ಚಂದನವನಕ್ಕೆ ಹಲವಾರು ಯುವ ಪ್ರತಿಭೆಗಳು ಕನಸುಗಳನ್ನು ಹೊತ್ತುಕೊಂಡು ಬರುವುದು ಸರ್ವೇ ಸಾಮಾನ್ಯ. ಆ ಸಾಲಿನ ಪ್ರೇಮಕ್ಕೆ ಮಹತ್ವವನ್ನು ಸಾರುವ ಯುವ ಪಡೆಗಳ ತಂಡ “ಪ್ರೇಮಮಯಿ” ಎಂಬ ಚಿತ್ರವನ್ನು ಆರಂಭಿಸಿದೆ. ಈ ಚಿತ್ರದ ಮುಹೂರ್ತವನ್ನು ಕೋಣನಕುಂಟೆ ಶ್ರೀ ಮಹಾಲಕ್ಷಿ ದೇವಸ್ಥಾನದಲ್ಲಿ ಸರಳವಾಗಿ ಆಚರಿಸಿಕೊಂಡಿತು. “ಇದು ಹೃದಯಗಳ ವಿಷಯ” ಎಂದು ಅಡಿಬರಹದಲ್ಲಿ ಹೇಳಿಕೊಂಡಿದೆ. ಚಿತ್ರವು ಹೊಸದಾಗಿದ್ದರೂ ಮುಖ್ಯ ಕಲಾವಿದರು ಹೂರತುಪಡಿಸಿ ಉಳಿದವರು ಸಿನಿಮಾ ಸಂಸ್ಕ್ರತಿಯಲ್ಲೆ ಬೆಳೆದವರು ಎಂಬುದು ಗಮನಾರ್ಹ ಅಂಶವಾಗಿದೆ.
ಮೂರು ಚಿತ್ರಗಳನ್ನು ನಿರ್ದೇಶನ ಮಾಡಿರುವ ರಘುವರ್ಮ ಚಿತ್ರಕ್ಕೆ ಕತೆ, ಚಿತ್ರಕತೆ, ಸಂಭಾಷಣೆ, ಸಾಹಿತ್ಯ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಎಲ್.ನಾಗಭೂಷಣ್ ನಿರ್ಮಾಪಕರು ಇವರೊಂದಿಗೆ ಸಂಗೀತ ಸಂಯೋಜಕ ಕಾರ್ತಿಕ್ ವೆಂಕಟೇಶ್ ಮತ್ತು ಪಿ.ಎನ್.ಕಿರಣ್ಕುಮಾರ್ ಸಹ ನಿರ್ಮಾಪಕರುಗಳಾಗಿ ಗುರುತಿಸಿಕೊಂಡಿದ್ದಾರೆ. ಶ್ರೀ ಸಿಂಗನಲ್ಲೂರು ಚೌಡೇಶ್ವರಿ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾವು ಸಿದ್ದಗೊಳ್ಳುತ್ತಿದೆ.
ಪ್ರೇಮ ಅನ್ನೋದು ಪ್ರತಿಯೊಬ್ಬರ ಜೀವನ, ಮನಸ್ಸಿನಲ್ಲಿ ಇರುತ್ತದೆ. ತಂದೆ-ಮಗ, ಸ್ನೇಹಿತ ಎಲ್ಲರಲ್ಲಿ ಪ್ರೀತಿ ಯಾವ ರೀತಿ ಮೂಡುತ್ತೆ. ಜನರು ಇದನ್ನ ಹುಡುಗ-ಹುಡುಗಿ, ತಂದೆ-ಮಗ ಅಥವಾ ಸ್ನೇಹಿತನ ಮೇಲೆ ಪ್ರೀತಿ ಅನ್ನೋದನ್ನು ತೆಗೆದುಕೊಳ್ತಾರಾ? ಎಂಬುದನ್ನು ಅವರ ನಿರ್ಧಾರಕ್ಕೆ ಬಿಡಲಾಗಿದೆ.
ಅಪ್ಪ ಅಂತ ಜವಬ್ದಾರಿ ಬಂದಾಗ ಆತ ಏನು ಮಾಡ್ತಾನೆ. ವಯಸ್ಸಾದ ಪೋಷಕರನ್ನು ಮಕ್ಕಳು ಹೇಗೆ ನೋಡಿಕೊಳ್ಳಬೇಕು. ಇದರ ಜೊತೆಗೆ ರೈತರ ವಿಷಯಗಳು ಕಾಣಿಸಿಕೊಳ್ಳುತ್ತದೆ. ಒಂದು ಹಂತದಲ್ಲಿ ನಾಯಕ ರೈತನಾಗಿ ಬರುವ ದೃಶ್ಯಗಳು ಇರಲಿದೆ. ಓದು , ಬರಹ ಇರಲೂ ಬೇಕು. ಅದರೊಂದಿಗೆ ನಮ್ಮದೆ ಆದಂತಹ ಕೆಲಸನೂ ಇರಬೇಕು ಎಂಬುದನ್ನು ಸಂದೇಶದಲ್ಲಿ ಹೇಳಲಾಗುತ್ತಿದೆ.
ಮುಖ್ಯ ಪಾತ್ರದಲ್ಲಿ ರಾಮು, ಸುರಕ್ಷಿತ ಇವರೊಂದಿಗೆ ಬಾoಡ್ ಕುರಿರoಗ , ಶಂಕರ್.ಎ, ಅರ್ಚನಾ, ಗೂಳಿಸೋಮ , ಶಂಕರ್.ಎಸ್, ಆಂಜನಪ್ಪ , ಶಿವಕುಮಾರ್ ಆರಾಧ್ಯ, ಸಂದೀಪ್ಮಲಾನಿ, ಕಲಾರತಿ ಮಹದೇವ್, ವಿಕ್ಟರಿವಾಸು, ಶಿಲ್ಪಮೂರ್ತಿ ಮುಂತಾದವರು ನಟಿಸುತ್ತಿದ್ದಾರೆ.
ಐದು ಹಾಡುಗಳಿಗೆ ಸಂಗೀತ ಕಾರ್ತಿಕ್ವೆಂಕಟೇಶ್, ಛಾಯಾಗ್ರಹಣ ಕೀರ್ತಿವರ್ಧನ್, ಸಂಕಲನ ಭಾರ್ಗವ್, ಸಾಹಸ ನವೀನ್, ನೃತ್ಯ ಮಲ್ಲಿಕಾರ್ಜುನ್ ಅವರದಾಗಿದೆ. ಶಿವಮೊಗ್ಗ, ಬೆಂಗಳೂರು ಹಾಗೂ ಗೋವಾದ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲು ತಂಡವು ಯೋಜನೆ ರೂಪಿಸಿಕೊಂಡಿದೆ.
Be the first to comment