Kantara2 ಕಾಂತಾರ 2 ಸಿನಿಮಾ ಬಗ್ಗೆ ಯೋಚನೆ ಮಾಡಿಲ್ಲ ಎಂದ ರಿಷಬ್ ಶೆಟ್ಟಿ

ರಿಷಬ್ ಶೆಟ್ಟಿ ಕಾಂತಾರ 2 ಸಿನಿಮಾ ಬಗ್ಗೆ ಯೋಚನೆ ಮಾಡಿಲ್ಲ ಎಂದಿದ್ದಾರೆ.

ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿರುವ ರಿಷಬ್ ಶೆಟ್ಟಿ, ಸದ್ಯಕ್ಕೆ ಕಾಂತಾರ 2 ಸಿನಿಮಾದ ಬಗ್ಗೆ ಏನೂ ಯೋಚನೆ ಮಾಡಿಲ್ಲ. ಕಾಂತಾರ 2 ಸಿನಿಮಾ ಕುರಿತಾಗಿ ಯಾವುದೇ ನಿರ್ಧಾರ ತಗೆದುಕೊಂಡಿಲ್ಲ ಎಂದು ಹೇಳಿದ್ದಾರೆ.

ದೈವವನ್ನು ಕೇಳುವುದಕ್ಕಿಂತ ಮುಂಚೆ ಆಗಲೇ ಸ್ಕ್ರಿಪ್ಟ್ ಕೆಲಸದಲ್ಲೂ ಅವರು ತೊಡಗಿದ್ದಾರೆ ಎಂದು ಹೇಳಲಾಗಿತ್ತು. ಟೀಮ್ ಕಟ್ಟಿಕೊಂಡು ಕಾಂತಾರ 2 ಕಥೆಯನ್ನು ಹೆಣೆಯುತ್ತಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಸಿನಿಮಾ ಬಗ್ಗೆ ಏನೂ ಯೋಚನೆ ಮಾಡಿಲ್ಲ ಎಂದು ಹೇಳುವ ಮೂಲಕ ಎಲ್ಲವನ್ನೂ ಅವರು ನಿರಾಕರಿಸಿದ್ದಾರೆ.

ರಿಷಬ್ ಶೆಟ್ಟಿ ಅವರು ಇಷ್ಟೊತ್ತಿಗಾಗಲೇ ಬೆಲ್ ಬಾಟಮ್ 2 ಸಿನಿಮಾ ಮಾಡಬೇಕಿತ್ತು. ವರ್ಷದ ಹಿಂದೆಯೇ ಈ ಸಿನಿಮಾ ಮುಹೂರ್ತ ಕೂಡ ಆಗಿದೆ. ಬೆಲ್ ಬಾಟಮ್ 2 ಸಿನಿಮಾವನ್ನು ಕೈಗೆತ್ತಿಕೊಳ್ಳಲಿದ್ದಾರಾ ಎನ್ನುವ ಕುರಿತು ರಿಷಬ್ ಆಗಲಿ ಅಥವಾ ಬೆಲ್ ಬಾಟಮ್ 2 ಸಿನಿಮಾದ ನಿರ್ಮಾಪಕರಾಗಲಿ ಯಾವುದೇ ಮಾಹಿತಿ ನೀಡಿಲ್ಲ.

ಕಾಂತಾರ 2 ಸದ್ಯಕ್ಕೆ ಮಾಡುತ್ತಿಲ್ಲ ಎಂದು ರಿಷಬ್ ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಿದ್ದಂತೆಯೇ ಬೆಲ್ ಬಾಟಮ್ ಸಿನಿಮಾದ ಸುದ್ದಿಗೆ ಮಹತ್ವ ಬಂದಿದೆ. ಮೂಲಗಳ ಪ್ರಕಾರ ಕಾಂತಾರ 2 ಸಿನಿಮಾದ ನಂತರವಷ್ಟೇ ಬೆಲ್ ಬಾಟಮ್ 2 ಸಿನಿಮಾ ಆಗಲಿದೆ ಎಂದು ಹೇಳಲಾಗುತ್ತಿದೆ. ಈ ಕುರಿತು ರಿಷಬ್ ಶೆಟ್ಟಿ ಸ್ಪಷ್ಟನೆ ನೀಡಬೇಕಿದೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!