ಕನ್ನಡ ನೆಲದಲ್ಲೇ ಕನ್ನಡಿಗರಿಂದಲೇ ಪಿ.ಆರ್ ಕೆಗೆ ಅವಮಾನ!

ಡಾ||ರಾಜ್ ಇದ್ದಿದ್ರೆ ಇದನ್ನು ಸಹಿಸ್ತಿದ್ರಾ?
ಇದು ಗೋಪಾಲನ್ ಗೋಲಾಮಾಲ್!

ಸ್ಯಾಂಡಲ್‌ವುಡ್‌ನಲ್ಲಿ ಸಂಭಾವನೆಯ ವಿಚಾರದಲ್ಲಿ ನಾಯಕ-ನಾಯಕಿಯರ ನಡುವೆ ತಾರತಮ್ಯ ಇರೋದು ಇಂದು ನಿನ್ನೆಯದಲ್ಲ. ನಾಯಕಿಯರಿಗೆ ಚಿತ್ರದಲ್ಲಿ ಪಾತ್ರ ಪೋಷಣೆಯ ವಿಚಾರದಲ್ಲೂ, ಸಂಭಾವನೆಯ ವಿಚರಾದಲ್ಲೂ ಸಾಕಷ್ಟು ವ್ಯತ್ಯಾಸವಿರೋದರ ಬಗ್ಗೆ ಈ ಹಿಂದೆ ಸಾಕಷ್ಟು ನಟಿಯರು ಬಹಿರಂಗವಾಗಿ ತಮ್ಮ ಅಳಲು ತೋಡಿಕೊಂಡಾಗ, ‘ನೋಡಮ್ಮಾ.. ಇಲ್ಲಿ ಮಾರುಕಟ್ಟೆ ಆಧಾರಿತ ಸಂಭಾವನೆ.. ಹಾಕಿ ಮತ್ತು ಕ್ರಿಕೆಟ್ ಇರೋ ವ್ಯತ್ಯಾಸ ಇರೋ ಹಾಗೆ.. ಬೇರೆ ಏನಿಲ್ಲ..’ ಎಂದು ಬಾಯಿ ಮುಚ್ಚಿಸಿದವರೇ ಹೆಚ್ಚು. ಅದರಿಲಿ ಬಿಡಿ, ಸಂಭಾವನೆಯನ್ನೂ ಮೀರಿದ ಕೊಡುಗೆ ಚಿತ್ರರಂಗಕ್ಕೆ ನಾಯಕಿಯರದ್ದೂ ಇದೇ ಅಲ್ಲವೇ. ಆದರೆ ಇಲ್ಲೊಂದು ಕಾರ್ಪೆರೇಟ್ ಸಂಸ್ಥೆ ಕನ್ನಡ ಚಿತ್ರರಂಗದ ಬೆಳವಣಿಗೆಗೆ ಹಿರೋಗಳು ಎಷ್ಟು ಶ್ರಮಿಸಿದರೋ, ಅಷ್ಟೇ ಶ್ರಮಿಸಿದ ಹಿರೋಯಿನ್‌ಗಳನ್ನೂ ಕನ್ನಡಿಗರ ಮುಂದೆಯೇ ಯಾವುದೇ ಅಳುಕಿಲ್ಲದೆ ಪ್ರತಿದಿನ ಅವಮಾನಿಸುತ್ತಿದ್ದಾರೆ. ಹೌದು, ಕನ್ನಡ ನೆಲದಲ್ಲೇ ಕನ್ನಡಿಗರೇ ಕನ್ನಡಿಗರನ್ನು ಅವಮಾನಿಸುತ್ತಿರುವ ಈ ಸ್ಟೋರಿ ಓದಿ ನೋಡಿ..

