ರಿಶಬ್ ಶೆಟ್ಟಿ ನಟಿಸಿ ನಿರ್ದೇಶನ ಮಾಡಿರುವ ಕಾಂತಾರ 1 ಚಿತ್ರ ಬಿಡುಗಡೆ ಆದ ನಾಲ್ಕೇ ದಿನಕ್ಕೆ 335 ಕೋಟಿ ರೂಪಾಯಿ ಗೂ ಹೆಚ್ಚು ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ.
ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಚಿತ್ರವಾಗಿದ್ದ ಪ್ಯಾನ್ ಇಂಡಿಯಾ ಸಿನಿಮಾ ಕಂತಾರ 1 ಕಳೆದ ಗುರುವಾರ ಅ.2ರಂದು ಜಗತ್ತಿನಾದ್ಯಂತ ಸುಮಾರು 5 ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಬಿಡುಗಡೆಯಾದ ಎಲ್ಲಾ ಕಡೆ ಚಿತ್ರ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.
ಕಾಂತಾರ 1 ಜಗತ್ತಿನಾದ್ಯಂತ ಮೊದಲ ದಿನ 88 ಕೋಟಿ ರೂ.ಗಳಿಗೂ ಹೆಚ್ಚು ಕಲೆಕ್ಷನ್ ಮಾಡಿತ್ತು.ಶುಕ್ರವಾರ ಸುಮಾರು 64 ಕೋಟಿ ರೂ. ಗಳಿಕೆ ಕಂಡಿತು. ಶನಿವಾರ ಬಾಕ್ಸ್ ಆಫೀಸ್ನಲ್ಲಿ ಅಂದಾಜು 82 ಕೋಟಿ ರೂ.ಗಳನ್ನು ಗಳಿಸಿತ್ತು.
ಭಾನುವಾರ ಚಿತ್ರ ಭಾರತದಲ್ಲಿ ಅಂದಾಜು 50 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಮಾಡಿದೆ. ವಿದೇಶದಲ್ಲಿ 15 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.
ಸೋಮವಾರ ನಂತರ ಯಾವ ರೀತಿ ಚಿತ್ರ ಗಳಿಕೆ ಮಾಡಲಿದೆ ಎನ್ನುವುದು ಮುಖ್ಯವಾಗಲಿದೆ. ಸೋಮವಾರದಿಂದ ಕೂಡ ಚಿತ್ರ ದೇಶ, ವಿದೇಶಗಳಲ್ಲಿ ಹೆಚ್ಚಿನ ಗಳಿಕೆ ಮಾಡಿದರೆ ಚಿತ್ರ ಬ್ಲಾಕ್ ಬಸ್ಟರ್ ಹಿಟ್ ಎನಿಸಿಕೊಳ್ಳಲಿದೆ.
X ಮೂಲಕ ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲಂಸ್ ರವರಿಗೆ ವಿಭಿನ್ನವಾಗಿ ಅಭಿನಂದಿಸಿದ ಸಲಗ ವಿಜಯ್






Be the first to comment