ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಬ್ಲಾಕ್‌ಬಸ್ಟರ್ ಸಿನಿಮಾ ‘ಕಾಂತಾರ: ಚಾಪ್ಟರ್ 1’ ಆಸ್ಕರ್ ಫೈನಲ್ ನಾಮಿನೇಷನ್ ರೇಸ್‌ನಿಂದ ಹೊರ ಬಿದ್ದಿದೆ.
ರಿಷಬ್ ಶೆಟ್ಟಿ ಬರೆದು, ನಟಿಸಿ, ನಿರ್ದೇಶಿಸಿದ ‘ಕಾಂತಾರ: ಚಾಪ್ಟರ್ 1’ ಅತ್ಯುತ್ತಮ ಚಿತ್ರ ವಿಭಾಗದ ಸ್ಪರ್ಧೆಯಲ್ಲಿ ಸ್ಥಾನ ಪಡೆದುಕೊಂಡಿತ್ತು. ಅಂತಿಮ ನಾಮಿನೇಷನ್ಸ್ ಪಟ್ಟಿಯಲ್ಲಿ‘ಕಾಂತಾರ: ಚಾಪ್ಟರ್ 1’ ಸ್ಥಾನ ಪಡೆಯಲು ವಿಫಲವಾಗಿವೆ.
ರಿಷಬ್ ಶೆಟ್ಟಿ ಬರೆದು, ನಟಿಸಿ, ನಿರ್ದೇಶಿಸಿದ ‘ಕಾಂತಾರ: ಚಾಪ್ಟರ್ 1’ ಚಿತ್ರ ಸುಮಾರು 850 ಕೋಟಿ ರೂ.ಗೂ ಅಧಿಕ ವಹಿವಾಟು ನಡೆಸಿ ಜಾಗತಿಕ ಮಟ್ಟದಲ್ಲಿ ಮೆಚ್ಚುಗೆ ಪಡೆದಿತ್ತು. ಕಥೆ, ನಿರೂಪಣೆ, ಮೇಕಿಂಗ್, ಅಭಿನಯಕ್ಕಾಗಿ ಚಿತ್ರ ಪ್ರಶಂಸೆ ಗಳಿಸಿತ್ತು.
ಭಾರತದ ಮೊದಲ ಅನಿಮೇಶನ್ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾದ ‘ಮಹಾವತಾರ ನರಸಿಂಹ’ ಚಿತ್ರ ಅಂತಿಮ ಹಂತದಲ್ಲಿ ‘ಅತ್ಯುತ್ತಮ ಅನಿಮೇಟೆಡ್ ಫೀಚರ್ ಫಿಲ್ಮ್’ ವಿಭಾಗದಲ್ಲಿ ಆಸ್ಕರ್ ನಾಮಿನೇಷನ್ ಪಟ್ಟಿಯಿಂದ ಹೊರಬಿದ್ದಿದೆ.
ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ‘ಕಾಂತಾರ: ಚಾಪ್ಟರ್ 1’, ‘ಮಹಾವತಾರ ನರಸಿಂಹ’ ಚಿತ್ರಗಳು, ಭಾರತದ ‘ಹೋಮ್ಬೌಂಡ್’, ‘ತನ್ವಿ: ದಿ ಗ್ರೇಟ್’, ‘ದಶಾವತಾರ್’ ವಿಶ್ವದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯಾಗಿ ಗುರುತಿಸಿಕೊಂಡಿರುವ ಆಸ್ಕರ್ ರೇಸ್‌ನಲ್ಲಿ ಇದ್ದವು. ಅಂತಿಮ ನಾಮಿನೇಷನ್ಸ್ ಪಟ್ಟಿಯಲ್ಲಿ ಕನ್ನಡ ಚಿತ್ರಗಳು ಸ್ಥಾನ ಪಡೆಯಲು ವಿಫಲವಾಗಿವೆ.
ಈ ಬಾರಿ ಭಾರತದಿಂದ ಯಾವುದೇ ಡಾಕ್ಯುಮೆಂಟರಿ, ಶಾರ್ಟ್ ಫಿಲ್ಮ್ ಆಸ್ಕರ್ ನಾಮಿನೇಷನ್ ಪಟ್ಟಿಗೆ ಸೇರಿಲ್ಲ. ಆದರೆ ಭಾರತೀಯ ಮೂಲದ ಅಮೆರಿಕನ್ ನಿರ್ದೇಶಕಿ ಗೀತಾ ಗಂಭೀರ್ ನಿರ್ದೇಶನದ ‘ದಿ ಪರ್ಫೆಕ್ಟ್ ನೇಬರ್’ ಡಾಕ್ಯುಮೆಂಟರಿ ಆಸ್ಕರ್ ಫೈನಲ್ ನಾಮಿನೇಷನ್ ಸ್ಥಾನ ಪಡೆದುಕೊಂಡಿದೆ.
—-





Be the first to comment