ಹಿಂದಿಯಲ್ಲಿ ಕಾಂತಾರ ಗ್ರಾಂಡ್ ರಿಲೀಸ್

ಹಿಂದಿಯಲ್ಲಿ ಕಾಂತಾರ ಬಿಡುಗಡೆಗೆ ಸಿದ್ದವಾಗಿದ್ದು 2,500ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ರಿಲೀಸ್ ಆಗಲಿದೆ.

ಅಕ್ಟೋಬರ್ 14ರಂದು ಹಿಂದಿಭಾಷೆಯಲ್ಲೂ “ಕಾಂತಾರ” ಚಿತ್ರ ತೆರೆ ಕಾಣುತ್ತಿದೆ. ಮುಂಬೈ ಸೇರಿದಂತೆ ವಿವಿಧೆಡೆ ಸುಮಾರು 2,500ಕ್ಕೂ ಅಧಿಕ ಸ್ಕೀನ್‌ಗಳಲ್ಲಿ “ಕಾಂತಾರ” ಪ್ರದರ್ಶನವಾಗಲಿದೆ.

ತುಳು ನಾಡಿನ ದೈವ ಕೋಲದ ಕಥಾ ವಸ್ತುವಿನ ಹಿನ್ನೆಲೆಯಲ್ಲಿ ಮೂಡಿ ಬಂದ ಕಾಂತಾರ ಸಿನಿಮಾವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಕನ್ನಡದ ಜೊತೆಗೆ ಪರಭಾಷೆಯ ಮಂದಿಯೂ ಕಾಂತಾರಕ್ಕೆ ಫಿದಾ ಆಗಿದ್ದಾರೆ.

ಕಾಂತಾರ ಕನ್ನಡ ಭಾಷೆಯಲ್ಲಿ ಸೆ.30 ನೇ ತಾರೀಕು ರಿಲೀಸ್ ಆಗಿದೆ. ಚಿತ್ರ ದೈವದ ಕಥೆ ಹೊಂದಿದೆ. ಈ ಒಂದು ಕಾರಣಕ್ಕೆ ಈ ಚಿತ್ರದ ಬಗ್ಗೆ ದೈವಿಕ ಮನೋಭಾವ ಕರಾವಳಿ ಭಾಗದಲ್ಲಿದೆ. ಬೇರೆ ಕಡೆಯೂ ಚಿತ್ರದ ಮೇಕಿಂಗ್ ಇಷ್ಟವಾಗಿದ್ದು, ಜನರು ಚಿತ್ರ ನೋಡಲು ಥಿಯೇಟರ್ ಕಡೆ ಬರುತ್ತಿದ್ದಾರೆ.

ಚಿತ್ರದಲ್ಲಿ ಕರಾವಳಿಯ ಬದುಕಿನ ಜೊತೆಗೆ ಅಧಿಕಾರಿಗಳ ಸಂಘರ್ಷ ಇದೆ. ಭೂತಕೋಲ, ಕಂಬಳ, ಕರಾವಳಿಯ ಹಲವು ಸಂಪ್ರದಾಯ ಆಚಾರ ವಿಚಾರಗಳನ್ನು ಚಿತ್ರದಲ್ಲಿ ತೋರಿಸಲಾಗಿದೆ.

ಹೊಂಬಾಳೆ ಪ್ರೊಡಕ್ಷನ್ ನಿಂದ ಅದ್ಧೂರಿ ಆಗಿ ಸಿನಿಮಾ ಮೂಡಿ ಬಂದಿದೆ. ಬೇರೆ ಭಾಷೆಗೂ ಚಿತ್ರ ಡಬ್ ಆಗಲಿದೆ. ತಮಿಳು ಟ್ರೈಲರ್ ನಿನ್ನೆ ರಿಲೀಸ್ ಆಗಿದೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!