‘ಕನ್ನಡದ ಕೋಟ್ಯಾಧಿಪತಿ’ಯಲ್ಲಿ ಪವರ್ ಸ್ಟಾರ್

ನಾಯಕ, ಗಾಯಕ, ನಿರ್ಮಾಪಕ, ನಿರೂಪಕ ಹೀಗೆ ನಾನಾ ಕಲೆಗಳನ್ನು ಕರಗತ ಮಾಡಿಕೊಂಡಿರುವ ಪವರ್‍ಸ್ಟಾರ್ ಪುನೀತ್‍ರಾಜ್‍ಕುಮಾರ್ ಈಗ ಮತ್ತೆ ಕಿರುತೆರೆಯತ್ತ ಮುಖ ಮಾಡಿದ್ದಾರೆ.ಪುನೀತ್ ರಾಜ್‍ಕುಮಾರ್ ಅವರು ತಮ್ಮ ಮಾತಿನ ಚಾತುರ್ಯದಿಂದ ನಡೆಸಿಕೊಡುತ್ತಿದ್ದ ಕನ್ನಡದ ಕೋಟ್ಯಾಧಿಪತಿಯು ಸ್ಪರ್ಧಿಗಳನ್ನು ಉತ್ತೇಜಿಸಿ ಕೋಟಿ ರೂಪಾಯಿ ಗೆಲ್ಲುವಂತೆ ಉತ್ತೀಜಿಸಿದ್ದೇ ಅಲ್ಲದೆ ಮನೆಯಲ್ಲಿ ಕುಳಿತು ನೋಡುವ ಪ್ರೇಕ್ಷಕರು ಕೂಡ ಅಯ್ಯೋ ಈ ಪ್ರಶ್ನೆಗೆ ಅದೇ ಉತ್ತರ, ಆಪ್ಷನ್ ಬಿ ಯೇ ಸರಿಯಾದ ಉತ್ತರ, ಅಯ್ಯೋ ಇಷ್ಟು ಸುಲಭದ ಉತ್ತರವೂ ಅವನಿಗೆ ಗೊತ್ತಿಲ್ಲವೆ? ನಾನು ಕೂಡ ಕನ್ನಡದ ಕೋಟ್ಯಾಧಿಪತಿ ಭಾಗವಹಿಸಬಾರದೇ ಎಂಬ ನಾನಾ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತಿದ್ದರು.

ಹಾಲಿವುಡ್‍ನ ಹೂ ವಾಂಟ್ಸ್‍ಟು ಬಿ ಎ ಮಿಲಿಯನೇರ್ ಶೋ ಮಾದರಿಯ ಕಾರ್ಯಕ್ರಮವನ್ನು ಬಾಲಿವುಡ್‍ನಲ್ಲಿ ಕೌನ್‍ಬನೇಗಾ ಕರೋಡ್‍ಪತಿ ಎಂಬ ರೂಪದಲ್ಲಿ ಬರುತ್ತಿತ್ತು, ಇದನ್ನು ಕನ್ನಡಕ್ಕೆ ತರಬೇಕೆಂದಾಗ ಇದನ್ನು ಯಾರೂ ನಿರೂಪಿಸುವವರು ಎಂಬ ಪ್ರಶ್ನೆ ಮೂಡಿದಾಗ ಥಟ್ಟನೆ ಹೊಳೆದಿದ್ದೆ ಪುನೀತ್‍ರಾಜ್‍ಕುಮಾರ್ ಹೆಸರು.ಡಾ.ರಾಜ್‍ಕುಮಾರ್ ಅವರಂತೆ ಪುನೀತ್ ಕೂಡ ಹೆಚ್ಚಿನ ವಿದ್ಯಾಭ್ಯಾಸ ಮಾಡದಿದ್ದರೂ ಕೂಡ ಈ ಕಾರ್ಯಕ್ರಮಕ್ಕಾಗಿ ಸಾಕಷ್ಟು ತಾಲೀಮು ನಡೆಸಿ ಹಾಟ್ ಸೀಟ್‍ನಲ್ಲಿ ಕೂರುವ ಸ್ಪರ್ಧಿಗಳನ್ನು ಕಕ್ಕಾಬಿಕ್ಕಿ ಮಾಡುವಂತಿದ್ದರು. 2012ರಲ್ಲಿ ಮೊದಲ ಬಾರಿಗೆ ಕನ್ನಡದ ಕೋಟ್ಯಾಧಿಪತಿ ಶೋ ಆರಂಭಗೊಂಡಿತ್ತುಘಿ.

