ಕನ್ನಡದ ಕಾಂತಾರ ಸೇರಿದಂತೆ ದಕ್ಷಿಣ ಭಾರತ ಚಿತ್ರರಂಗದ ಐದು ಚಿತ್ರಗಳು ಈ ಬಾರಿಯ ಆಸ್ಕರ್ ಪ್ರಶಸ್ತಿಗೆ ಅರ್ಹತೆ ಪಡೆದಿವೆ.
ಕನ್ನಡ ಚಿತ್ರಗಳಾದ ಕಾಂತಾರ ಹಾಗೂ ವಿಕ್ರಾಂತ್ ರೋಣ ಚಿತ್ರಗಳು ಆಸ್ಕರ್ ಪ್ರಶಸ್ತಿಗೆ ನಾಮ ನಿರ್ದೇಶನಗೊಳ್ಳಲು ಅರ್ಹತೆ ಪಡೆದಿವೆ.
ತೆಲುಗಿನ ಆರ್ ಆರ್ ಆರ್ ಹಾಗೂ ತಮಿಳು ಚಿತ್ರರಂಗದ ರಾಕೆಟ್ರಿ ದ ನಂಬಿ ಎಫೆಕ್ಟ್ ಮತ್ತು ಇರವಿನ್ನಳಲ್ ಚಿತ್ರಗಳು ಅರ್ಹತೆ ಪಡೆದುಕೊಂಡಿವೆ. ವಿಶ್ವದ 301 ಚಿತ್ರಗಳ ಪಟ್ಟಿಯಲ್ಲಿ ಈ ಚಿತ್ರಗಳು ಸ್ಥಾನ ಪಡೆದುಕೊಂಡಿವೆ.
ಯಾವ ಚಿತ್ರಗಳು ನಾಮ ನಿರ್ದೇಶನ ಪಡೆದುಕೊಳ್ಳಲಿವೆ ಎಂಬುದು ಜನವರಿ 24ರಂದು ಬಿಡುಗಡೆಗೊಳ್ಳಲಿರುವ ನಾಮಿನೇಟೆಡ್ ಮೂವೀಸ್ ಪಟ್ಟಿಯ ಮೂಲಕ ತಿಳಿಯಲಿದೆ.
ಈ ಬಾರಿಯ ಆಸ್ಕರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಮಾರ್ಚ್ 12ದಂದು ಜರುಗಲಿದೆ. ಮಾರ್ಚ್ 2ರ ಬೆಳಗ್ಗೆ ಒಂಬತ್ತು ಗಂಟೆಯಿಂದ ಮಾರ್ಚ್ 7ರ ಸಂಜೆ ಐದು ಗಂಟೆಯವರೆಗೆ ನಾಮಿನೇಟ್ ಆದ ಕಲಾವಿದರು ಹಾಗೂ ಚಿತ್ರಗಳಿಗೆ ವೋಟಿಂಗ್ ನಡೆಯಲಿದೆ. ಆಸ್ಕರ್ ಸದಸ್ಯರು ನೀಡುವ ಮತಗಳ ಆಧಾರದ ಮೇಲೆ ಆಸ್ಕರ್ ವಿಜೇತರನ್ನು ವಿಜೇತರೆಂದು ಆಯ್ಕೆ ಮಾಡಲಾಗುತ್ತದೆ.
___

Be the first to comment