ ಕ್ರಿಕೆಟ್ ಆಟಗಾರರಾಗಿ ನಿವೃತ್ತರಾದವರು. ಸಹೋದರ ಅಮಿತ್ ಪಾರ್ಶ್ವವಾಯುವಿಗೆ ಒಳಗಾದವರು. ಈ ಮನೆಯಲ್ಲಿ ಸಂತೋಷವೇ ಇಲ್ಲ. ಈ ಪರಿಸ್ಥಿತಿಯ ಲಾಭ ಪಡೆದುಕೊಂಡು ಮಮನೆಯೊಳಗೆ ನುಗ್ಗುವವರೇ ಚಕ್ರಿ ಮತ್ತು ಸುಮನ್. ಕಾರುಕಳ್ಳ ಚಕ್ರಿಗೆ ಸುಮನ್ ಡಾರ್ಕ್ ವೆಬ್ ಪರಿಚಯಿಸುತ್ತಾನೆ. ತನ್ನದೇ ಮನೆಯೊಳಗಿಂದ ತನ್ನ ವಿರುದ್ಧ ಸಂಚು ರೂಪಿಸಿದಂಥ ಆಟದಿಂದ ಪ್ರಿಯಾ ಪಾರಾಗುತ್ತಾಳ? ಹೇಗೆ ಸಾಧ್ಯ ಎನ್ನುವುದೇ ಈ ಚಿತ್ರದ ಕತೆ.
ಇಡೀ ಚಿತ್ರ ಒಂದೇ ಮನೆಯಲ್ಲಿ ನಡೆಯುತ್ತದೆ. ಪ್ರಿಯಾ ಪಾತ್ರಕ್ಕೆ ಸುಕೃತಾ ವಾಘ್ಲೆ ಜೀವ ತುಂಬಿದ್ದಾರೆ. ತನ್ನದೇ ಆದ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ನಿಭಾಯಿಸುವ ಸ್ಮರಣೀಯ ನಟನೆ ನೀಡಿದ್ದಾರೆ. ದೇವ್ ದೇವಯ್ಯ ಮತ್ತು ಸಾತ್ವಿಕ್ ಕೃಷ್ಣನ್ ಕೂಡ ತಮ್ಮ ಪಾತ್ರಗಳನ್ನು ಸೂಕ್ತವಾಗಿ ನಿಭಾಯಿಸಿದ್ದಾರೆ. ನಿರ್ಮಾಪಕ ದಯಾಳ್ ಪದ್ಮನಾಭನ್ ಅವರ ವಿಶಿಷ್ಟ ಚಿತ್ರ ನಿರ್ಮಾಣ ಶೈಲಿಯೊಂದಿಗೆ ಬಂದಿರುವ ಈ ಮೊದಲ ಚಿತ್ರದಲ್ಲಿ ನಿರ್ದೇಶಕರಾದ ರವಿಕಿರಣ್ ಮತ್ತು ಚೇತನ್ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಜೋಹಾನ್ ಸಂಗೀತ ಭಯಾನಕ ಕಥೆಗೆ ಅಗತ್ಯದ ಭಯ ಹುಟ್ಟಿಸುವಲ್ಲಿ ಯಶಸ್ವಿಯಾಗಿದೆ. ಪ್ರೇಕ್ಷಕರು ಹಾರರ್ ಮತ್ತು ಥ್ರಿಲ್ಲರ್ ಮಧ್ಯದ ಈ ಕತೆಗೆ ಮನಸೋಲುವುದರಲ್ಲಿ ಸಂದೇಹವಿಲ್ಲ.

Be the first to comment