ಚಿತ್ರರಂಗದಲ್ಲಿ ತಮ್ಮ ನಟನಾ ಕೌಶಲ್ಯದಿಂದ ಪ್ರೇಕ್ಷಕರ ಮನಸ್ಸನ್ನು ಗೆದ್ದಂತಹ ಸ್ಟಾರ್ ನಾಟಕಗಳು ಈಗ ಕ್ರಿಕೆಟ್ ಅಂಗಳದಲ್ಲಿ ಜಿದ್ದಾಜಿದ್ದಿ ಗಾಗಿ ಸೆಣಸಾಡಲಿದ್ದಾರೆ. ಸೆಪ್ಟೆಂಬರ್ 8 ಮತ್ತು 9 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ `ಕನ್ನಡ ಚಲನಚಿತ್ರ ಕಪ್’ (ಕೆಸಿಸಿ) ಸೀಸನ್ 2 ನಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ , ರಿಯಲ್ ಸ್ಟಾರ್ ಉಪೇಂದ್ರ , ಕಿಚ್ಚ ಸುದೀಪ್ , ಪವರ್ ಸ್ಟಾರ್ ಪುನೀತ್ ರಾಜಕುಮಾರ್ , ರಾಕಿಂಗ್ ಸ್ಟಾರ್ ಯಶ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ತಂಡದ ನಾಯಕರುಗಳಾಗಿ ಕಣದಲ್ಲಿ ಅಬ್ಬರಿಸಲಿದ್ದಾರೆ. ಚಿತ್ರೋದ್ಯಮದ ಕಲಾವಿದರು , ತಂತ್ರಜ್ಞರ ಜೊತೆಗೆ ಕ್ರಿಕೆಟ್ ಕಲಿಗಳು ಕಣದಲ್ಲಿ ಕಾಣಿಸಲಿದ್ದಾರೆ. ಅಭಿಮಾನಿಗಳಿಗೆ ಮನರಂಜನೆಯ ಜೊತೆಗೆ ಕ್ರಿಕೆಟ್ ನ ಜಿದ್ದಾಜಿದ್ದಿ ಪಂದ್ಯಗಳನ್ನು ನೋಡುವ ಸುವರ್ಣಾವಕಾಶ ಸಿಗಲಿದೆ.
Be the first to comment