ಕಾಂತಾರ

ಆಸ್ಕರ್‌ ಅಂಗಳದತ್ತ ಕಾಂತಾರ 1

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಕಾಂತಾರ ಚಾಪ್ಟರ್ 1 ನ್ನು ಆಸ್ಕರ್‌ಗೆ ನಾಮನಿರ್ದೇಶನಕ್ಕೆ ಕಳುಹಿಸಲು  ಹೊಂಬಾಳೆ ಫಿಲ್ಮ್ಸ್ ಉದ್ದೇಶಿಸಿದೆ.

ವಿಶಿಷ್ಟ ಭಾರತೀಯ ಕಥೆಯನ್ನು ಪ್ರಪಂಚದಾದ್ಯಂತ ಇರುವ ವೀಕ್ಷಕರಿಗೆ ಪರಿಚಯಿಸುವುದು ಮತ್ತು ಪ್ರಚಾರ ಮಾಡುವುದು ಹೊಂಬಾಳೆ ಫಿಲ್ಮ್ಸ್ ಗುರಿಯಾಗಿದೆ.

ಅಕ್ಟೋಬರ್ 2 ರಂದು ಬಿಡುಗಡೆಯಾದಾಗಿನಿಂದ ಕಾಂತಾರ: ಅಧ್ಯಾಯ 1 ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಗಳಿಕೆ ಕಾಣುತ್ತಾ ಸಾಗಿದೆ.  ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾದ ಈ ಚಿತ್ರವು ಕೇವಲ 14 ದಿನಗಳಲ್ಲಿ ವಿಶ್ವದಾದ್ಯಂತ 700 ಕೋಟಿ ರೂ.ಗಳಿಗೂ ಅಧಿಕ ಸಂಗ್ರಹಿಸಿದೆ.

2022ರಲ್ಲಿ ಬಿಡುಗಡೆಯಾದ  ಕಾಂತಾರ ಚಿತ್ರ  ಅತ್ಯುತ್ತಮ ಚಿತ್ರ ಮತ್ತು ಅತ್ಯುತ್ತಮ ನಟ ವಿಭಾಗಕ್ಕೆ ನಾಮನಿರ್ದೇಶನಗೊಂಡು ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿತ್ತು. ರಿಷಬ್ ಶೆಟ್ಟಿ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿಯನ್ನು ಗೆದ್ದರು. ಇದೀಗ ಕಾಂತಾರ: ಚಾಪ್ಟರ್ 1 ಕೂಡ ಅಂತರರಾಷ್ಟ್ರೀಯ ವೇದಿಕೆಯಲ್ಲಿ  ಮನ್ನಣೆಯನ್ನು ಉಳಿಸಿಕೊಳ್ಳುವ ಗುರಿಯನ್ನು ಹೊಂದಿದೆ.

ರಿಷಬ್ ಶೆಟ್ಟಿ ಜೊತೆಗೆ ಕನಕವತಿ ಪಾತ್ರದಲ್ಲಿ ರುಕ್ಮಿಣಿ ವಸಂತ್, ರಾಜ ರಾಜಶೇಖರ ಪಾತ್ರದಲ್ಲಿ ಜಯರಾಮ್, ಕುಲಶೇಖರ ಪಾತ್ರದಲ್ಲಿ ಗುಲ್ಶನ್ ದೇವಯ್ಯ ನಟಿಸಿದ್ದಾರೆ. ಕಾಂತಾರ ಚಾಪ್ಟರ್ 1 ಚಿತ್ರಕ್ಕೆ ಅರವಿಂದ್ ಕಶ್ಯಪ್ ಅವರ ಛಾಯಾಗ್ರಹಣ, ವಿನೇಶ್ ಬಾಂಗ್ಲನ್ ಅವರ ನಿರ್ಮಾಣ ವಿನ್ಯಾಸ, ಅಜನೀಶ್ ಲೋಕನಾಥ್ ಅವರ ಸಂಗೀತ ಸಂಯೋಜನೆ, ಪ್ರಗತಿ ಶೆಟ್ಟಿ ಅವರ ವೇಷಭೂಷಣ,  ಅರ್ಜುನ್ ರಾಜ್ ಮತ್ತು ಟೋಡರ್ ಲಜರೋವ್ ಅವರ ಸಾಹಸ, ಸುರೇಶ್ ಮಲ್ಲಯ್ಯ ಅವರ ಸಂಕಲನವಿದೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!