ಕನ್ನಡಕ್ಕೆ ಮರಳಿದ ಶೃತಿ ಹರಿಹರನ್

ನಟಿ ಶೃತಿ ಹರಿಹರನ್ ಹೆಡ್ ಬುಷ್ ಸಿನಿಮಾದ ಮೂಲಕ ಕನ್ನಡ ಚಿತ್ರಕ್ಕೆ ಮತ್ತೆ ಮರಳಿದ್ದಾರೆ.

ಕೆಲ ಸಮಯ ಬ್ರೇಕ್ ತೆಗೆದುಕೊಂಡಿದ್ದ ಶೃತಿ ಹರಿಹರನ್ ಈ ಸಿನಿಮಾದ ಮೂಲಕ ಕಮ್ ಬ್ಯಾಕ್ ಮಾಡಿದ್ದಾರೆ. ಅವರು ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ ಎಂದು ಚಿತ್ರತಂಡ ತಿಳಿಸಿದೆ.

ಶ್ರುತಿ ಹರಿಹರನ್ ಅವರು ಚಿತ್ರತಂಡ ಸೇರಿರುವ ಕಾರಣ ಹೆಡ್ ಬುಷ್ ಸಿನಿಮಾದ ಮೇಲಿನ ನಿರೀಕ್ಷೆ ಹೆಚ್ಚಾಗಿದೆ.
ಇದೇ ವೇಳೆ ಕಪಟ ನಾಟಕ ಸೂತ್ರಧಾರಿ, ಹುಲಿರಾಯ ಸಿನಿಮಾ ಖ್ಯಾತಿಯ ಬಾಲು ನಾಗೇಂದ್ರ ಅವರು ಹೆಡ್ ಬುಷ್ ತಂಡ ಸೇರಿದ್ದು, ಅವರು ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ.

ಇತ್ತೀಚೆಗಷ್ಟೇ ಲೂಸ್ ಮಾದ ಯೋಗಿ, ವಸಿಷ್ಠ ಸಿಂಹ ಅವರು ಈ ಸಿನಿಮಾ ತಂಡ ಸೇರಿಕೊಂಡಿದ್ದರು. ಈಗಾಗಲೇ ಪಾಯಲ್‌ ರಜಪೂತ್ ಈ ಸಿನಿಮಾದ ನಾಯಕಿಯಾಗಿ ಆಯ್ಕೆ ಆಗಿದ್ದಾರೆ.

ಚಿತ್ರಕ್ಕೆ ಅಗ್ನಿ ಶ್ರೀಧರ್ ಸ್ಕ್ರಿಪ್ಟ್ ಬರೆದಿದ್ದಾರೆ. ಶೂನ್ಯ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಡಾಲಿ ಧನಂಜಯ ಅವರು ಜಯರಾಜ್ ಪಾತ್ರ ಮಾಡುವುದರ ಜೊತೆಗೆ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.

ಬೆಂಗಳೂರಿನ ಅಂಡರ್ ವರ್ಲ್ಡ್ ಡಾನ್ ಆಗಿದ್ದ ಎಂಪಿ ಜಯರಾಜ್ ಅವರ ಜೀವನ ಆಧರಿಸಿ ಈ ಸಿನಿಮಾ ನಿರ್ಮಾಣ ಮಾಡಲಾಗುತ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತಯಾರಿಸುತ್ತಿದ್ದು, ಎರಡು ಭಾಗದಲ್ಲಿ ಚಿತ್ರ ಬಿಡುಗಡೆ ಆಗಲಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!