ಮಂಚು ಮನೋಜ್ ನಟನೆಯ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ‘ಕಣ್ಣಪ್ಪ’ ಸಿನಿಮಾದ ಎರಡು ಹಾರ್ಡ್ಡ್ರೈವ್ ಕಳುವಾಗಿವೆ.
ನೂರಾರು ಕೋಟಿ ಬಜೆಟ್ನ ಪೌರಾಣಿಕ ‘ಕಣ್ಣಪ್ಪ’ ಸಿನಿಮಾದ ಸಿನಿಮಾದ ವಿಎಫ್ಎಕ್ಸ್ ಕೆಲಸ ಮುಂಬೈನ ಎಚ್ಐವಿಇ ಸ್ಟುಡಿಯೋದಲ್ಲಿ ಮಾಡಿಸಲಾಗಿತ್ತು. ಬಳಿಕ ಎಚ್ಐವಿಇ ಸ್ಟುಡಿಯೋನವರು ಕೊರಿಯರ್ನಲ್ಲಿ ಎರಡು ಹಾರ್ಡ್ ಡಿಸ್ಕ್ಗಳನ್ನು ಹೈದರಾಬಾದ್ನ ಫಿಲಂ ನಗರ್ನ ಫೋರ್ ಫ್ರೇಮ್ಸ್ ಸ್ಟುಡಿಯೋಕ್ಕೆ ಕೊರಿಯರ್ ಮಾಡಿದ್ದಾರೆ. ಕೊರಿಯರ್ ನ್ನು ರಘು ಎಂಬ ವ್ಯಕ್ತಿ ಪಡೆದುಕೊಂಡಿದ್ದಾರೆ. ಆ ಹಾರ್ಡ್ ಡಿಸ್ಕ್ಗಳನ್ನು ರಘು ಎಂಬಾತ ಚರಿತಾ ಹೆಸರಿನ ಯುವತಿಗೆ ನೀಡಿದ್ದರಂತೆ. ಆದರೆ ಈಗ ಇಬ್ಬರೂ ಕಣ್ಮರೆಯಾಗಿದ್ದಾರೆ.
ಹೈದರಾಬಾದ್ನ ಫಿಲಂ ನಗರ್ ಪೊಲೀಸ್ ಠಾಣೆಯಲ್ಲಿ ‘ಕಣ್ಣಪ್ಪ’ ಸಿನಿಮಾದ ನಿರ್ಮಾಪಕರು ದೂರು ದಾಖಲಿಸಿದ್ದಾರೆ. ಅಗಂತುಕರು ಕಚೇರಿಗೆ ನುಗ್ಗಿ ಹಾರ್ಡ್ ಡ್ರೈವ್ಗಳನ್ನು ಎತ್ತಿಕೊಂಡು ಹೋಗಿದ್ದಾರೆ ಎಂದು ಆರೋಪಿಸಿದ್ದಾರೆ. ಫಿಲಂ ನಗರ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ರಘು ಹಾಗೂ ಚರಿತಾಗಾಗಿ ಹುಡುಕಾಟ ಆರಂಭವಾಗಿದೆ.
‘ಕಣ್ಣಪ್ಪ’ ಸಿನಿಮಾ ಬೇಡರ ಕಣ್ಣಪ್ಪ ಕತೆ ಆಧರಿಸಿದ್ದು ಸಿನಿಮಾದಲ್ಲಿ ಮಂಚು ಮನೋಜ್ ನಾಯಕ. ಸಿನಿಮಾ ನಿರ್ಮಾಣ ಮಾಡಿರುವುದು ಅವರ ತಂದೆ ಮೋಹನ್ಬಾಬು. ಚಿತ್ರೀಕರಣವನ್ನು ನ್ಯೂಜಿಲೆಂಡ್, ಹೈದರಾಬಾದ್ ಇನ್ನೂ ಹಲವು ಕಡೆ ಮಾಡಲಾಗಿದೆ. ಸಿನಿಮಾದಲ್ಲಿ ಪ್ರಭಾಸ್, ಬಾಲಿವುಡ್ ನಟ ಅಕ್ಷಯ್ಕುಮಾರ್, ಮೋಹನ್ಲಾಲ್ ನಟಿಸಿದ್ದಾರೆ.
ಕಳೆದ ವರ್ಷ ಬಿಡುಗಡೆ ಆಗಿದ್ದ ರಜನೀಕಾಂತ್ ನಟನೆಯ ‘ಲಾಲ್ ಸಲಾಂ’ ಸಿನಿಮಾದ ಹಾರ್ಡ್ ಡ್ರೈವ್ ಇದೇ ರೀತಿ ಕಣ್ಮರೆಯಾಗಿತ್ತು. ಭಾರಿ ಬಜೆಟ್ ಸಿನಿಮಾದ ಹಾರ್ಡ್ ಡ್ರೈವ್ ಕಾಣೆ ಆದ ಕಾರಣ ಸಿನಿಮಾಕ್ಕೆ ಹೊಡೆತ ಬಿತ್ತು.
—-

Be the first to comment