ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಸಿನಿಮಾವನ್ನು 2023 ರ ಆಸ್ಕರ್ ನಾಮಿನೇಷನ್ಗೆ ಕಳುಹಿಸಲಾಗಿದೆ.
ಹೊಂಬಾಳೆ ಫಿಲ್ಮ್ಸ್ ನ ವಿಜಯ ಕಿರಗಂದೂರು, ಕಾಂತಾರ ಚಿತ್ರಕ್ಕಾಗಿ ಆಸ್ಕರ್‌ಗೆ ನಮ್ಮ ಅರ್ಜಿಯನ್ನು ಸಲ್ಲಿಸಿದ್ದೇವೆ. ಅಂತಿಮ ನಾಮನಿರ್ದೇಶನಗಳು ಇನ್ನೂ ಬರಬೇಕಾಗಿದೆ. ಕಾಂತಾರ ಕಥೆಯು ಎಷ್ಟು ಬೇರೂರಿದೆ ಎಂದರೆ ಅದು ಪ್ರಪಂಚದಾದ್ಯಂತ ಅರ್ಥಪೂರ್ಣವಾಗಿ ವ್ಯಾಪಿಸಲಿದೆ ಎಂದಿದ್ದಾರೆ.
ಕಾಂತಾರ ಸಿನಿಮಾದಲ್ಲಿ ನಟ ರಿಷಬ್ ಶೆಟ್ಟಿ, ಕಿಶೋರ್ ಕುಮಾರ್, ಅಚ್ಯುತ್ ಕುಮಾರ್, ಸಪ್ತಮಿ ಗೌಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಕಾಂತಾರ ಕನ್ನಡ ಅಲ್ಲದೇ ತೆಲುಗು, ಹಿಂದಿ, ತಮಿಳು ಮತ್ತು ಮಲಯಾಳಂನಲ್ಲಿ ಬಿಡುಗಡೆಯಾಗಿ ಹಿಟ್ ಎನಿಸಿತು.
ರಜನಿಕಾಂತ್ ಮತ್ತು ಕಮಲ್ ಹಾಸನ್ ಸೇರಿದಂತೆ ಅನೇಕ ಉದ್ಯಮದ ಸೆಲೆಬ್ರಿಟಿಗಳು ಸಾಮಾಜಿಕ ಮಾಧ್ಯಮದಲ್ಲಿ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಸಿನಿಮಾ ಈಗಾಗಲೇ ವಿಶ್ವದಾದ್ಯಂತ ₹500 ಕೋಟಿಗೂ ಹೆಚ್ಚು ಗಳಿಕೆ ಮಾಡಿ ಹಿಟ್ ಆಗಿದೆ.
___





Be the first to comment