ಗೋಪಾಲನ್ ಸಿನಿಮಾಸ್, ಗೋಪಾಲನ್ ಎಂಟರ್‌ಪ್ರೇಸಸ್ ಒಡೆತನದಲ್ಲಿ ಹುಟ್ಟಿದ ಚಿತ್ರಮಂದಿರಗಳ ಚೈನ್. ಆರಂಭದಲ್ಲಿ ಕೇವಲ ಅಪಾರ್ಟ್ಮೆಂಟ್ ಮತ್ತು ವಿಲ್ಲಾಗಳನ್ನು ಕಟ್ಟಿಕೊಂಡಿದ್ದ ಗೋಪಾಲನ್ ಎಂಟರ್‌ಪ್ರೇಸಸ್ , ಗೋಪಾಲನ್ ಸಿನಿಮಾಸ್‌ನ ಮೂಲಕ ಒಂದು ರೀತಿಯಲ್ಲಿ ಪರೋಕ್ಷವಾಗಿ ಕನ್ನಡ ಚಿತ್ರಗಳ ಏಳಿಗೆಗೂ ಸಾಥ್ ನೀಡಿರೋದು ಸುಳ್ಳಲ್ಲ. ಆದರೆ, ನೀವೊಮ್ಮೆ ಬೆಂಗಳೂರಿನ ಮೈಸೂರ್ ರೋಡ್‌ನಲ್ಲಿರುವ (ಗೋಪಾಲನ್ ಆರ್ಕೆಡ್ ಮಾಲ್) ಗೋಪಾಲನ್ ಸಿನಿಮಾಸ್‌ಗೆ ಭೇಟಿ ಕೊಟ್ಟುನೋಡಿ ಥೀಯೇಟರ್ ಹೊಕ್ಕುತ್ತಿದ್ದಂತೆ ನಿಮಗೆ ಅಚ್ಚರಿ ಕಾದಿರುತ್ತೆ. ಅದೇನೆಂದರೆ ಅಲ್ಲಿ ಅಕ್ಷರಶಃ ಕನ್ನಡ ಹಿರೋಯಿನ್‌ಗಳಿಗೆ ಅವಮಾನವಾಗುವ ರೀತಿಯಲ್ಲಿ ಫೋಟೋಗಳನ್ನು ನೇತುಹಾಕಲಾಗಿದೆ.. ಈ ಹಿಂದೆ ಇಡೀ ಗೋಡೆ ತುಂಬಾ ಕನ್ನಡ ಚಿತ್ರರಂಗದ ಕೇವಲ ಹಿರೋಗಳ ಫೋಟೋಗಳನ್ನು ಹಾಕಲಾಗಿತ್ತು. ಆದರೆ, ಇದು ಮೊಬೈಲ್ ಯುಗ, ಯಾರೋ ಒಬ್ಬ ಅಸಾಮಿ ಆ ಫೋಟೋಗಳನ್ನು..’ಇದು ಕನ್ನಡ ಚಿತ್ರರಂಗದ ನಟಿಯರಿಗೆ ಮಾಡಿದ ದೊಡ್ಡ ಅವಮಾನ..’ ಎಂದು ಬರೆದು ಸೋಶಿಯಲ್ ಮೀಡಿಯಾದಲ್ಲಿ ಹರಿಯಬಿಟ್ಟದ್ದ. ಅದೇಗೋ ಗೋಪಾಲನ್ ಸಿನಿಮಾಸ್ ಸಂಬಂಧಿಸಿದವರಿಗೆ ತಲುಪಿದೆ. ಎಚ್ಚೆತ್ತ ಗೋಪಾಲನ್ ಮಂದಿ ಹೀರೋಗಳ ಫೋಟೋಗಳನ್ನು ಪಕ್ಕದ ಗೋಡೆಗೆ ಶಿಫ್ಟ್ ಮಾಡಿ, ಅದರ ಪಕ್ಕದಲ್ಲೇ ಹಿರೋಯಿನ್‌ಗಳ ಫೋಟೋಗಳನ್ನು ನೇತು ಹಾಕಿದರು. ಆ ಫೋಟೋಗಳ ಗುಂಪಿನಲ್ಲಿ ಒಂದು ಮೂಲೆಯಲ್ಲಿ ಪಾರ್ವತಮ್ಮ ರಾಜ್‌ಕುಮಾರ್ ಅವರ ಫೋಟೋವನ್ನು ಹಾಕಲಾಗಿದೆ. ಬೇಸರದ ಸಂಗತಿಯೆಂದರೆ, ಇಲ್ಲೂ ತಾರತಮ್ಯ! ಹಿರೋಗಳ ಫೋಟೋಗಳ ಅವರವರ ಯೋಗ್ಯತೆಗೆ (ಅವರ ದೃಷ್ಟಿಯಲ್ಲಿ) ತಕ್ಕುದಾಗಿ ಡಿಫೆರೆಂಟ್ ಸೈಜ್‌ನಲ್ಲಿದೆ. ಆದರೆ, ಹಿರೋಯಿನ್ ವಿಚಾರದಲ್ಲಿ ಸಮಾನತೆ, ಎಲ್ಲರ ಫೋಟೋಗಳೋ ಒಂದೇ ಸೈಜ್! ನಮ್ಮಲ್ಲಿ ಎಂಥೆಂಥಾ ನಟಿಯರು ಬಂದು ಹೋಗಿದ್ದಾರೆ. ಇವರು ಇವತ್ತು ಹಿರೋಗಳ ಫೋಟೋಗಳನ್ನು ದೊಡ್ಡದೊಡ್ಡದಾಗಿ ನೇತು ಹಾಕುವುದರ ಹಿಂದೆ, ಹಿರೋಯಿನ್ನಗಳ ಶ್ರಮವೂ ಇದೆ ಅಲ್ಲವೇ. ಅದಲ್ಲದೇ, ಕನ್ನಡ ನಾಡು ಕಂಡ ದಿಟ್ಟ ನಿರ್ಮಾಪಕಿ, ರಾಜ್‌ಕುಮಾರ್ ಅವರ ಬೆಂಗಾವಲಾಗಿದ್ದ ಪಾರ್ವತಮ್ಮ ರಾಜ್‌ಕುಮಾರ್ ಅವರ ಫೋಟೋವನ್ನು ಎಲ್ಲೋ ಮಧ್ಯೆ ತುರುಕಿ ಅವಮಾನ ಮಾಡಲಾಗಿದೆ. ಇನ್ನು, ನೀವು ಇಲ್ಲಿನ ಫೋಟೋಗಳನ್ನು ಗಮನಿಸಿದರೆ, ಇತ್ತೀಚೆಗೆ ಬಂದು ಒಂದಷ್ಟು ಹಿಟ್ ಚಿತ್ರಗಳನ್ನು ಕೊಟ್ಟ ಹಿರೋಗಳ ಫೋಟೋಗಳನ್ನೂ ಇಲ್ಲಿ ಕಾಣಬಹುದು. ಆದರೆ, ಹಿರೋಯಿನ್ ವಿಚಾರಕ್ಕೆ ಬಂದರೆ.. ೮೦-೯೦ರ ದಶಕದ ಹಿರೋಯಿನಗಷ್ಟೇ ಸೀಮಿತವಾದೆ. ಆ ನಂತರದಲ್ಲಿ ಬಂದ ಅಷ್ಟೂ ಕನ್ನಡ ಚಿತ್ರಗಳಲ್ಲಿ ಒಂದರಲ್ಲೂ ಹಿರೋಯಿನ್‌ಗಲಿಲ್ಲ..ಬರೀ ಹಿರೋಗಳೇ! ಬರೀ ಹಿರೋಗಳ ಫೋಟೋ ಹಾಕಿದ್ರೆ ಕನ್ನಡಿಗರು ರೊಚ್ಚಿಗೇಳ್ತಾರೆ ಅನ್ನೋ ಕಾರಣಕ್ಕೆ, ನಾಮಾಕಾವಸ್ಥಗೆ ಹಿರೋಯಿನ್ ಗಳ ಫೋಟೋವನ್ನು ನೇತು ಹಾಕಿದ್ದಾರೆ ಅನ್ನವುದು ಎಂಥವರಿಗಾದರು ಅವುಗಳನ್ನು ನೋಡಿದಾಗ ಅರ್ಥವಾಗುತ್ತದೆ.

