ಭಾರತದ ಪ್ರಥಮ ಸಂಪೂರ್ಣ ಪ್ಯಾರನಾರ್ಮಲ್ ಚಿತ್ರ

ಸಿನಿಮಾಗಳಲ್ಲಿ ಕಣ್ಣಿಗೆ ಕಾಣಿಸುವಂತದ್ದನ್ನು ಹಾರರ್ ಎನ್ನುತ್ತಾರೆ. ಅದೇ ಪ್ರೇಕ್ಷಕನಿಗೆ ಕಾಣಿಸದೆ ಸ್ಪರ್ಶಿಸಿದಂತ ಅನುಭವ ನೀಡುವುದನ್ನು ಪ್ಯಾರನಾರ್ಮಲ್ ಅಂತ ಕರೆಯುತ್ತಾರೆ. ಕೆಲವು ಸಿನಿಮಾದಲ್ಲಿ ಎರಡು ಸೇರಿಕೊಂಡಿದ್ದು ಸುದ್ದಿಯಾಗಿತ್ತು. ಈಗ ‘ಕಮರೊಟ್ಟು ಚೆಕ್‍ಪೋಸ್ಟ್’ ಚಿತ್ರವು ಸಂಪೂರ್ಣ ಪ್ಯಾರನಾರ್ಮಲ್‍ನಿಂದ ಕೂಡಿದ ಕತೆಯಾಗಿದೆ. ಒಂದೇ ಬಾರಿ ಭೂತ, ವರ್ತಮಾನದಲ್ಲಿ ನಡೆಯುವ ಸನ್ನಿವೇಶಗಳು, ಸೈಕಲಾಜಿಕಲ್ ಆಗಿ ಊಹೆ ಮಾಡುವಂತಹ ನೋಡುಗರ ಮನಸ್ಥಿತಿಯನ್ನು ಅರಿತುಕೊಂಡು ಕತೆಯು ಸಿದ್ದಗೊಂಡಿರುವುದು ವಿಶೇಷ. ಇದರಿಂದ ಮತ್ತೆ, ಮತ್ತೆ ನೋಡುವಂತೆ ಭಾಸವಾಗುತ್ತದೆ. ಜೊತಗೆ ತುಳು ನಾಡಿನ ಭೂತರಾಧನೆಯ ಆಚರಣೆಯನ್ನು ಬಳಸಿಕೊಂಡು, ಇದಕ್ಕೆ ಅಂತಲೇ ಅದೇ ಭಾಷೆಯ ಹಾಡನ್ನು ಪ್ರಯೋಗ ಮಾಡಲಾಗಿ ನಟ,ತಂತ್ರಜ್ಘ ನವೀನ್‍ಕೃಷ್ಣ ಗೀತೆಗೆ ಧ್ವನಿಯಾಗಿದ್ದಾರೆ. ಆಚರಣೆ ಮಾಡುವ ಸಂದರ್ಭದಲ್ಲಿ ಯಾರಿಗೂ ತಿಳಿಯದಂತೆ ಕಲಾವಿದರ ಸಹಕಾರದಿಂದ ಸೆರೆಹಿಡಿದಿರುವುದು ಮತ್ತು ಅಸ್ತಿತ್ವವುಳ್ಳ ಕಾಲ್ಪನಿಕ ಕತೆಯಾಗಿರುವುದು ಮತ್ತೋಂದು ಹಿರಿಮೆಗೆ ಪಾತ್ರವಾಗಿದೆ.

