Kannnajaru Movie : ‘ಕಣಂಜಾರು’ ಟೀಸರ್ ಮೆಚ್ಚಿದ ಚಂದನವನ!

ಆರ್ ಪಿ ಫಿಲ್ಮ್ಸ್ ಬ್ಯಾನರ್ ಅಡಿ ಆರ್.ಬಾಲಚಂದ್ರ ನಿರ್ಮಿಸಿ, ನಿರ್ದೇಶಿಸಿರುವ “ಕಣಂಜಾರು” ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಆರ್ ಪಿ ಫಿಲಂಸ್ ಯೂ ಟ್ಯೂಬ್ ಚಾನಲ್ ನಲ್ಲಿ ಟೀಸರ್ ಬಿಡುಗಡೆ ಆಗಿದೆ. ಈಗ ಟೀಸರ್ ಬಿಡುಗಡೆ ಮಾಡಿರುವ ಚಿತ್ರತಂಡಕ್ಕೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಆರಂಭದಲ್ಲಿ, ನಾನು ನಿರ್ದೇಶನದ ಜವಾಬ್ದಾರಿಯನ್ನು ಬೇರೆಯವರಿಗೆ ವಹಿಸಿದ್ದೆ, ಆದರೆ ಯೋಜನೆಗಳು ವಿಫಲವಾದಾಗ, ಅದನ್ನು ನಾನೇ ನಿರ್ದೇಶಿಸಲು ಮುಂದಾದೆ ಎಂದು ಬಾಲಚಂದ್ರ ಹೇಳಿದ್ದಾರೆ.

ಥ್ರಿಲ್ಲರ್ ವಿಷಯವನ್ನು ಮುಂದಿಟ್ಟುಕೊಂಡು ಆರ್.ಬಾಲಚಂದ್ರ ನಿರ್ದೇಶನ ಮಾಡುವ ಜೊತೆಗೆ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ಕಾರ್ಕಳ, ಉಡುಪಿ, ಹೊನ್ನಾವರ ಸೇರಿದಂತೆ ಮತ್ತಿತರ ಕಡೆ 55 ರಿಂದ 60 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಕಾರ್ಕಳ ಬಳಿಯ ಊರಿನ ಹೆಸರು ಕಣಂಜಾರು ಸಿನಿಮಾ. ಥ್ರಿಲ್ಲರ್ ವಿಷಯ ಆಗಿರುವುದರಿಂದ ಆ ಹೆಸರು ಇಡಲಾಗಿದೆ. ಅದು ಯಾಕೆ ಎನ್ನುವುದನ್ನು ಚಿತ್ರದಲ್ಲಿ ನೋಡಬೇಕು ಎಂದು ನಿರ್ಮಾಪಕರೂ ಆಗಿದ್ದಾರೆ.

ಈ ಹಿಂದೆ ‘ಮಹಾನುಭಾವರು’ ಚಿತ್ರದಲ್ಲಿ ನಾಯಕ ಜೊತೆಗೆ ನಿರ್ಮಾಣ ಮಾಡಿದ್ದೆ, ಇದೊಂದು ಆಸಕ್ತಿ ಮತ್ತು ಕುತೂಹಲ ಕಾರಿ ಸಂಗತಿಯ ಕಥೆಯನ್ನು ಹೊಂದಿದ್ದರಿಂದ ನಾನೇ ನಿರ್ದೇಶನ ಮಾಡಲು ಮುಂದಾದೆ. ಚಿತ್ರದ ಉಳಿದ ಮಾಹಿತಿಯನ್ನು ಹಂತ ಹಂತವಾಗಿ ಬಿಡುಗಡೆ ಹಂಚಿಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ ಆರ್. ಬಾಲಚಂದ್ರ.

ಬಾಲಚಂದ್ರ, ಅಪೂರ್ವ, ಶರ್ಮಿತಾ ಗೌಡ, ಹಿರಿಯ ನಟ ರಾಮಕೃಷ್ಣ, ಪಿ.ಎಸ್ ಶ್ರೀಧರ್ ಹಾಗು ಮೇಘ ಸೇರಿದಂತೆ ಹೊಸ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಹರ್ಷವರ್ಧನ್ ರಾಜ್ ಸಂಗೀತ, ಶಶಾಂಕ್ ಶೇಷಗಿರಿ ಹಿನ್ನೆಲೆ ಸಂಗೀತ, ವೆಂಕಿ ಯುಡಿವಿ ಸಂಕಲನ, ಮಂಜುನಾಥ್ ಹೆಗ್ಡ್ ಕ್ಯಾಮರ ಚಿತ್ರಕ್ಕಿದೆ. ಕಣ್ಣಂಜಾರು ಚಿತ್ರದ ಬಿಡುಗಡೆ ದಿನಾಂಕವನ್ನು ನಿರ್ಮಾಪಕರು ಇನ್ನೂ ಘೋಷಿಸಿಲ್ಲ.

Be the first to comment

Leave a Reply

Your email address will not be published. Required fields are marked *

Translate »
error: Content is protected !!