ಈ ವಾರ ಹಲವು ಕನ್ನಡದ ಸಿನಿಮಾ ಗೆಲುವಿನ ಭರವಸೆಯಲ್ಲಿ ತೆರೆಗೆ ಬರುತ್ತಿವೆ. ಅದರಲ್ಲಿ ಒಂದು ರೀ ರಿಲೀಸ್ ಸಿನಿಮಾ ಇದೆ.
‘ತಪಸ್ಸಿ’:
ಮಹಿಳಾ ಪ್ರಧಾನ ಚಿತ್ರ ‘ತಪಸ್ಸಿ’ ಜುಲೈ 3ರಂದು ರಾಜ್ಯದ್ಯಂತ ಬಿಡುಗಡೆ ಆಗಲಿದೆ. ಬೆಂಗಳೂರು ಮೂವೀಸ್ ಲಾಂಛನದಲ್ಲಿ ಚಿತ್ರ ಮೂಡಿ ಬರುತ್ತಿದೆ. ಸಿನಿಮಾಗೆ ಸ್ಪೆನ್ಸರ್ ಮ್ಯಾಥ್ಯೂ ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ವಿ ರವಿಚಂದ್ರನ್ ಅವರು ಚಿತ್ರದಲ್ಲಿ ಪ್ರೊಫೆಸರ್ ಆಗಿ ನಟಿಸುತ್ತಿದ್ದಾರೆ. ಅಮ್ರೆಯಾ ಗೋಸ್ವಾಮಿ ಈ ಸಿನಿಮಾದ ನಾಯಕಿ. ವಿನಯ ಪ್ರಸಾದ್, ಪ್ರಜ್ವಲ್, ಸಚಿನ್, ಮುಂತಾದವರು ಪ್ರಮುಖ ಪಾತ್ರದಲ್ಲಿದ್ದಾರೆ.

‘ಜಂಗಲ್-ಮಂಗಲ್’:
ಕಾಡಿಗೆ ಹೋಗಿ ಸಿಕ್ಕಿಹಾಕಿಕೊಂಡು ಅಲ್ಲಿ ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸುವ ಜೋಡಿಯೊಂದರ ಕತೆ ‘ಜಂಗಲ್-ಮಂಗಲ್’. ನೈಜ ಪಾತ್ರಗಳನ್ನು ಆಧರಿಸಿ ನಿರ್ಮಾಣ ಮಾಡಿರುವ ಸಿನಿಮಾ ಇದಾಗಿದೆ. ರಕ್ಷಿತ್ ಕುಮಾರ್ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಯಶ್ ಶೆಟ್ಟಿ ನಾಯಕ. ಹರ್ಷಿತಾ ರಾಮಚಂದ್ರ ನಾಯಕಿ.

‘ಕ್ಯಾಪಿಟಲ್ ಸಿಟಿ’:
ಬೆಂಗಳೂರು ಭೂಗತ ಲೋಕದ ಕತೆ ಒಳಗೊಂಡ ‘ಕ್ಯಾಪಿಟಲ್ ಸಿಟಿ’ ಸಿನಿಮಾ ಈ ವಾರ ಬಿಡುಗಡೆ ಆಗುತ್ತಿದೆ. ನಾಯಕ ರಾಜೀವ್, ನಾಯಕಿ ಪ್ರೇರಣಾ ಕಂಬಂ. ಸಿನಿಮಾನಲ್ಲಿ ಶರತ್ ಲೋಹಿತಾಶ್ವ, ರವಿಶಂಕರ್, ಸುಮನ್ ನಟಿಸಿದ್ದಾರೆ.

‘ಪೆನ್ ಡ್ರೈವ್’:
ಮಾಲಾಶ್ರೀ ಅತಿಥಿ ಪಾತ್ರದಲ್ಲಿ ನಟಿಸಿರುವ ಮಹಿಳಾ ಪ್ರಧಾನ ಆಕ್ಷನ್ ಸಿನಿಮಾ ‘ಪೆನ್ ಡ್ರೈವ್’ ಈ ವಾರ ಬಿಡುಗಡೆ ಆಗುತ್ತಿದೆ. ಬಿಗ್‌ಬಾಸ್ ಕನ್ನಡ ಸೀಸನ್ 10 ಸ್ಪರ್ಧಿ ತನಿಷಾ ಕುಪ್ಪಂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಿನಿಮಾವನ್ನು ಸೆಬಾಸ್ಟಿನ್ ಡೇವಿಡ್ ನಿರ್ದೇಶನ ಮಾಡುತ್ತಿದ್ದಾರೆ.

‘ಹೆಬ್ಬುಲಿ ಕಟ್’:
ದಲಿತ ಯುವಕನೊಬ್ಬ ‘ಹೆಬ್ಬುಲಿ’ ಸಿನಿಮಾದಲ್ಲಿ ಸುದೀಪ್ ರೀತಿ ಕಟಿಂಗ್ ಆಸೆಯನ್ನು ನನಸು ಮಾಡಿಕೊಳ್ಳಲು ಅಡ್ಡಿಯಾಗುವ ಜಾತೀವಾದಿಗಳ ಕತೆ ಒಳಗೊಂಡ ಸಿನಿಮಾ ‘ಹೆಬ್ಬುಲಿ ಕಟ್’. ಭೀಮರಾವ್ ನಿರ್ದೇಶನ ಮಾಡಿದ್ದಾರೆ.

‘ರಂಗಿತರಂಗ’:
ಹತ್ತು ವರ್ಷಗಳ ಹಿಂದೆ ಬಿಡುಗಡೆ ಆಗಿದ್ದ ಕನ್ನಡದ ಕಲ್ಟ್ ಕ್ಲಾಸಿಕ್ ಥ್ರಿಲ್ಲರ್ ಸಿನಿಮಾ ‘ರಂಗಿತರಂಗ’ ಈ ವಾರ ಮರು ಬಿಡುಗಡೆ ಆಗುತ್ತಿದೆ. ಅನುಪ್ ಭಂಡಾರಿ ನಿರ್ದೇಶಿಸಿ ಅವರ ಸಹೋದರ ನಿರೂಪ್ ಭಂಡಾರಿ ನಾಯಕನಾಗಿ ನಟಿಸಿದ್ದಾರೆ.

—–





Be the first to comment