ಆಸ್ಟ್ರೇಲಿಯಾದಲ್ಲಿ ದಾಖಲೆ ಬರೆದ ‘ಕಾಂತಾರ ಚಾಪ್ಟರ್ 1’

ಆಸ್ಟ್ರೇಲಿಯಾದ ನೆಲದಲ್ಲಿ 2025ರಲ್ಲೇ ಅತಿ ಹೆಚ್ಚು  ಕಲೆಕ್ಷನ್ ಮಾಡಿದ ಭಾರತದ ಚಿತ್ರ ಎಂಬ ಹೆಗ್ಗಳಿಕೆ ‘ಕಾಂತಾರ ಚಾಪ್ಟರ್ 1′ ಚಿತ್ರಕ್ಕೆ ಸಿಕ್ಕಿದೆ.

ಈ ಬಗ್ಗೆ ಹೊಂಬಾಳೆ ಸಿನಿಮಾ ಮಾಹಿತಿ ನೀಡಿದೆ. ಆದರೆ ಎಷ್ಟು ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂಬ ಬಗ್ಗೆ ಅವರು ಮಾಹಿತಿ ನೀಡಿಲ್ಲ. ‘ಕಾಂತಾರ: ಚಾಪ್ಟರ್ 1’ ಸಿನಿಮಾ  ವಿಶ್ವದ 30 ದೇಶಗಳಲ್ಲಿ ಒಟ್ಟಿಗೆ ರಿಲೀಸ್ ಆಯಿತು.  ಆಸ್ಟ್ರೇಲಿಯಾದ ಕನ್ನಡಿಗರು ‘ಕಾಂತಾರ ಚಾಪ್ಟರ್ 1′ ಇಷ್ಟಪಟ್ಟು ವೀಕ್ಷಿಸಿದ್ದಾರೆ.

ಈ ಚಿತ್ರ ಕನ್ನಡ ಮಾತ್ರವಲ್ಲದೆ  ಇಂಗ್ಲಿಷ್ ಭಾಷೆಯಲ್ಲೂ ವೀಕ್ಷಣೆಗೆ ಲಭ್ಯವಿದೆ. ಹೀಗಾಗಿ ಆಸ್ಟ್ರೇಲಿಯಾ ಮಂದಿಯನ್ನು  ಈ ಸಿನಿಮಾ ಸೆಳೆದುಕೊಂಡಿದೆ.

ಈ ವರ್ಷ ಭಾರತದಲ್ಲಿ ಹಲವು ಸೂಪರ್ ಹಿಟ್ ಚಿತ್ರಗಳು ರಿಲೀಸ್ ಆದವು. ಈ ಎಲ್ಲಾ ದಾಖಲೆಗಳನ್ನು ‘ಕಾಂತಾರ: ಚಾಪ್ಟರ್ 1’ ಸಿನಿಮಾ ಮೀರಿಸಿದೆ. ರಿಷಬ್ ಶೆಟ್ಟಿ ಡೈರೆಕ್ಷನ್ ಮಾಡಿ, ಆಕ್ಟಿಂಗ್ ಮಾಡಿದ ‘ಕಾಂತಾರ ಚಾಪ್ಟರ್ 1’ ಬಾಕ್ಸ್ ಆಫೀಸ್‌ನಲ್ಲಿ ಎಲ್ಲಾ ದಾಖಲೆಗಳನ್ನೂ  ಬರೆಯೋಕೆ ಶುರು ಮಾಡಿದೆ.

ಕೇರಳದಲ್ಲಿಯೂ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಅಬ್ಬರಿಸುತ್ತಿದೆ.  ಸಿನಿಮಾ  55 ಕೋಟಿ ರೂಪಾಯಿ  ಕಲೆಕ್ಷನ್ ಮಾಡಿದೆ ಎಂದು ಚಿತ್ರತಂಡದವರು ಮಾಹಿತಿ ನೀಡಿದ್ದಾರೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!