ಕಾಂತಾರ ಸಿನೆಮಾದ ನಾಯಕಿ ಫಿಕ್ಸ್

ನಿರ್ದೇಶಕ ರಿಷಬ್ ಶೆಟ್ಟಿ ಅವರ ಹೊಸ ಸಿನಿಮಾ ‘ಕಾಂತಾರ’ ದ ನಾಯಕಿಯಾಗಿ ‘ಪಾಪ್ ಕಾರ್ನ್ ಮಂಕಿ ಟೈಗರ್’ ಸಿನಿಮಾದ ನಟಿ ಸಪ್ತಮಿ ಗೌಡ ಆಯ್ಕೆ ಆಗಿದ್ದಾರೆ.

ರಿಷಬ್ ಶೆಟ್ಟಿ ಅವರ ಜೋಡಿ ಆಗಿ ಕಾಣಿಸಿಕೊಳ್ಳಲಿರುವ ಸಪ್ತಮಿ ಗೌಡ ಅವರು ನಟಿಸುತ್ತಿರುವ ಎರಡನೇ ಸಿನಿಮಾ ಇದಾಗಿದೆ. ಸುಕ್ಕಾ ಸೂರಿ ನಿರ್ದೇಶನದ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದ ಮೂಲಕ ಮೊದಲ ಬಾರಿಗೆ ತೆರೆಮೇಲೆ ಮಿಂಚಿದ್ದ ಸಪ್ತಮಿ ಗೌಡ ಅವರು ಧನಂಜಯ್ ಪತ್ನಿಯಾಗಿ ಕಾಣಿಸಿಕೊಂಡು ಅಭಿಮಾನಿಗಳ ಹೃದಯ ಗೆದ್ದಿದ್ದರು.

” ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾ ಬಳಿಕ ಉತ್ತಮ ಚಿತ್ರಕ್ಕಾಗಿ ಕಾಯುತ್ತಿದ್ದೆ. ನಿರ್ದೇಶಕ, ನಟ ರಿಷಬ್ ಶೆಟ್ಟಿ ಅವರ ಜೊತೆ ಕೆಲಸ ಮಾಡಲು ಉತ್ಸುಕಳಾಗಿದ್ದೇನೆ” ಎಂದು ಹೇಳಿದ್ದಾರೆ.
ಸಿನೆಮಾ ಪಾತ್ರದ ಬಗ್ಗೆ ಯಾವುದೇ ಗುಟ್ಟು ಬಿಟ್ಟುಕೊಡದ ಸಪ್ತಮಿ ಅವರು ಈಗ ಕಾಂತಾರ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗುವ ಖುಷಿಯಲ್ಲಿದ್ದಾರೆ.
ಈ ಸಿನಿಮಾದಲ್ಲಿ ಅಚ್ಯುತ್ ಕುಮಾರ್, ಕಿಶೋರ್, ಪ್ರಮೋದ್ ಶೆಟ್ಟಿ, ಸ.ಹಿ.ಪ್ರಾ ಶಾಲೆ ಕಾಸಗೋಡು ಚಿತ್ರದಲ್ಲಿ ಪ್ರವೀಣನ ಪಾತ್ರದಲ್ಲಿ ನಟಿಸಿದ್ದ ರಂಜನ್ ನಟಿಸಲಿದ್ದಾರೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ, ಅರವಿಂದ್ ಕಶ್ಯಪ್ ಛಾಯಾಗ್ರಾಹಣ ಇರಲಿದೆ.

ರಿಷಬ್ ಶೆಟ್ಟಿ ನಿರ್ದೇಶನದ ನಾಲ್ಕನೇ ಚಿತ್ರ ಆಗಿರುವ ಕಾಂತಾರ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದೆ. ಕರಾವಳಿ ಭಾಗದ ಪ್ರಮುಖ ಜಾನಪದ ಕ್ರೀಡೆ ಆಗಿರುವ ಕಂಬಳದ ಕುರಿತು ಕಥಾಹಂದರ ಹೊಂದಿರುವ ಮೊದಲ ಸಿನೆಮಾ ಇದಾಗಿರುವ ಕಾರಣ ಸಿನಿಮಾಸಕ್ತರು ಚಿತ್ರದ ಬಗ್ಗೆ ಸಾಕಷ್ಟು ಕುತೂಹಲ ತೋರಿಸುತ್ತಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!