ಮುಂಬೈ : ಮುಂಬೈನಲ್ಲಿರುವ ನಟಿಯ ಮಣಿಕರ್ಣಿಕಾ ಫಿಲ್ಮ್ ಕಚೇರಿಯನ್ನು ಇಂದು ಡೆಮಾಲಿಶ್ ಮಾಡಲಾಗುತ್ತಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಕಂಗನಾ ನಾನು ಹೇಳೋದು ಯಾವತ್ತು ತಪ್ಪಾಗಲ್ಲ. ಈಗ ಮುಂಬೈ ಪಾಕ್ ಆಕ್ರಮಿತ ಕಾಶ್ಮೀರ ಎಂಬುದನ್ನು ನನ್ನ ಶತ್ರುಗಳು ಪದೇ ಪದೇ ಪ್ರೂವ್ ಮಾಡ್ತಿದ್ದಾರೆ ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.
ಕಂಗನಾ ಅವರ ಫಿಲ್ಮ್ ಕಚೇರಿ ಇರುವ ಜಾಗದಲ್ಲಿ ಅನಧಿಕೃತವಾಗಿ ಕಚೇರಿ ನಿರ್ಮಿಸಲಾಗಿದೆ ಎಂದು ಗ್ರೇಟರ್ ಮುಂಬೈ ನಾ ಮುನ್ಸಿಪಲ್ ಕಾರ್ಪೋರೇಷನ್‌ನಿಂದ ನೋಟೀಸ್ ನೀಡಲಾಗಿತ್ತು. ಜೊತೆಗೆ ಕಚೇರಿ ಮುಂಭಾಗದಲ್ಲಿ ಸ್ಟೇ ವರ್ಕ್ ನೋಟೀಸ್ ಕೂಡ ಅಂಟಿಸಲಾಗಿತ್ತು. ಇದಕ್ಕೆ ಕಂಗನಾ ಅವರ ವಕೀಲರು, ನೀವೂ ನಿರ್ಮಾಣ ಕಾಮಗಾರಿ ನಿಲ್ಲಿಸಿ ಎಂದು ನೋಟೀಸ್ ನೀಡಿದ್ದೀರಿ. ಆದ್ರೆ ಈ ಜಾಗದಲ್ಲಿ ಯಾವುದೇ ರೀತಿಯ ಕಾಮಗಾರಿ ನಡೆಯುತ್ತಿಲ್ಲ. ಕಾನೂನಿನ ದೃಷ್ಟಿಯಲ್ಲಿ ನೀವು ನೀಡಿರುವ ನೋಟೀಸ್ ತಪ್ಪು ನಿಮ್ಮ ಅಧಿಕಾರವನ್ನು ಬಳಸಿಕೊಂಡು ಕಂಗನಾ ಅವರನ್ನು ಬೆದರಿಸಲು ಈ ರೀತಿ ಮಾಡಿದ್ದೀರಾ ಎಂದು ಉತ್ತರಿಸಿದ್ದರು.
ಸುಶಾಂತ್ ಸಾವಿನ ವಿಚಾರಗಳು ಸೇರಿದಂತೆ ಕೆಲವೊಂದು ಹೇಳಿಕೆಗಳನ್ನು ನೀಡಿದ್ದ ಕಂಗನಾ ಪೊಲೀಸ್ ಭದ್ರತೆ ಬೇಕು ಎಂದು ಬಯಸಿದ್ದರು. ಆದ್ರೆ ಮುಂಬೈ ಪೊಲೀಸರ ಬಗ್ಗೆ ನಂಬಿಕೆ ಇಲ್ಲ. ಕೇಂದ್ರ ಅಥವಾ ಹರಿಯಾಣ ಪೊಲೀಸರ ಭದ್ರತೆ ನೀಡಿ ಎಂದು ಕೇಳಿಕೊಂಡಿದ್ದರು. ಈ ವೇಳೆ ಶಿವಸೇನಾ ಎಂಪಿ ಸಂಜಯ್ ರಾವುತ್ ಖಾರವಾಗಿ ಪ್ರತಿಕ್ರಿಯಿಸಿದ್ದರು. ಕಂಗನಾ ಮುಂಬೈಗೆ ಬರುವುದು ಬೇಡ. ಮುಂಬೈ ಪೊಲೀಸರಿಗೆ ಮಾಡುತ್ತಿರುವ ಅವಮಾನ ಎಂದಿದ್ದರು. ಇದಕ್ಕೆ ಪ್ರತಿಕ್ರಿತಯಿಸಿದ್ದ ಕಂಗನಾ ಮುಂಬೈ ಪಾಕ್ ಆಕ್ರಮಿತ ಕಾಶ್ಮೀರ ಎಂಬ ಹೇಳಿಕೆ ನೀಡಿದ್ದರು.
I am never wrong and my enemies prove again and again this is why my Mumbai is POK now #deathofdemocracy pic.twitter.com/bWHyEtz7Qy
— Kangana Ranaut (@KanganaTeam) September 9, 2020
Be the first to comment