ಡಿಸೆಂಬರ್ 17ರಂದು ಕನ್ನಡಿಗ ರಿಲೀಸ್

ಕ್ರೇಜಿ ಸ್ಟಾರ್ ರವಿಚಂದ್ರನ್ ನಾಯಕರಾಗಿ ನಟಿಸಿರುವ ನಟಿಸಿರುವ “ಕನ್ನಡಿಗ” ಚಿತ್ರ ಡಿಸೆಂಬರ್ 17ರಂದು ಜೀ ಸಿನಿಮಾ ಕನ್ನಡ ಓಟಿಟಿಯಲ್ಲಿ ಬಿಡುಗಡೆಯಾಗಲಿದೆ.

ಈ ಚಿತ್ರವನ್ನು “ಜಟ್ಟ”, “ಮೈತ್ರಿ” ಚಿತ್ರ ಖ್ಯಾತಿಯ ಬಿ.ಎಂ.ಗಿರಿರಾಜ್ ಅವರು ನಿರ್ದೇಶಿಸಿದ್ದಾರೆ. ಸಿನಿಮಾದ ರಚನೆ ಕೂಡ ಗಿರಿರಾಜ್ ಅವರದ್ದೇ ಆಗಿದೆ.

ಓಂಕಾರ್ ಮೂವೀಸ್ ಲಾಂಛನದಲ್ಲಿ ಎನ್.ಎಸ್.ರಾಜಕುಮಾರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರದಲ್ಲಿ ರವಿಚಂದ್ರನ್ ಅವರ ಜೊತೆಗೆ ಪಾವನ, ಜೀವಿಕ, ಜಮ್ಮಿ ಅಲ್ಟರ್, ಬಾಲಾಜಿ ‌ಮನೋಹರ್,‌ ರಾಕ್ ಲೈನ್ ವೆಂಕಟೇಶ್, ಶೃಂಗ, ಮೈತ್ರಿ ಜಗ್ಗ ಮುಂತಾದವರು ನಟಿಸಿದ್ದಾರೆ.

ಚಿತ್ರಕ್ಕೆ ಕೆಜಿಎಫ್ ಖ್ಯಾತಿಯ ರವಿ ಬಸ್ರೂರ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಜಿ ಎಸ್ ವಿ ಸೀತರಾಮ ಅವರು ಸಿನಿಮಾಟೋಗ್ರಫಿ ಮಾಡಿದ್ದಾರೆ. ಅರ್ಜುನ್ ಕಿತ್ತು ಅವರ ಸಂಕಲನ ಚಿತ್ರಕ್ಕಿದೆ.

ದೃಶ್ಯ 2 ಚಿತ್ರದ ಯಶಸ್ಸಿನಲ್ಲಿ ಇರುವ ರವಿಚಂದ್ರನ್ ಅವರು ಈ ಚಿತ್ರದಲ್ಲಿ ಯಾವ ರೀತಿಯ ಪಾತ್ರ ಪೋಷಣೆ ಮಾಡಿದ್ದಾರೆ ಎನ್ನುವ ಕುತೂಹಲ ಪ್ರೇಕ್ಷಕರನ್ನು ಕಾಡಿದೆ. ಈ ಚಿತ್ರ ಚಿತ್ರಮಂದಿರಗಳಿಗೆ ಬಾರದೆ ಓಟಿಟಿಯಲ್ಲಿ ಬಿಡುಗಡೆಯಾಗುತ್ತಿದ್ದು, ಡಿಸೆಂಬರ್ 17ರಂದು ಪ್ರೇಕ್ಷಕರ ಕುತೂಹಲಕ್ಕೆ ತೆರೆ ಬೀಳಲಿದೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!