ಕನ್ನಡ್​ ಗೊತ್ತಿಲ್ಲ ಸಿನಿಮಾ ನೋಡಿದ ಸೆಲೆಬ್ರೆಟಿಗಳು!

ಮಯೂರ ರಾಘವೇಂದ್ರ ನಿರ್ದೇಶನದ ಕನ್ನಡ್​ ಗೊತ್ತಿಲ್ಲ ಸಿನಿಮಾ ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣ್ತಿದೆ. ಕನ್ನಡ ಭಾಷಾಭಿಮಾನದ ಕಥೆಯನ್ನ ಬಹಳ ವಿಭಿನ್ನವಾಗಿ ಹೇಳಿರುವ ಚಿತ್ರತಂಡದ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಗ್ತಿದೆ. ಇತ್ತೀಚೆಗೆ ಚಂದನವನದ ತಾರೆಯರು ಕನ್ನಡ್​ ಗೊತ್ತಿಲ್ಲ ಸಿನಿಮಾ ನೋಡಿ ಸಂತಸ ಹಂಚಿಕೊಂಡರು.

ಸ್ಯಾಂಡಲ್​ವುಡ್​ ಬ್ಯೂಟಿ ಕ್ವೀನ್​ ಹರಿಪ್ರಿಯಾ ಲೀಡ್​ ರೋಲ್​ನಲ್ಲಿ ಮಿಂಚಿರೋ ಸಿನಿಮಾ ಕನ್ನಡ್​ ಗೊತ್ತಿಲ್ಲ. ರಾಜ್ಯಕ್ಕೆ ಬರೋ ಪರಭಾಷಿಕರು ಕನ್ನಡ ಭಾಷೆ ಕಲಿಯಬೇಕು ಅನ್ನೋ ಸಂದೇಶ ಹೊತ್ತು ಬಂದಿರೋ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್​ ಸಿಕ್ತಿದೆ. ಭಾಷಾಭಿಮಾನದ ಕಥೆಗೆ ಸಸ್ಪೆನ್ಸ್​​​​ ಥ್ರಿಲ್ ಟಚ್​ ಕೊಟ್ಟು ಚಿತ್ರವನ್ನು ಕಟ್ಟಿಕೊಟ್ಟಿದ್ದು, ಪವನ್​, ಧರ್ಮಣ್ಣ, ಸುಧಾರಾಣಿ ಚಿತ್ರದ ಪ್ರಧಾನ ಪಾತ್ರವರ್ಗದಲ್ಲಿದ್ದಾರೆ.ಇತ್ತೀಚೆಗೆ ಕನ್ನಡ್​ ಗೊತ್ತಿಲ್ಲ ಚಿತ್ರದ ಸೆಲೆಬ್ರೆಟಿ ಶೋ ನಡೀತು. ನಟ ವಿಜಯ್​ ರಾಘವೇಂದ್ರ, ಮದರಂಗಿ ಕೃಷ್ಣ, ನಟಿಯರಾದ ಮಿಲನಾ, ರೂಪಿಕಾ, ಕವಿತಾ, ಕರವೇ ನಾರಾಯಣ ಗೌಡ ಸೇರಿದಂತೆ ಸಾಕಷ್ಟು ಜನ ಸಿನಿಮಾ ನೋಡಿ ಖುಷಿಪಟ್ರು. ಚಿತ್ರತಂಡದ ಪ್ರಯತ್ನಕ್ಕೆ ಮೆಚ್ಚುಗೆ ಸೂಚಿಸಿದರು.

ನಿಧಾನವಾಗಿ ಕನ್ನಡ್​​ ಗೊತ್ತಿಲ್ಲ ಸಿನಿಮಾ ಕನ್ನಡ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೀತಿದೆ. ಚಿತ್ರಕ್ಕೆ ಮತ್ತಷ್ಟು ಸಕ್ಸಸ್​​ ಸಿಗಲಿ ಅಂತ ಆಶಿಸೋಣ.

Be the first to comment

Leave a Reply

Your email address will not be published. Required fields are marked *

Translate »
error: Content is protected !!