ಬಿಸಿನಿಮಾಸ್. ಇನ್ ಚಿತ್ರ ವಿಮರ್ಶೆ : ಕನ್ನಡ ಅಂದ್ರೆ ಇಷ್ಟೇನಾ?
ರೇಟಿಂಗ್ – 2/5
ಚಿತ್ರ – ಕನ್ನಡ್_ಗೊತ್ತಿಲ್ಲ
ತಾರಾಗಣ – ಹರಿಪ್ರಿಯಾ,ಸುಧಾರಾಣಿ,ಮಯೂರ ರಾಘವೇಂದ್ರ,ಧರ್ಮಣ್ಣ,ಪವನ್
ನಿರ್ದೇಶಕರು – ಮಯೂರ ರಾಘವೇಂದ್ರ
ನಿರ್ಮಾಪಕರು – ಕುಮಾರ ಕಂಠೀರವ
ಸಂಗೀತ ನಿರ್ದೇಶನ – ನಕುಲ್ ಅಭಯಂಕರ್
ವಿಮರ್ಶೆ 👇
ಕನ್ನಡ ಪರ ಹೋರಾಟಗಾರರಲ್ಲಿ ಯಾರು ಅಸಲಿ, ಯಾರು ನಕಲಿ ಎಂಬ ದಂದ್ವದಲ್ಲಿರಬೇಕಾದ ಸಂದರ್ಭದಲ್ಲಿಯೇ.. ಅಲ್ಲಿ ಇಲ್ಲೊಂದು ಕನ್ನಡತನವನ್ನು ಸಾರುವ ಚಿತ್ರಗಳು ಬಿಡುಗಡೆಯಾಗುತ್ತಲೇ ಇರುತ್ತವೆ. ಅಂತಹ ಚಿತ್ರಗಳ ಸಾಲಿಗೆ ಸೇರುವ ಚಿತ್ರ ‘ಕನ್ನಡ್ ಗೊತ್ತಿಲ್ಲ’. ಕನ್ನಡನೆಲದಲ್ಲಿದ್ದುಕೊಂಡೇ ಕನ್ನಡವನ್ನು ಕಲಿಯುವ ಪ್ರಯತ್ನವನ್ನು ಮಾಡದೆ, ಅದರಿಂದ ಪರಭಾಷಿಗರು ಅನುಭವಿಸಬೇಕಾದ ಕಷ್ಟಗಳೇನು.. ಇನ್ನೊಂದು ರೀತಿಯಲ್ಲಿ ಪರಭಾಷಿಕರು ಕನ್ನಡ ಕಲಿತರೆ ಅದರಿಂದ ಆಗುವ ಪ್ರಯೋಜನಗಳೇನು ಎಂಬುದನ್ನು ಡಿಟೈಲ್ ಆಗಿ ಹೇಳಿದ್ದಾರೆ ಡೈರೆಕ್ಟರ್ ಮಯೂರ ರಾಘವೇಂದ್ರ.
ಕನ್ನಡ ಆಪತ್ತಿನಲ್ಲಿದೆ.. ಇದನ್ನು ಸರಿಪಡಿಸುವ ದಾರಿಯಾವುದು.. ಕನ್ನಡ ನೆಲದಲ್ಲಿಯೇ ಕನ್ನಡದ ಮೇಲೆ ನಡೆಯುತ್ತಿರುವ ಅನ್ಯಭಾಷಿಗರ ಗ್ಯಾಂಗ್‍ರೇಪ್‍ನ ಸಿಕ್ರೇಟ್‍ಗಳನ್ನು ರೋಚಕವಾಗಿ ರಿವೀಲ್ ಮಾಡುವ ಮಯೂರ್.. ಕನ್ನಡಾಂಬೆಯ ಸೇವೆಗಾಗಿ ಅನ್ಯಭಾಷಿಗರನ್ನು ಮರ್ಡರ್ ಮಾಡಲೂ ಹೇಸುವುದಿಲ್ಲ! ಸಿನಿಮಾದಲ್ಲಿ ಕಮರ್ಶಿಯಲ್ ಕಂಟೆಂಟ್‍ಗಾಗಿ ಕನ್ನಡಿಗರ ಕೈಯಲ್ಲಿ ಅನ್ಯಭಾಷಿಗರನ್ನು ಮರ್ಡರ್ ಮಾಡಿಸುವುದರ ಮೂಲಕ ಕನ್ನಡವನ್ನು ಉಳಿಸಬಹುದು.. ಅನ್ನುವ ಮಯೂರ್ ಅವರ ಥಾಟ್‍ಕೆ ‘ಜೈ ಕನ್ನಡ’ ಅನ್ನಲೇಬೇಕು!
