‘ಕಾಂತಾರ 2’ ಮುಹೂರ್ತ ಫಿಕ್ಸ್

 ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸುತ್ತಿರುವ ‘ಕಾಂತಾರ 2’ ಚಿತ್ರದ ಮುಹೂರ್ತ ನವೆಂಬರ್ 27ರಂದು ಫಿಕ್ಸ್ ಆಗಿದೆ.

ಸಿನಿಮಾ ಮಹೂರ್ತದ ಕುರಿತಂತೆ ಪಂಜುರ್ಲಿ ಮತ್ತು ಗುಳಿಗ ದೈವಕ್ಕೆ ಚಿತ್ರತಂಡ ಮೊರೆ ಹೋಗಿದ್ದು, ದೈವಗಳು ಅಸ್ತು ಎಂದಿವೆ ಎನ್ನುವ ಮಾಹಿತಿ ಸಿಕ್ಕಿದೆ. ಸಿನಿಮಾ ತಂಡ ಮುಹೂರ್ತಕ್ಕೆ ಸರ್ವ ಸಿದ್ಧತೆ ಮಾಡಿಕೊಂಡಿದೆ.

ಹೊಂಬಾಳೆ ಸಂಸ್ಥೆ ನಿರ್ಮಾಣದ  ‘ಕಾಂತಾರ 2’ ಯಾವಾಗ ಎಂದು ಕಾದು ಕುಳಿತ ಫ್ಯಾನ್ಸ್‌ಗೆ ಸಿಹಿಸುದ್ದಿ ಸಿಕ್ಕಿದೆ. ಈ ಸಿನಿಮಾದಲ್ಲಿ 14ನೇ ಶತಮಾನದಿಂದ ಶುರುವಾಗುವ ಕಥೆ  ಇರಲಿದೆ ಎಂದು ಹೇಳಲಾಗಿದೆ.

ಕಾಂತಾರ ಸೂಪರ್ ಹಿಟ್ ಆದಂತೆಯೇ ‘ಕಾಂತಾರ 2’ ಹೆಚ್ಚಿನ ಯಶಸ್ಸು ಪಡೆಯಬೇಕೆಂದು ರಿಷಬ್ ಶೆಟ್ಟಿ ತಯಾರಿ ಮಾಡಿಕೊಂಡಿದ್ದಾರೆ. ರಿಷಬ್ ಶೆಟ್ಟಿತಮ್ಮ ಲುಕ್ ಜೇಂಜ್ ಮಾಡಿ ‘ಕಾಂತಾರ 2’ ಮುಹೂರ್ತ ಫಿಕ್ಸ್ ಮಾಡಿದ್ದಾರೆ. ಸದ್ಯದಲ್ಲೇ ಸಿನಿಮಾ ಶೂಟಿಂಗ್ ಶುರುವಾಗಲಿದೆ. ಈ ಬಗ್ಗೆ ಹೆಚ್ಚಿನ ಅಪ್‌ಡೇಟ್ ಸಿನಿಮಾ ಮುಹೂರ್ತ ಸಮಾರಂಭದ ದಿನ ಸಿಗಲಿದೆ.

ತುಳುನಾಡಿನ ದೈವಗಳ ಕಥೆಯನ್ನು ಹೊಂದಿದ್ದ ಕಾಂತಾರ ಚಿತ್ರ ಮೊದಲು ಕನ್ನಡದಲ್ಲಿ ಬಿಡುಗಡೆಗೊಂಡಿತ್ತು. ಹೊಂಬಾಳೆ ಫಿಲಂಸ್ ಪ್ರೊಡಕ್ಷನ್ ನ ಈ ಚಿತ್ರ ಬಳಿಕ ಬೇರೆ ಭಾಷೆಗಳಲ್ಲಿ ತೆರೆ ಕಂಡು ಸೂಪರ್ ಹಿಟ್ ಎನಿಸಿತು.

ಚಿತ್ರದಲ್ಲಿ ರಿಷಬ್ ಶೆಟ್ಟಿ ಅವರ ಜೊತೆಗೆ ಸಪ್ತಮಿ ಗೌಡ, ಅಚ್ಚುತ್ ಕುಮಾರ್, ಕಿಶೋರ್ ಇತರರು ನಟಿಸಿದ್ದರು. ಕಾಂತಾರ 2 ಈಗಾಗಲೇ ಸಾಕಷ್ಟು ನಿರೀಕ್ಷೆಯನ್ನು ಹುಟ್ಟು ಹಾಕಿದೆ.

——

Be the first to comment

Leave a Reply

Your email address will not be published. Required fields are marked *

Translate »
error: Content is protected !!