ಬೇರೆ ಭಾಷೆಗೆ ಡಬ್ ಆಗಲಿದೆ ಕಾಂತಾರ

ಸೂಪರ್ ಹಿಟ್ ಚಿತ್ರ ಕಾಂತಾರ ಸಿನಿಮಾ ಬೇರೆ ಭಾಷೆಗಳಿಗೆ ಡಬ್ ಆಗಲಿದೆ.
ಚಿತ್ರದ ಡಬ್ಬಿಂಗ್ ಪ್ಲಾನ್ ನಡೀತಾ ಇದೆ. ತೆಲುಗು, ತಮಿಳು, ಹಿಂದಿ ಭಾಷೆಯಲ್ಲೂ ಕಾಂತಾರ ಸಿನಿಮಾ ರಿಲೀಸ್ ಆಗಲಿದೆ ಎಂದು ಚಿತ್ರದ ನಾಯಕ ನಟ, ನಿರ್ದೇಶಕ ರಿಷಬ್ ಶೆಟ್ಟಿ ಹೇಳಿದ್ದಾರೆ.

ಈಗಾಗಲೇ ಆಯಾ ಭಾಷೆಯ ಸಿನಿಮಾ ವಿತರಕರು ಡಬ್ಬಿಂಗ್ ಬಗ್ಗೆ ಹೊಂಬಾಳೆ ಪ್ರೋಡಕ್ಷನ್ ಹೌಸ್ ಸಂಪರ್ಕಿಸುತ್ತಿದ್ದಾರೆ. ಶೀಘ್ರದಲ್ಲಿಯೇ ಪ್ರೋಡಕ್ಷನ್ ಹೌಸ್, ಇತರ ಭಾಷೆಯ ಡಬ್ಬಿಂಗ್ ರಿಲೀಸ್ ಬಗ್ಗೆ ಮಾಹಿತಿ ಕೊಡಲಿದೆ ಎಂದು ರಿಷಬ್ ಹೇಳಿದ್ದಾರೆ.

ಕಾಂತಾರ ಸಿನಿಮಾದ ಕಥೆ ಎಲ್ಲೆಡ ಹೋಗಬೇಕು. ಇದು ಎಲ್ಲರಿಗೂ ರೀಚ್ ಆಗಬೇಕು ಎನ್ನುವ ಕನಸು ರಿಷಬ್ ಶೆಟ್ಟಿಯವರದ್ದಾಗಿದೆ. ಈ ಹಿನ್ನೆಲೆಯಲ್ಲಿ ಕಾಂತಾರ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿಯೇ ತಯಾರಾಗಬೇಕು ಎಂದು ರಿಷಬ್ ಶೆಟ್ಟಿ ಕನಸು ಕಂಡಿದ್ದರು. ಕಾಂತಾರ ಕನ್ನಡ ಭಾಷೆಯಲ್ಲಿ ಸದ್ಯಕ್ಕೆ ರಿಲೀಸ್ ಆಗಿದೆ. ಸೆ.30 ನೇ ತಾರೀಖು ಚಿತ್ರ ರಿಲೀಸ್ ಆಗಿದೆ. ಅದಕ್ಕೂ ಮೊದಲೇ ಚಿತ್ರದ ಪ್ರಿಮಿಯರ್ ಶೋ ನಡೆದಿದೆ.

ಚಿತ್ರ ದಂತ ಕಥೆ ಇದಾಗಿದ್ದರೂ, ದೈವದ ಕಥೆ ಹೊಂದಿದೆ. ಈ ಒಂದು ಕಾರಣಕ್ಕೆ ಈ ಚಿತ್ರದ ಬಗ್ಗೆ ದೈವಿಕ ಮನೋಭಾವ ಕರಾವಳಿ ಭಾಗದಲ್ಲಿದೆ. ಬೇರೆ ಕಡೆಯೂ ಚಿತ್ರದ ಮೇಕಿಂಗ್ ಇಷ್ಟವಾಗಿದ್ದು, ಜನರು ಚಿತ್ರ ನೋಡಲು ಥಿಯೇಟರ್ ಕಡೆ ಹೆಜ್ಜೆ ಹಾಕಿದ್ದಾರೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!