ಕಾಂತಾರ ಚಾಪ್ಟರ್ 1 ಮುಂಗಡ ಬುಕಿಂಗ್‌ ಆರಂಭ

ಹೊಂಬಾಳೆ ಫಿಲ್ಮ್ಸ್  ನಿರ್ಮಿಸಿರುವ ಕಾಂತಾರ ಚಾಪ್ಟರ್ 1 ಚಿತ್ರದ  ಮುಂಗಡ ಬುಕಿಂಗ್ ಇಂದಿನಿಂದ  ಆರಂಭವಾಗಿದೆ.

ವಿಜಯ್ ಕಿರಗಂದೂರು ನಿರ್ಮಿಸಿರುವ ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ನಿರ್ದೇಶನ ಮತ್ತು ನಟಿಸಿದ್ದಾರೆ. ಸೆಪ್ಟೆಂಬರ್ 22 ರಂದು ಬಿಡುಗಡೆಯಾದ ಟ್ರೇಲರ್ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.

ಅಕ್ಟೋಬರ್ 2 ರಂದು ಕಾಂತಾರ ಚಾಪ್ಟರ್ 1 ಚಿತ್ರ  ಏಳು ಭಾಷೆಗಳಲ್ಲಿ 7,000ಕ್ಕೂ ಹೆಚ್ಚು ಪರದೆಗಳಲ್ಲಿ ವಿಶ್ವದಾದ್ಯಂತ  ಬಿಡುಗಡೆಯಾಗಲಿದೆ. ಅಕ್ಟೋಬರ್ 1 ರಂದು 2,500ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪೇಯ್ಡ್ ಪ್ರೀಮಿಯರ್‌ಗಳನ್ನು ನಿಗದಿಪಡಿಸಲಾಗಿದೆ. ಮುಂಗಡ ಬುಕಿಂಗ್  ಬುಕ್ ಮೈ ಶೋ ಆ್ಯಪ್ ಮೂಲಕ ಮಾಡಬಹುದು.

ನಮ್ಮ ಪರಂಪರೆಯ ದರ್ಶನಕ್ಕೆ ಟಿಕೆಟ್ ಬುಕ್ ಮಾಡಿ. ಕಾಯುವಿಕೆ ಕೊನೆಗೊಂಡಿದೆ. ಕರ್ನಾಟಕದಾದ್ಯಂತ ಕಾಂತಾರ: ಚಾಪ್ಟರ್ 1 ಚಿತ್ರಕ್ಕೆ ಅಡ್ವಾನ್ಸ್ ಬುಕಿಂಗ್ ಲಭ್ಯವಿದೆ ಎಂದು ಹೊಂಬಾಳೆ ಫಿಲ್ಮ್ಸ್,  ಎಕ್ಸ್‌  ಪೋಸ್ಟ್‌ನಲ್ಲಿ ತಿಳಿಸಿದೆ.

ರಿಷಬ್ ಶೆಟ್ಟಿ ಬೆರ್ಮೆ ಎಂಬ ಪಾತ್ರದಲ್ಲಿ, ರುಕ್ಮಿಣಿ ವಸಂತ ಕನಕಾವತಿಯಾಗಿ ಕಾಣಿಸಿಕೊಂಡಿದ್ದಾರೆ. ಗುಲ್ಶನ್ ದೇವಯ್ಯ ಕುಲಶೇಖರ ಪಾತ್ರದಲ್ಲಿ ನಟಿಸಿದ್ದಾರೆ. ಜಯರಾಮ್,  ಪ್ರಮೋದ್ ಶೆಟ್ಟಿ, ರಾಕೇಶ್ ಪೂಜಾರಿ, ಪ್ರಕಾಶ್ ತುಮಿನಾಡ್, ದೀಪಕ್ ರೈ ಪಣಾಜೆ  ನಟಿಸಿದ್ದಾರೆ.

ಚಿತ್ರಕ್ಕೆ ಅರವಿಂದ್ ಕಶ್ಯಪ್ ಅವರ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಅವರ ಸಂಗೀತ ಸಂಯೋಜನೆ, ಸುರೇಶ್ ಮಲ್ಲಯ್ಯ ಅವರ ಸಂಕಲನವಿದೆ.

 

Be the first to comment

Leave a Reply

Your email address will not be published. Required fields are marked *

Translate »
error: Content is protected !!