ಇಂತಹ ವಿನೂತನ ಪರಿಕಲ್ಪನೆಗೆ ರಚನೆ, ಛಾಯಾಗ್ರಹಣ ಮತ್ತು ನಿರ್ದೇಶನ ಮಾಡಿರುವುದು ಎ.ಪರಮೇಶ್. ಇವರು ಈ ಹಿಂದೆ ಮಾಮೂ ಟೀ ಅಂಗಡಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಹೊಸ ಪ್ರತಿಭೆ ಮಹೇಶ್ ಸಾಹಿತ್ಯದ ಎರಡು ಹಾಡುಗಳಿಗೆ ಎ.ಟಿ.ರವೀಶ್ ಸಂಗೀತದ 25ನೇ ಅನುಭವವಾಗಿದೆ. ಸೆನ್ಸಾರ್‍ನವರು ಒಳ್ಳೆಯ ಸಿನಿಮಾವೆಂದು ಪ್ರಶಂಸೆ ವ್ಯಕ್ತಪಡಿಸಿ ಯಾವುದೇ ದೃಶ್ಯವನ್ನು ಕಟ್ ಮಾಡದೆ, ಆಕ್ಷೇಪ ವ್ಯಕ್ತಪಡಿಸದೆ, ಅಬ್ಬರದ ಮ್ಯೂಸಿಕ್ ಇರುವ ಕಾರಣ ಎ ಪ್ರಮಾಣ ಪತ್ರ ನೀಡಿದ್ದಾರೆ. ತುಣುಕುಗಳನ್ನು ಉಗ್ರಂ ಶ್ರೀಮುರಳಿ ಬಿಡುಗಡೆ ಮಾಡಿದರೆ, ಧ್ರುವಸರ್ಜಾ ಪ್ರಚಾರಕ್ಕಾಗಿ ಸಿದ್ದಪಡಿಸಿದ್ದ ಗೇಮ್‍ವೊಂದನ್ನು ಲೋಕಾರ್ಪಣೆ ಮಾಡಿರುವುದು ಪ್ಲಸ್ ಪಾಯಿಂಟ್ ಆಗಿದೆ. ಸನ್ನಿವೇಶಕ್ಕೆ ಅನುಕೂಲವಾಗುವಂತೆ ಕೊಡಗು, ಮಂಗಳೂರು ಭಾಗಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.

ಉತ್ಪಲ್, ಸನತ್‍ಕುಮಾರ್ ನಾಯಕರುಗಳು, ಸ್ವಾತಿಕೊಂಡೆ, ಅಹಲ್ಯಾಸುರೇಶ್ ನಾಯಕಿಯರು, ಇವರೆಲ್ಲರಿಗೂ ಎರಡನೇ ಅವಕಾಶವಾಗಿದೆ. ತಿಥಿ ಖ್ಯಾತಿಯ ಗಡ್ಡಪ್ಪ ವಿನೂತನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಕೆಲವು ಮಾಹಿತಿಗಳನ್ನು ತಿಳಿಸುವ ಸಲುವಾಗಿ ಭಾರತದ ಪ್ರಥಮ ಮಹಿಳಾ ಪ್ಯಾರನಾರ್ಮಲ್ ಸಂಶೋಧಕಿ ನಿಶಾವರ್ಮ ಅವರನ್ನು ಭೇಟಿ ಮಾಡಿದ್ದು, ಅಲ್ಲದೆ ಅದೇ ಪಾತ್ರಕ್ಕೆ ಅವರಿಗೆ ಬಣ್ಣ ಹಾಕಿಸುವಲ್ಲಿ ನಿರ್ದೇಶಕರು ಸಪಲರಾಗಿದ್ದಾರೆ. ಇವೆಲ್ಲಾದರ ಜೊತೆಗೆ ಉತ್ಸಾಹಭರಿತ ಊಸರವಳ್ಳಿ ಪ್ರಮುಖ ಪಾತ್ರವಾಗಿ ಕಾಣಿಸಿಕೊಂಡಿರುವುದು ವಿಶೇಷ. ನಿರ್ದೇಶಕರ ಕನಸುಗಳನ್ನು ನನಸು ಮಾಡಿರುವ ಚೇತನ್‍ರಾಜ್ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ನೂರ ಮೂವತ್ತು ನಿಮಿಷದ ಚಿತ್ರವು ಇದೇ 31 ರಂದು ತೆರೆ ಕಾಣುವ ಸಂಭವವಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!