ಕಬ್ಜ ಚಿತ್ರದ ಪ್ರಚಾರದ ವೇಳೆ ‘ಕನ್ನಡ ಕಲಿಯಿರಿ’ ಎಂದು ವೇದಿಕೆ ಮೇಲೆ ಮುಂಬೈ ಮಂದಿಗೆ ನೇರವಾಗಿ ಹೇಳುವ ಮೂಲಕ ಕಿಚ್ಚ ಸುದೀಪ್ ಕನ್ನಡ ಪ್ರೇಮ ಮೆರೆದಿದ್ದಾರೆ.
ಮುಂಬೈಯ ಕಾರ್ಯಕ್ರಮದಲ್ಲಿ ‘ಕಬ್ಜ’ ವೇದಿಕೆ ಮೇಲೆ ಸುದೀಪ್, ಶ್ರೀಯಾ ಶರಣ್, ಉಪೇಂದ್ರ, ಆರ್. ಚಂದ್ರು ಇದ್ದರು. ಈ ವೇಳೆ ಆರ್. ಚಂದ್ರು ಕನ್ನಡದಲ್ಲಿ ಮಾತನಾಡಿದರು. ‘ಕಬ್ಜ ಟೀಂವರ್ಕ್. ಇದು ಒಳ್ಳೆಯ ತಾಂತ್ರಿಕವರ್ಗದಿಂದ ಆಗಿರೋ ಸಿನಿಮಾ’ ಎಂದರು. ಮುಂಬೈ ಮಂದಿಗೆ ಆರ್. ಚಂದ್ರು ಹೇಳಿದ್ದೇನು ಎಂಬುದು ಅರ್ಥವಾಗಿಲ್ಲ. ಈ ಕಾರಣಕ್ಕೆ ಸುದೀಪ್ ಅವರು ಚಂದ್ರು ಹೇಳಿದ್ದನ್ನು ಭಾಷಾಂತರ ಮಾಡ್ತೀನಿ ಎಂದು ಮೈಕ್ ತೆಗೆದುಕೊಂಡರು.
‘ಅವರು ಹೇಳಿದ್ದು ಇಷ್ಟೇ. ಬೇಗ ಕನ್ನಡ ಕಲಿಯಿರಿ ಎಂದು’ ಎಂಬುದಾಗಿ ಸುದೀಪ್ ಹೇಳಿದರು. ಕನ್ನಡದ ಬಗ್ಗೆ ಪ್ರೀತಿಯನ್ನು ಸುದೀಪ್ ವೇದಿಕೆಯಲ್ಲಿ ವ್ಯಕ್ತಪಡಿಸಿದರು.
ಕಳೆದ ವರ್ಷ ‘ಹಿಂದಿ ರಾಷ್ಟ್ರ ಭಾಷೆ’ ಎಂದು ಹೇಳಿದ್ದ ಅಜಯ್ ದೇವಗನ್ ಅವರಿಗೆ ಸುದೀಪ್ ಟ್ವಿಟರ್ನಲ್ಲೇ ತಿರುಗೇಟು ಕೊಟ್ಟಿದ್ದರು.
ಅಲ್ಲದೇ ಸುದೀಪ್ ಅವರು ‘ವಿಕ್ರಾಂತ್ ರೋಣ’ ಸಿನಿಮಾ ಪ್ರಚಾರಕ್ಕಾಗಿ ಬಾಲಿವುಡ್ಗೆ ತೆರಳಿದ್ದರು. ಅಲ್ಲಿ ಅವರು ಕನ್ನಡವನ್ನು ‘ಕನ್ನಡ್’ ಎಂದವರಿಗೆ ಸರಿಯಾದ ಉಚ್ಚಾರ ಯಾವುದು ಎಂಬುದನ್ನು ತಿದ್ದಿ ಹೇಳುವ ಪ್ರಯತ್ನ ಮಾಡಿದ್ದರು.
__

Be the first to comment