‘ಕಾಂತಾರ ಚಾಪ್ಟರ್ 1′ ಡಿಜಿಟಲ್ ರೈಟ್ಸ್ 125 ಕೋಟಿ ರೂ.ಗೆ ಮಾರಾಟ ಆಗಿದೆ.
ಕಾಂತಾರಾ ಚಾಪ್ಟರ್ 1 ಡಿಜಿಟಲ್ ರೈಟ್ಸ್ ಅಮೆಜಾನ್ ಪ್ರೈಮ್ ವಿಡಿಯೋ ಪಾಲಾಗಿದೆ. ಕಾಂತಾರ ಚಾಪ್ಟರ್ 1’ ಬಿಡುಗಡೆ ಮುನ್ನವೇ ಸಾಕಷ್ಟು ಬ್ಯುಸಿನೆಸ್ ಮಾಡಿ ದೇಶದ ಬಾಕ್ಸ್ ಆಫೀಸ್ ನಲ್ಲಿ ಸಂಚಲನ ಸೃಷ್ಟಿಸಿದೆ.
‘ಕಾಂತಾರ ಚಾಪ್ಟರ್ 1’ ಅತಿದೊಡ್ಡ ಮೊತ್ತಕ್ಕೆ ಡಿಜಿಟಲ್ ರೈಟ್ಸ್ ಮಾರಾಟವಾದ ಎರಡನೇ ಕನ್ನಡ ಚಿತ್ರವಾಗಿದೆ. KGF ಚಾಪ್ಟರ್ 2 ಅತಿದೊಡ್ಡ ಮೊತ್ತಕ್ಕೆ ಡಿಜಿಟಲ್ ರೈಟ್ಸ್ ಮಾರಾಟವಾದ ಮೊದಲ ಚಿತ್ರವಾಗಿದೆ. ಇದು ಕೂಡಾ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾದ ಚಿತ್ರವಾಗಿದೆ.
2022 ರ ಬ್ಲಾಕ್‌ಬಸ್ಟರ್ ‘ಕಾಂತಾರ’ದ ಬಹು ನಿರೀಕ್ಷಿತ ಪ್ರಿಕ್ವೇಲ್ ನ್ನು ನಿರ್ದೇಶಕ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಪಕರಾದ ವಿಜಯ್ ಕಿರಗಂದೂರು ಮತ್ತು ಚಲುವೇಗೌಡ ಬಂಡವಾಳ ಹೂಡಿರುವ ಈ ಚಿತ್ರ, ಅಕ್ಟೋಬರ್ 2 ರಂದು ವಿಶ್ವದಾದ್ಯಂತ ಬಿಡುಗಡೆಗೆ ಸಜ್ಜಾಗಿದೆ.
ಸೆಪ್ಟೆಂಬರ್ 20 ರಂದು ಚಿತ್ರದ ಅಧಿಕೃತ ಟ್ರೈಲರ್ ಬಿಡುಗಡೆ ಮಾಡಲು ಚಿತ್ರ ತಂಡ ಯೋಜಿಸಿದೆ. ಚಿತ್ರದ ತಾಂತ್ರಿಕ ಕೆಲಸ ನಡೆಯುತ್ತಿದ್ದು, ಜಗತ್ತಿನಾದ್ಯಂತ ಸುಮಾರು 20 ವಿಷುಯೆಲ್ ಎಫೆಕ್ಟ್ ಕಂಪನಿಗಳು ತೊಡಗಿಸಿಕೊಂಡಿವೆ ಎಂದು ತಿಳಿದು ಬಂದಿದೆ.
—-





Be the first to comment