ಕೆಜಿಎಫ್ 3 ನಿರ್ಮಾಣಕ್ಕೆ ಒತ್ತಾಯ

ಕೆಜಿಎಫ್ 2 ಚಿತ್ರದ ಯಶಸ್ಸಿನಲ್ಲಿರುವ ಚಿತ್ರತಂಡಕ್ಕೆ ಮೂರನೇ ಭಾಗ ನಿರ್ಮಿಸುವಂತೆ ಅಭಿಮಾನಿಗಳಿಂದ ಒತ್ತಾಯ ಹೆಚ್ಚಾಗುತ್ತಿದೆ.

ಕೆಜಿಎಫ್ 2 ಚಿತ್ರದಲ್ಲಿ ಮೂರನೇ ಭಾಗದ ಬಗ್ಗೆ ಸುಳಿವು ಸಿಗುತ್ತಿದೆ. ಮೂರನೇ ಭಾಗ ಇನ್ನಷ್ಟು ಅದ್ಧೂರಿಯಾಗಿ ನಿರ್ಮಿಸುವಂತೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಒತ್ತಾಯ ಶುರು ಮಾಡಿದ್ದಾರೆ. ಎರಡನೇ ಭಾಗದಲ್ಲಿ ಉತ್ತರ ಸಿಗದ ಹಲವು ಪ್ರಶ್ನೆಗಳಿಗೆ ಮೂರನೇ ಭಾಗದಲ್ಲಿ ಉತ್ತರ ನೀಡಿ ಎಂದು ಆಗ್ರಹ ಮಾಡುತ್ತಿದ್ದಾರೆ.

ಸದ್ಯ ನಿರ್ದೇಶಕ ಪ್ರಶಾಂತ್ ನೀಲ್ ಇದೀಗ ಸಲಾರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಬಳಿಕ ಮತ್ತೊಂದಷ್ಟು ಸಿನಿಮಾಗಳನ್ನು ಮಾಡುವ ಯೋಜನೆ ಹೊಂದಿದ್ದಾರೆ ಎನ್ನಲಾಗಿದೆ. ಕೆಜಿಎಫ್ ಮೂರನೇ ಭಾಗ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ. ಅಭಿಮಾನಿಗಳ ಬೇಡಿಕೆಯನ್ನು ಹೊಂಬಾಳೆ ಫಿಲಂಸ್ ಯಾವ ರೀತಿ ಪ್ರತಿಕ್ರಿಯೆ ನೀಡುತ್ತದೆ ಎಂದು ಕಾದು ನೋಡಬೇಕಿದೆ.
“ಕೆಜಿಎಫ್ ಸಬ್ಜೆಕ್ಟ್ ತುಂಬಾ ದೊಡ್ಡದು. ಇದನ್ನು ಒಂದೇ ಭಾಗದಲ್ಲಿ ಹೇಳಿ ಮುಗಿಸಲಾಗದು ಎನಿಸಿತ್ತು. ಹೀಗಾಗಿ ಎರಡನೇ ಭಾಗವಾಗಿ ಸಿನಿಮಾ ಮಾಡಿದೆವು. ಆದರೆ ಈಗ ಮೂರನೇ ಭಾಗ ಮಾಡುವ ಯೋಜನೆಯಿಲ್ಲ “ಎಂದು ಪ್ರಶಾಂತ್ ನೀಲ್ ಹೇಳಿದ್ದಾರೆ.

ಕೆಜಿಎಫ್ 2 ಚಿತ್ರ ಕನ್ನಡ ಮಾತ್ರವಲ್ಲದೆ, ತೆಲುಗು, ಮಲಯಾಳಂ, ಹಿಂದಿಯಲ್ಲೂ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಸಾಲು ಸಾಲು ರಜೆ ಇರುವ ಕಾರಣ ಜನರು ಥಿಯೇಟರ್ ಕಡೆಗೆ ಹೆಚ್ಚು ಬರುತ್ತಿದ್ದಾರೆ.
ಸಿನಿಮಾ ಜಗತ್ತಿನಾದ್ಯಂತ 10 ಸಾವಿರಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ರಿಲೀಸ್ ಆಗಿದೆ.
ಸಿನಿಮಾವನ್ನು ಪ್ರಶಾಂತ್ ನೀಲ್ ನಿರ್ದೇಶಿಸಿದ್ದಾರೆ. ಯಶ್ ಜೊತೆಗೆ ಸಂಜಯ್ ದತ್, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ, ಪ್ರಕಾಶ್ ರೈ, ಅಚ್ಯುತ್ ಕುಮಾರ್ ಸೇರಿದಂತೆ ಹಲವರು ನಟಿಸಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!