ಹಿಟ್ ಆದ ಕಾಂತಾರ ಪಾತ್ರವರ್ಗದ ವಿಡಿಯೋ

ರಿಷಬ್ ಶೆಟ್ಟಿ ನಿರ್ದೇಶನದಲ್ಲಿ ಬರುತ್ತಿರುವ ಕಾಂತಾರ ಸಿನಿಮಾದ ಪಾತ್ರವರ್ಗದ ವಿಡಿಯೋ ಹೆಚ್ಚಿನ ವೀಕ್ಷಣೆ ಪಡೆಯುವ ಮೂಲಕ ಗಮನ ಸೆಳೆದಿದೆ.

ಈ ವಿಡಿಯೋದಲ್ಲಿ ರಿಷಬ್ ಶೆಟ್ಟಿ ಅಲ್ಲದೇ ಹಲವು ಪಾತ್ರಧಾರಿಗಳು ತಮ್ಮ ಪಾತ್ರದ ಬಗ್ಗೆ ಮಾತನಾಡಿದ್ದಾರೆ. ವಿಡಿಯೋ ಬಿಡುಗಡೆ ಆದ 24 ಗಂಟೆಯ ಒಳಗೆ 1.5 ಲಕ್ಷ ವೀಕ್ಷಣೆ ಪಡೆದಿದೆ.

ಕೆಲ ದಿನಗಳ ಹಿಂದೆ ಚಿತ್ರದ ಟ್ರೈಲರ್ ಬಿಡುಗಡೆ ಆಗಿ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಸಿತ್ತು. ಆಕ್ಷನ್, ಥ್ರಿಲ್ಲರ್, ಕ್ರೈಂ, ತುಳು ಕಲ್ಚರ್ ಈ ರೀತಿಯ ಹಲವು ಹೂರಣ ಇರುವ ಟ್ರೈಲರ್ ಜಬರ್ದಸ್ತ್ ಆಗಿ ಮೂಡಿ ಬಂದಿದೆ.

ಟ್ರೈಲರ್ ನಲ್ಲಿ ಕರಾವಳಿ ಸೊಗಡು, ರಿಷಬ್ ಶೆಟ್ಟಿ ಹಾಗೂ ಕಿಶೋರ್ ಕುಮಾರ್ ನಡುವಣ ವೈರತ್ವ ಜೋರಾಗಿ ಮೂಡಿ ಬಂದಿದೆ. ಕಿಶೋರ್ ಕುಮಾರ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಕರಾವಳಿಯ ಬದುಕಿನ ಜೊತೆಗೆ ಅಧಿಕಾರಿಗಳ ಸಂಘರ್ಷ ಚಿತ್ರದಲ್ಲಿದೆ. ಭೂತಕೋಲ, ಕಂಬಳ, ಕರಾವಳಿಯ ಹಲವು ಸಂಪ್ರದಾಯ ಆಚಾರ ವಿಚಾರಗಳನ್ನು ಟ್ರೈಲರ್ ನಲ್ಲಿ ತೋರಿಸಲಾಗಿದೆ.

ಹೊಂಬಾಳೆ ಪ್ರೊಡಕ್ಷನ್ ನಿಂದ ಅದ್ಧೂರಿ ಆಗಿ ಸಿನಿಮಾ ಮೂಡಿ ಬಂದಿದೆ. ಕಾಂತಾರ ಚಿತ್ರದ ಬಗ್ಗೆ ಸಿನಿಮಾಸಕ್ತರ ಕುತೂಹಲ ಸಾಕಷ್ಟು ಗರಿ ಗೆದರಿದೆ.

ಚಿತ್ರ ಸೆ. 30ಕ್ಕೆ ತೆರೆಗೆ ಬರಲಿದೆ.

___

Be the first to comment

Leave a Reply

Your email address will not be published. Required fields are marked *

Translate »
error: Content is protected !!