ಕಾಂತಾರ 1 ಚಿತ್ರದ ಅಬ್ಬರದ ನಡುವೆಯೇ ಇಂದು ಕನ್ನಡದಲ್ಲಿ 7 ಸಿನಿಮಾಗಳು ಬಿಡುಗಡೆ ಆಗುತ್ತಿವೆ.
ಅರಿದ್ರ, ಬೆಳ್ಳಿ ಚುಕ್ಕಿ ಹಳ್ಳಿ ಹಕ್ಕಿ, ದಿಲ್ ಮಾರ್, ಯಾರಿಗೂ ಹೇಳ್ಬೇಡಿ, ನ್ಯೂಟನ್ಸ್ ಥರ್ಡ್ ಲಾ, ಟಾರ್ಟಯ್ಸ್, ಗ್ರೀನ್ ಕನ್ನಡದಲ್ಲಿ ಬಿಡುಗಡೆ ಆಗುತ್ತಿರುವ ಚಿತ್ರಗಳು. ಪ್ರೇಕ್ಷಕರು ಇವುಗಳಿಗೆ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂದು ಕಾದು ನೋಡಬೇಕಿದೆ.
‘ಬಿಳಿ ಚುಕ್ಕಿ ಹಳ್ಳಿ ಹಕ್ಕಿ’ ಸಿನಿಮಾ ವಿಟಿಲಿಗೋ ಸಮಸ್ಯೆಯನ್ನು ಕೇಂದ್ರವಾಗಿಟ್ಟುಕೊಂಡು ಮೂಡಿಬಂದಿದೆ. ನಿರ್ದೇಶಕ ಮಹೇಶ್ ಗೌಡ ಅವರು ಇದು ಮನರಂಜನೆಯೊಂದಿಗೆ ಸಾಮಾಜಿಕ ಸಂದೇಶ ನೀಡುವ ಕಮರ್ಷಿಯಲ್ ಸಿನಿಮಾ ಎಂದಿದ್ದಾರೆ. ಕಾಜಲ್ ಕುಂದರ್ ನಾಯಕಿಯಾಗಿ ನಟಿಸಿದ್ದಾರೆ.
ಇದೇ ವೇಳೆ ತೆಲುಗು ಭಾಷೆಯಲ್ಲಿ ಧರ್ಮವರಮ್, ವಿದ್ರೋಹಿ, ತಮಿಳು ಭಾಷೆಯಲ್ಲಿ ತುಚ್ಚದಾನಮ್, ಮಲಯಾಳಂ ಭಾಷೆಯಲ್ಲಿ ನೈಟ್ ರೈಡರ್ಸ್, ಕಾಣೋಳಿ ಬ್ಯಾಂಡ್ ಸೆಟ್ ಚಿತ್ರಗಳು ಬಿಡುಗಡೆಯಾಗುತ್ತಿವೆ.
ಕನ್ನಡ ಭಾಷೆಯ ಕಾಂತಾರ 1 ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಹಿಂದಿಯಲ್ಲಿ ರಶ್ಮಿಕಾ ಮಂದಣ್ಣ ನಟನೆಯ ಥಮ ಯಶಸ್ವಿಯಾಗಿ ಓಡುತ್ತಿದೆ. ಇವುಗಳ ನಡುವೆ ಹೊಸ ಚಿತ್ರಗಳು ಯಾವ ರೀತಿ ಪ್ರೇಕ್ಷಕರ ಗಮನ ಸೆಳೆಯುತ್ತವೆ ಎನ್ನುವ ಕುತೂಹಲ ಉಂಟಾಗಿದೆ.
—–





Be the first to comment