2 ಆವೃತ್ತಿಗಳನ್ನು ಪುನೀತ್ ನಡೆಸಿಕೊಟ್ಟರು, ಆದರೆ ಕಳೆದ ಸೀಸನ್ ಅವರು ಬ್ಯುಸಿಯಾಗಿದ್ದರಿಂದ ರಮೇಶ್ ಅರವಿಂದ್ ಅವರು ಆ ಕಾರ್ಯಕ್ರಮದ ನಿರೂಪಕರಾಗಿದ್ದರೂ ಟಿಆರ್‍ಪಿ ಕುಸಿದಿತ್ತು, ಆದ್ದರಿಂದ ಈಗ ಮತ್ತೆ ಪುನೀತ್‍ರಾಜ್‍ಕುಮಾರ್ ಅವರೇ ಈ ಕಾರ್ಯಕ್ರಮವನ್ನು ಹೋಸ್ಟ್ ಮಾಡುತ್ತಿದ್ದಾರೆ.ಕೋಟ್ಯಾಧಿಪತಿ ಸೀಸನ್ 4 ಕಾರ್ಯಕ್ರಮವು ಕಲರ್ಸ್ ಕನ್ನಡ ಚಾನಲ್‍ನಲ್ಲಿ ಇದೇ 22 ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ಪ್ರಸಾರವಾಗಲಿದೆ. ಮೊದಲ ಹಂತದಲ್ಲಿ 40 ಕಂತುಗಳು ಪ್ರಸಾರವಾಗುತ್ತವೆ.ಕಲರ್ಸ್ ವಾಹಿನಿಯ ಪರಮೇಶ್ ಗುಂಡ್ಕಲ್ ಮಾತನಾಡಿ, ದೂರದರ್ಶನವು ಈಗ ಮೂರ್ಖರ ಪೆಟ್ಟಿಗೆಯಾಗಿ ಉಳಿದಿಲ್ಲ. ಅದೀಗ ಜ್ಞಾನದ ಪೆಟ್ಟಿಗೆಯಾಗಿದೆ ಅಂದರು.

ಪುನೀತ್‍ರಾಜ್‍ಕುಮಾರ್ ಅವರು ಯಾವುದೇ ಪಕ್ಷಪಾತವಿಲ್ಲದೆ ಕಾರ್ಯಕ್ರಮಕ್ಕೆ ಮೆರುಗು ತರುತ್ತಾರೆ. ಈ ಕಾರ್ಯಕ್ರಮದ ಸ್ಪರ್ಧಿಗಳ ಆಯ್ಕೆ ಮಾಡುವ ಸಲುವಾಗಿ ನಾವು ಮೈಸೂರು, ದಾವಣಗೆರೆ, ಮಂಗಳೂರು, ಹುಬ್ಬಳ್ಳಿ ಮತ್ತು ಬೆಂಗಳೂರಿನಲ್ಲಿ ಸಂದರ್ಶನ ಮಾಡಿದೆವು ಎಂದು ಪರಮೇಶ್ ಹೇಳಿದರು.

ವಾಹಿನಿಯ ಮತ್ತೊಬ್ಬ ಮುಖ್ಯಸ್ಥ ರವೀಶ್‍ಕುಮಾರ್ ಮಾತನಾಡಿ, ಇಂಥಹ ಕಾರ್ಯಕ್ರಮಗಳಿಂದ ಪರಸ್ಪರ ಗೌರವ ಹೆಚ್ಚಾಗುತ್ತದೆ. ಜನರು ಏನನ್ನು ನಿರೀಕ್ಷಿಸುತ್ತಾರೋ ಅದನ್ನು ಕೊಡುವ ಪ್ರಯತ್ನ ಮಾಡುತ್ತಿದ್ದೇವೆ ಅಂದರು.ಕೋಟ್ಯಾಧಿಪತಿ ಕಾರ್ಯಕ್ರಮವು ವಿವಿಧ ಭಾಷೆಗಳಲ್ಲಿ ಇದುವರೆಗೆ 1800 ಕಂತುಗಳ ಪ್ರಸಾರ ಕಂಡಿದೆ. ಇಂಥಹ ಪ್ರೊಗ್ರಾಂನಿಂದ ಜ್ಞಾನ ವೃದ್ಧಿ ಆಗುತ್ತದೆ. ತಂತ್ರಜ್ಞಾನವು ನಮಗೆ ನೆರವಾಗಿದೆ ಎಂದು ಇಂದ್ರನೀಲ್ ಚಕ್ರವರ್ತಿ ಹೇಳಿದರು.

ಅಮಿತಾಭ್‍ಬಚ್ಚನ್ ಅವರು ನಡೆಸಿಕೊಡುವ ಕೌನ್‍ಬನೇಗಾ ಕರೋಡ್‍ಪತಿ ಕಾರ್ಯಕ್ರಮವನ್ನು ನಮ್ಮ ತಂದೆ ನೋಡುತ್ತಿದ್ದರು. ನನಗೆ ಕಾರ್ಯಕ್ರಮ ನಿರೂಪಣೆ ಮಾಡುವ ಅವಕಾಶ ಬಂದಾಗ ಅಮ್ಮ, ಶಿವಣ್ಣ ಮತ್ತು ರಾಘಣ್ಣ ನನಗೆ ಸಪೋರ್ಟ್ ಮಾಡಿದರು ಎಂದು ಪುನೀತ್‍ರಾಜ್‍ಕುಮಾರ್ ಹೇಳಿದರು. ಈ ಬಾರಿಯ ಕೋಟ್ಯಾಧಿಪತಿ ಯಾರಾಗುತ್ತಾರೆ ಎಂಬುದನ್ನು ನೋಡಲು ಮತ್ತಷ್ಟು 40 ಕಂತುಗಳ ಕಾಲ ಕಾಯಲೇಬೇಕು.

This Article Has 1 Comment
  1. Pingback: Devops outsourcing

Leave a Reply

Your email address will not be published. Required fields are marked *

Translate »
error: Content is protected !!