ಕಾಂತಾರ ಸಿನಿಮಾದ ಒಂದು ಕೋಟಿ ಟಿಕೆಟ್ ಮಾರಾಟ ಆಗುವ ಮೂಲಕ ದಾಖಲೆ ನಿರ್ಮಿಸಿದೆ.
ಕಾಂತಾರ ಸಿನಿಮಾದ ಯಶಸ್ಸು ರಿಷಬ್ ಶೆಟ್ಟಿಯನ್ನು ಮತ್ತಷ್ಟು ಎತ್ತರಕ್ಕೆ ಕರೆದುಕೊಂಡು ಹೋಗುತ್ತಿದೆ. ಅವರು ಇಂದು ಜಾಗತಿಕ ಮಟ್ಟದಲ್ಲಿ ತಮ್ಮದೇ ಆದ ಹವಾ ಸೃಷ್ಟಿಸಿದ್ದಾರೆ. ನಾನಾ ಸಿನಿಮಾ ರಂಗದಿಂದ ಅವರಿಗೆ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ.
ಕೆಲ ದಿನಗಳ ಹಿಂದೆ ತೆಲುಗಿನಲ್ಲಿ ಸಿನಿಮಾ ಮಾಡುವಂತೆ ಅಲ್ಲು ಅರ್ಜುನ್ ತಂದೆ ಕೇಳಿಕೊಂಡಿದ್ದರು. ಬಾಲಿವುಡ್ ನಿಂದಲೂ ರಿಷಬ್ ಗೆ ಆಫರ್ ಬರುತ್ತಿವೆ.
ಈ ಬಗ್ಗೆ ಮಾತನಾಡಿರುವ ರಿಷಬ್ ಶೆಟ್ಟಿ, ‘ನನಗೆ ಬಾಲಿವುಡ್ ಮತ್ತು ತೆಲುಗು ಸಿನಿಮಾ ರಂಗದಿಂದ ಆಫರ್ ಬಂದಿದ್ದು ನಿಜ. ಆದರೆ ನಾನು ಎಲ್ಲಿಯೂ ಹೋಗುತ್ತಿಲ್ಲ. ಕನ್ನಡದಲ್ಲೇ ಮಾಡುವುದಕ್ಕೆ ತುಂಬಾ ಕೆಲಸಗಳಿವೆ. ಹಾಗಾಗಿ ಇಲ್ಲಿಯೇ ಇದ್ದುಕೊಂಡು ಸಿನಿಮಾ ಮಾಡುತ್ತೇನೆ. ಆ ಸಿನಿಮಾವನ್ನೇ ವಿವಿಧ ಸಿನಿಮಾ ರಂಗದ ಪ್ರೇಕ್ಷಕರು ನೋಡಲಿ ಎನ್ನುವುದು ನನ್ನಾಸೆ ಎಂದು ಹೇಳಿದ್ದಾರೆ.
ಕಾಂತಾರ ಸಿನಿಮಾ ಸೆಪ್ಟೆಂಬರ್ 30ರಂದು ತೆರೆಗೆ ಬಂದಿತ್ತು. ಕನ್ನಡ ಸೇರಿದಂತೆ ಇತರ ಭಾಷೆಗಳಲ್ಲಿ ಚಿತ್ರ ಈಗಲೂ ಉತ್ತಮವಾಗಿ ಓಡುತ್ತಿದೆ.
___

Be the first to comment