ಕಂಗನಾ ರಣಾವತ್ ಸದ್ಯ ‘ಎಮರ್ಜನ್ಸಿ’ ಸಿನಿಮಾದ ಶೂಟಿಂಗ್ ಗಾಗಿ ಸಂಸತ್ ಭವನವನ್ನು ಶೂಟಿಂಗ್ ಗೆ ಕೊಡುವಂತೆ ಮನವಿ ಮಾಡಿದ್ದಾರೆ.
ಈ ಸಿನಿಮಾವನ್ನು ಕಂಗನಾ ಅವರೇ ನಿರ್ದೇಶಿಸಿ, ನಟಿಸುತ್ತಿರುವುದರಿಂದ ಸಾಕಷ್ಟು ಜವಾಬ್ದಾರಿಗಳನ್ನೂ ತಗೆದುಕೊಂಡಿದ್ದಾರೆ. ಇದು ಇಂದಿರಾ ಗಾಂಧಿ ಹೇರಿದ್ದ ತುರ್ತುಪರಿಸ್ಥಿತಿಯ ಕುರಿತಾಗಿ ಮಾಡುತ್ತಿರುವ ಸಿನಿಮಾವಾಗಿದ್ದರಿಂದ ಸಂಸತ್ ಭವನವನ್ನು ಶೂಟಿಂಗ್ ಗೆ ಕೊಡುವಂತೆ ಕಂಗನಾ ಕೇಳಿಕೊಂಡಿದ್ದಾರೆ.
ನಿಯಮಗಳ ಪ್ರಕಾರ ಸರಕಾರಿ ಸ್ವಾಮ್ಯದ ಟಿವಿಗಳ ಕ್ಯಾಮೆರಾಗಳನ್ನು ಮಾತ್ರ ಒಳಗೆ ಬಿಡಲಾಗುತ್ತದೆ. ಇಲ್ಲಿ ಶೂಟಿಂಗ್ ಮಾಡುವುದನ್ನು ನಿಷೇಧಿಸಲಾಗಿದೆ. ಈ ವೇಳೆಯಲ್ಲಿ ಕಂಗನಾ ಬೇಡಿಕೆಯನ್ನು ಸರಕಾರ ನಿರಾಕರಿಸುವ ಸಾಧ್ಯತೆಯೇ ಹೆಚ್ಚಿದೆ.
ಬಿಜೆಪಿ ಮತ್ತು ಮೋದಿ ಪರ ಕಂಗನಾ ಹಲವಾರು ಬಾರಿ ಮಾತನಾಡಿದ್ದಾರೆ. ಹಾಗಾಗಿ ಕಂಗನಾಗಾಗಿ ನಿಯಮ ಬದಲಿಸಿ, ಅನುಮತಿ ಕೊಡಲಾಗುತ್ತಾ ಎನ್ನುವ ಚರ್ಚೆ ನಡೆದಿದೆ.
ಈವರೆಗೂ ಸಂಸತ್ ಒಳಗೆ ಸಿನಿಮಾ ಶೂಟಿಂಗ್ ಮಾಡಲು ಅನುಮತಿ ಕೊಟ್ಟಿಲ್ಲ. ಕಂಗನಾ ಆಸೆ ನಿರಾಸೆ ಆಗುವ ಸಾಧ್ಯತೆಯೇ ಹೆಚ್ಚಾಗಿದೆ ಎಂದು ಹೇಳಲಾಗಿದೆ.
Be the first to comment