ಮತ್ತೊಂದು ದಾಖಲೆಯತ್ತ ಕಾಂತಾರ

ಕಾಂತಾರ ಕರ್ನಾಟಕದಲ್ಲಿ ಕೆಜಿಎಫ್ 2 ಕಲೆಕ್ಷನ್ ಸರಿಗಟ್ಟಿದ್ದು, ಈ ಸಿನಿಮಾ ಶೀಘ್ರವೇ ಕೆಜಿಎಫ್2 ಕಲೆಕ್ಷನ್ ರೆಕಾರ್ಡ್ ಮೀರಿಸಿ ಕರ್ನಾಟಕದಲ್ಲಿ ಮತ್ತೊಂದು ದಾಖಲೆ ಬರೆಯುವ ಸಾಧ್ಯತೆ ಇದೆ.

ಕೆಜಿಎಫ್ 2 ಸಿನಿಮಾ 100 ಕೋಟಿ ಬಜೆಟ್​​ನಲ್ಲಿ ಸಿದ್ಧವಾಗಿತ್ತು. ಈ ಸಿನಿಮಾ ಕರ್ನಾಟಕದಲ್ಲಿ ಗಳಿಸಿದ್ದು ಸುಮಾರು 183 ಕೋಟಿ ರೂಪಾಯಿ. ರಿಷಬ್ ಶೆಟ್ಟಿ ಬರೆದು, ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾ ಕೂಡಾ ಕರ್ನಾಟಕದಲ್ಲಿ 183 ಕೋಟಿ ಗಳಿಸಿದೆ. ಈ ಮೂಲಕ ಸಿನಿಮಾ ಕೆಜಿಎಫ್​2 ಕಲೆಕ್ಷನ್ ತಲುಪಿದೆ ಎನ್ನಲಾಗಿದೆ.

ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾದ ಹಿಂದಿ ವರ್ಷನ್ 75 ಕೋಟಿಗೂ ಹೆಚ್ಚು ಲಾಭ ಗಳಿಸಿದೆ. ತೆಲುಗಿನಲ್ಲಿಯೂ 50 ಕೋಟಿಗೂ ಹೆಚ್ಚು ಗಳಿಸಿದೆ.

ಬಹಳಷ್ಟು ಸಿನಿಮಾಗಳಲ್ಲಿ ಚಿಕ್ಕ ಸೈಡ್ ರೋಲ್ಗಳನ್ನು ಮಾಡಿದ್ದ ರಿಷಬ್ ಶೆಟ್ಟಿ ಅವರು ಕಾಂತಾರ ಮೂಲಕ ಈಗ ಸಕ್ಸಸ್ ಫುಲ್ ಆಗಿದ್ದು, ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ.

ಹೊಂಬಾಳೆ ನಿರ್ಮಾಣದ ಕಾಂತಾರ ಚಿತ್ರ ಸೆ. 30ರಂದು ಮೊದಲು ಕನ್ನಡದಲ್ಲಿ ಬಿಡುಗಡೆ ಆಗಿತ್ತು. ಬಳಿಕ ಬೇರೆ ಭಾಷೆಗಳಿಗೆ ಡಬ್ ಆಗಿತ್ತು.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!