ಕಾಂತಾರ ಚಿತ್ರದ ಹಿಂದಿ ಟ್ರೈಲರ್ ಅಕ್ಟೋಬರ್ 9 ರಂದು ರಿಲೀಸ್ ಆಗಲಿದೆ.
ಕಾಂತಾರ ಹಿಂದಿ ಸಿನಿಮಾ ರಿಲೀಸ್ ಯಾವಾಗ ಎನ್ನುವ ಬಗ್ಗೆ ಹೊಂಬಾಳೆ ಪ್ರೊಡಕ್ಷನ್ ಹೌಸ್ ಇನ್ನೂ ಮಾಹಿತಿ ನೀಡಿಲ್ಲ. ಆದರೆ 9 ರಂದು ಟ್ರೈಲರ್ ರಿಲೀಸ್ ಆಗುವ ಬಗ್ಗೆ ಮಾಹಿತಿ ಸಿಕ್ಕಿದೆ.
ರಿಷಬ್ ಶೆಟ್ಟಿ ತಮ್ಮ ಈ ಚಿತ್ರ ದೊಡ್ಡಮಟ್ಟದಲ್ಲಿ ರಿಲೀಸ್ ಆಗಬೇಕು ಎಂದು ಕನಸು ಕಂಡಿದ್ದರು. ಈಗ ಚಿತ್ರದ ಮೊದಲ ಹಿಂದಿ ಟ್ರೈಲರ್ ರಿಲೀಸ್ಗೆ ರೆಡಿ ಆಗಿದೆ.
ಕಾಂತಾರ ಕನ್ನಡ ಭಾಷೆಯಲ್ಲಿ ಸೆ.30 ನೇ ತಾರೀಕು ರಿಲೀಸ್ ಆಗಿದೆ. ಚಿತ್ರ ದೈವದ ಕಥೆ ಹೊಂದಿದೆ. ಈ ಒಂದು ಕಾರಣಕ್ಕೆ ಈ ಚಿತ್ರದ ಬಗ್ಗೆ ದೈವಿಕ ಮನೋಭಾವ ಕರಾವಳಿ ಭಾಗದಲ್ಲಿದೆ. ಬೇರೆ ಕಡೆಯೂ ಚಿತ್ರದ ಮೇಕಿಂಗ್ ಇಷ್ಟವಾಗಿದ್ದು, ಜನರು ಚಿತ್ರ ನೋಡಲು ಥಿಯೇಟರ್ ಕಡೆ ಹೆಜ್ಜೆ ಹಾಕಿದ್ದಾರೆ.
ಚಿತ್ರದಲ್ಲಿ ಕರಾವಳಿಯ ಬದುಕಿನ ಜೊತೆಗೆ ಅಧಿಕಾರಿಗಳ ಸಂಘರ್ಷ ಇದೆ. ಭೂತಕೋಲ, ಕಂಬಳ, ಕರಾವಳಿಯ ಹಲವು ಸಂಪ್ರದಾಯ ಆಚಾರ ವಿಚಾರಗಳನ್ನು ಚಿತ್ರದಲ್ಲಿ ತೋರಿಸಲಾಗಿದೆ.
ಹೊಂಬಾಳೆ ಪ್ರೊಡಕ್ಷನ್ ನಿಂದ ಅದ್ಧೂರಿ ಆಗಿ ಸಿನಿಮಾ ಮೂಡಿ ಬಂದಿದೆ. ಬೇರೆ ಭಾಷೆಗೂ ಚಿತ್ರ ಡಬ್ ಆಗಲಿದೆ.
______





Be the first to comment