ಸ್ಮೈಲ್ ಜೋಹರ್ ಟಾಕೀಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ 18 ರಿಂದ 25 ಚಿತ್ರವನ್ನು ಈ ಹಿಂದೆ ತುಫಾನ್ ಹಾಗೂ ಬಳ್ಳಾರಿ ದರ್ಬಾರ್ ಚಿತ್ರಗಳನ್ನು ನಿರ್ದೇಶಿಸಿದ್ದ ಸ್ಮೈಲ್ ಶ್ರೀನು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. “18 ರಿಂದ 25” ಈ ಚಿತ್ರವು ಇದೀಗ 2 ಭಾಷೆಗಳಲ್ಲಿ ತಯಾರಾಗಿದೆ. ಕನ್ನಡ ಮತ್ತು ತೆಲುಗುನಲ್ಲಿ ಚಿತ್ರದ ಪ್ರಥಮ ಪ್ರತಿ ಸಿದ್ದವಾಗಿದ್ದು ಜನವರಿ ತಿಂಗಳಿನಲ್ಲಿ ಹಾಡುಗಳು ಬಿಡುಗಡೆಯಾಗಲಿದ್ದು, ಫೆಬ್ರವರಿಯಲ್ಲಿ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ. 18 ರಿಂದ 25 ರ ಹರೆಯದ ಹೃದಯಗಳ ಮಿಡಿತವನ್ನು ಈ ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಿದ್ದಾರೆ.
ಈ ಚಿತ್ರಕ್ಕೆ ಚರಣ್ ಅರ್ಜುನ್ ಸಂಗೀತ, ಶಿವ.ಕೆ.ನಾಯ್ಡು ಛಾಯಾಗ್ರಹಣ, ಬಿ.ಮಲ್ಲಿ ಸಂಕಲನ, ಡಾ|| ವಿ.ನಾಗೇಂದ್ರ ಪ್ರಸಾದ್, ಸ್ಮೈಲ್ಶ್ರೀನು ಸಾಹಿತ್ಯ, ವೈಯಲೆನ್ಸ್ ವೇಲು ಸಾಹಸ, ಚಿರಂಜೀವಿ ನೃತ್ಯ ನಿರ್ದೇಶನವಿದೆ. ಅಭಿರಾಮ್, ಋಷಿತೇಜ, ಅಖಿಲಾ, ವಿದ್ಯಾಶ್ರೀ, ರಾಕ್ ಲೈನ್ ಸುಧಾಕರ್, ಫಾರೂಕ್ಖಾನ್, ನಾಗೇಶ್ವರಾವ್, ಉದಯ ಭಾಸ್ಕರ್, ರವಿರಾಮ್, ಪೋಲಾ ಶ್ರೀನಿವಾಸ್ಬಾಬು, ಭಾಗ್ಯಶ್ರೀ ಇನ್ನು ಮುಂತಾದವರ ತಾರಾಬಳಗವಿದೆ.
Pingback: dumps with pin shop