ಕಾಂತಾರ 1 ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆ

ಕಾಂತಾರ  1 ಅಕ್ಟೋಬರ್ 31ರಂದು ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗುತ್ತಿದೆ.

OTT ಬಿಡುಗಡೆ ದಿನಾಂಕವನ್ನು ಅಮೆಜಾನ್ ಪ್ರೈಮ್ ವಿಡಿಯೋ ಟೀಸರ್ ಮೂಲಕ ಘೋಷಿಸಿದೆ. . OTT ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಚಿತ್ರವನ್ನು “ಲೆಜೆಂಡರಿ” ಎಂದು ಕರೆಯುವ ಪೋಸ್ಟರ್ ಅನ್ನು ಹಂಚಿಕೊಂಡಿದೆ.

ಕಾಂತಾರ  1 ಚಿತ್ರ ಅಕ್ಟೋಬರ್ 31ರಿಂದ ಕನ್ನಡದಲ್ಲಿ ತಮಿಳು, ತೆಲುಗು ಮತ್ತು ಮಲಯಾಳಂ ಡಬ್ಬಿಂಗ್ ಆವೃತ್ತಿಗಳೊಂದಿಗೆ ಲಭ್ಯವಿರುತ್ತದೆ.  ಕಾಂತಾರ: ಅಧ್ಯಾಯ 1 ಪ್ರೈಮ್ ವಿಡಿಯೋದಲ್ಲಿ ಪ್ರಪಂಚದಾದ್ಯಂತ 200 ದೇಶಗಳು ಮತ್ತು ಪ್ರಾಂತ್ಯಗಳಲ್ಲಿ ಸ್ಟ್ರೀಮ್ ಆಗಲಿದೆ.

ಕಾಂತಾರ ಅಧ್ಯಾಯ 1ರ ಇಂಗ್ಲಿಷ್ ಆವೃತ್ತಿ ಅಕ್ಟೋಬರ್ 31 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಕಾಂತಾರ ಅಧ್ಯಾಯ 1 ಚಿತ್ರ 1000 ಕೋಟಿ ಕ್ಲಬ್ ಸೇರುತ್ತದೆ ಎಂದು ಭಾವಿಸಲಾಗಿತ್ತು. ಚಿತ್ರ OTT ಬಿಡುಗಡೆಯಾಗುತ್ತಿರುವುದರಿಂದ ಅದರ ಥಿಯೇಟ್ರಿಕಲ್ ಕಲೆಕ್ಷನ್ ಮೇಲೆ ಪರಿಣಾಮ ಬೀರಲಿದೆ.

ಕಾಂತಾರ ಅಧ್ಯಾಯ 1 ಹಿಂದಿಯಲ್ಲಿ 200 ಕೋಟಿ ಕೋಟಿ ನಿವ್ವಳ ಕ್ಲಬ್‌ಗೆ ಪ್ರವೇಶಿಸಿದ ವರ್ಷದ ಮೊದಲ ದಕ್ಷಿಣ ಭಾರತೀಯ ಚಿತ್ರ, ಕರ್ನಾಟಕದಲ್ಲಿ 200 ಕೋಟಿ ಗಡಿ ದಾಟಿದ ಮೊದಲ ಚಿತ್ರವಾಗಿದೆ.  ಕಾಂತಾರ ಅಧ್ಯಾಯ 1 ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ  25 ದಿನಗಳ ಒಟ್ಟು ಗಳಿಕೆ 589.5 ಕೋಟಿ ರೂಪಾಯಿ ದಾಡಿದೆ. ಕಾಂತಾರ ಅಧ್ಯಾಯ 1  ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಸಾರ್ವಕಾಲಿಕ ಚಿತ್ರವಾಗಿ ಹೊರಹೊಮ್ಮಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!