ಕನ್ನಡಾಂಭೆಯ ರಕ್ಷಣೆಯೇ ತನ್ನ ಬದುಕಿನ ಧೇಯ್ಯ ಅಂದುಕೊಂಡ ಕಾನ್ಸ್‍ಟೇಬಲ್‍ನ ಆಂತರಿಕ ತಳಮಳ.. ಪರಭಾಷಿಕನ ಕಿಡ್ನಾಪ್ ಹಂತದಲ್ಲಿ ಧಡಕ್ಕನೆ ಎಂದುರಾಗುವ ರೋಚಕ ತಿರುವುಗಳು ಚಿತ್ರದ ಬಗ್ಗೆ ನಿರೀಕ್ಷೆ ಹುಟ್ಟಿಸುವುದು ಸುಳ್ಳಲ್ಲ. ಆದರೆ, ಆ ನಿರೀಕ್ಷೆಗಳು ಸ್ವಲ್ಪ ಹೊತ್ತಿನಲ್ಲೇ ಸುಳ್ಳಾಗಿ ಬಿಡುತ್ತವೆ. ಕಾರಣ, ಚಿತ್ರದ ಪ್ಲಾಟ್‍ಗೆ ಸಂಬಂಧವಿಲ್ಲದ ಸಂಗತಿಗಳು ಒಂದೊಂದಾಗೆ ಶುರುವಾಗುತ್ತವೆ. ಚಿತ್ರ ರಿವಸ್೯ ಗೆರ್ ಗೆ ಶಿಫ್ಟ್ ಆಗಿ ನೋಡುಗ ಥಿಯೇಟರ್ ಸ್ಕ್ರೀನ್‍ನಿಂದ ಮೊಬೈಲ್ ಸ್ಕ್ರೀನ್‍ಗೆ ಶಿಫ್ಟ್ ಆಗುತ್ತಾನೆ. ಮಯೂರ್ ಹೊಸೆದ ಸ್ಕ್ರೀನ್‍ಪ್ಲೇ ವ್ಯಾಲ್ಯೂ ಕಳೆದು ಕೊಳ್ಳ ತೊಡಗುತ್ತದೆ.
ಪಾತ್ರಗಳ ಬಾಯಲ್ಲಿ ಬರುವ ಡೈಲಾಗ್‍ಗಳು ಜಸ್ಟ್ ಲ್ಯಾಗ್‍ಗಳು ಅನ್ನಿಸತೊಡಗುತ್ತದೆ. ಚಿತ್ರದ ಕೊನೆಯಲ್ಲಿ ಏನು ಹೇಳಬೇಕು ಎಂಬ ಸ್ಪಷ್ಟತೆಯಿಲ್ಲದ ಮಯೂರ್ ತಾನೂ ಕನ್ಫ್ಯೂಸ್ ಆಗಿ ನೋಡುಗನನ್ನೂ ಕನ್ಫ್ಯೂಸ್ ಮಾಡಿ ಬಿಡುತ್ತಾರೆ. ಚಿತ್ರದ ಕೊನೆಯಲ್ಲಿ ಚಿತ್ರದ ಕಥೆಯ ಬಗ್ಗೆ ಕ್ಲಾರೀಟಿ ಸಿಗದ ಪ್ರೇಕ್ಷಕ ‘ಇವ್ರಿಗೆ.. ಸಿನ್ಮಾ ಗೊತ್ತಿಲ್ಲ’ ಎಂದು ಗೊಣಗುತ್ತಾನೆ.
ಇನ್ನು, ಪರ್‍ಫಾಮೆನಸ್ ವಿಚಾರಕ್ಕೆ ಬರೋದಾದರೆ.. ದಿಟ್ಟ ಪೋಲಿಸ್ ಅಧಿಕಾರಿಯಾಗಿ ಹರಿಪ್ರಿಯಾ ಪಾತ್ರವೇ ತಾನಾಗುವುದರಲ್ಲಿ ಸೋತಿದ್ದಾರೆ. ಕೇವಲ ಹಳದಿ-ಕೆಂಪು ಸೀರೆ ಉಟ್ಕೊಂಡು ಗನ್ ಹಿಡ್ಕೊಂಡ್ರೆ ಸಾಕೇ? ಈ ಹಿಂದೆ ಇವರದೇ ಚಿತ್ರ ‘ಡಾಟರ್ ಆಪ್ ಪಾರ್ವತಮ್ಮ’ ಚಿತ್ರ ನೀವು ನೋಡಿದ್ದರೆ ನಿಮ್ಗೆ ಹೆಚ್ಚು ಹೇಳಬೇಕಾಗಿಲ್ಲ. ಹರಿಪ್ರಿಯಾ ಅವರ ಏಕಾತನಾತೆಯೆ ನಟನೆಯ ಮಧ್ಯೆ, ಪವನ್‍ಕುಮಾರ್ ಮತ್ತು ಧರ್ಮಣ್ಣ ರಿಲೀಫ್ ನೀಡುತ್ತಾರೆ. ಪೋಸ್ಟರ್‍ನಲ್ಲಿದ್ದಷ್ಟು ಸ್ಪೇಸ್ ಸ್ಕ್ರೀನ್‍ನಲ್ಲಿ ಸುಧಾರಾಣಿಯವರಿಗಿಲ್ಲ. ಛಾಯಾಗ್ರಾಹಕ ಗಿರಿಧರ್ ದಿವಾನ್, ದಿವಾನ ಬಿಟ್ಟು ಇನ್ನೊಂದಿಷ್ಟು ಹೋಮ್‍ವರ್ಕ್ ಮಾಡೋದು ಬೆಸ್ಟ್. ನಕುಲ್ ಭಯಂಕರ್ ಅವರ ಭಯಂಕರ ಸಂಗೀತ ಹತ್ತರಲ್ಲಿ ಒಂದು ಅಷ್ಟೇ. ಇಷ್ಟೂ ಹೇಳಿದಮೇಲೂ ಕನ್ನಡ ‘ಓ’ರಾಟಗಾರರು ನೀವಾಗಿದ್ದರೆ ಒಮ್ಮೆ ಚಿತ್ರ ನೋಡಿ ಸಂತಸಪಡಬಹದು. ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ!
@ಬಿಸಿನಿಮಾಸ್.ಇನ್
XA
Pingback: คาสิโน
Pingback: 1actress