ಒಂದು ವೇಳೆ, ಇದೇ ತಾರತಮ್ಯವನ್ನು ಹಿರೋಗಳ ವಿಚಾರದಲ್ಲಿ ಮಾಡಿದ್ದರೆ, ಈಗಾಗಲೇ ಮಿಡಿಯಾಗಳು ಮುಗಿಬಿದ್ದು ಕವರ್‌ಸ್ಟೋರಿ ಮಾಡದೆ ಬಿಡ್ತಿದ್ರಾ? ಮಿಡಿಯಾಗಳಿಗೂ ಟಿಆರ್‌ಪಿ ಪಾಯಿಂಟ್ ಹಿರೋಯಿನ್‌ಗಳಿಗಿಂತ ಹಿರೋಗಳೇ! ಇನ್ನೂ ಕೆಲವರು ಹಿರೋಯಿನ್‌ಗಳ ಫೋಟೋಗಳನ್ನು ನೋಡಿ…ರ‍್ಲಿ ಬಿಡ್ರಿ, ಅಷ್ಟಾದ್ರು ಮಡಿದಾರಲ್ಲಾ..’ ಎಂದು ಸುಮ್ಮನಾದರೆ.. ಇನ್ನೂ ಕೆಲವರು.. ‘ಫೋಟೋದಲ್ಲೇನಿದೆ ಅವರು ಮಾಡಿದ ಸಾಧನೆ ನೆನಪಿದ್ದರೆ ಸಾಕು…’ ಎಂದೆನ್ನುತ್ತಾರೆ. ಹಾಗಿದ್ದರೆ ಹೀರೋಗಳದ್ದೂ ಸಾಧನೆ ನೆಪಿದ್ದರೆ ಸಾಕಲ್ಲವೇ?ಒಟ್ಟಿನಲ್ಲಿ, ಗೋಪಾಲನ್ ಸಿನಿಮಾಸ್‌ನ ಈ ಕರ್ಮಕಾಂಡ ಇನ್ನಾದರು ಕೊನೆಯಾಗಬೇಕು. ಚಿತ್ರಕ್ಕೆ ಹಿರೋ ಎಷ್ಟು ಮುಖ್ಯವೋ, ಹಿರೋಯಿನ್ ಕೂಡ ಅಷ್ಟೇ ಮುಖ್ಯ ಅನ್ನೋದು ಅರ್ಥವಾಗಬೇಕಿದೆ. ಸಂಭಾವನೆ ವಿಚಾರದಲ್ಲಿ ಸದ್ದಿಲ್ಲದೆ ಹಿರೋಯಿನ್ ವಿಚಾರದಲ್ಲಿ ನಡೆಯುತ್ತಿರುವ ಲಿಂಗ ತಾರತಮ್ಯ, ಅವರಿಗೆ ನೀಡುವ ಗೌವರದ ವಿಚಾರದಲ್ಲೂ ಬರಬಾರದು. ಗೋಪಾಲನ್ ಸಿನಿಮಾಸ್ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡು ತಮ್ಮ ಸಿನಿಮಾ ಮಂದಿರದ ಗೋಡೆಯ ಮೂಲಕ ಮುಖಕ್ಕೆ ರಾಚುವಂತೆ ಕಾಣುವ ಲಿಂಗ ತಾರತಮ್ಯದ ಕುರುಹುಗಳನ್ನು ಅಳಿಸಿ ಹಾಕಿ, ಸಾಮರಸ್ಯ-ಸಮಾನತೆಯನ್ನು ಎತ್ತಿ ಹಿಡಿಯುತ್ತದೆ ಅನ್ನೋದು ನಮ್ಮ ಆಶಯ.

Be the first to comment

Leave a Reply

Your email address will not be published. Required fields are marked *

Translate »
error: Content is protected !!