ಕಮಲಿಗೆ ಮನಸೋತ ವೀಕ್ಷಕರು :
ಜೀ ವಾಹಿನಿಯಲ್ಲಿ ಮೇ 28ರಿಂದ ಪ್ರಸಾರವಾಗುತ್ತಿರುವ ಆಕರ್ಷಕ ಹೆಸರಿನ ‘ಕಮಲಿ’ ಆರು ವಾರಗಳಲ್ಲಿ ವೀಕ್ಷಕರಿಂದ ಪ್ರಶಂಸೆಗೆ ಒಳಪಟ್ಟಿದೆ. ಸಾವಿರ ಕನಸುಗಳ ಕಮರುವ ಮುನ್ನ.. ಗೆಲುವಿನ ಕಡಲು ಮುಟ್ತಾಳಾ? ಎಂದು ಅಡಿಬರಹದಲ್ಲಿ ಹೇಳಿಕೊಂಡಿದೆ. ಮೆಗಾ ಧಾರವಾಹಿ ಕುರಿತು ಹೇಳುವುದಾದರೆ ಶುರುವಿನಲ್ಲೆ ಕಮಲಿಗೆ ಓದುವ ಆಸೆಗೆ ಎಳ್ಳುನೀರು ಬಿಟ್ಟಂತೆ ಆಗುತ್ತದೆ. ಆದರೆ ಆಕೆಯು ಎದೆಗುಂದದೆ ಛಲದಿಂದ ತನ್ನ ಆಸೆಯನ್ನು ಈಡೇರಿಸಿಕೊಂಡು ಕೆಸರಿನಲ್ಲ್ಲಿ ಅರಳಿದ ಕಮಲಿಯಂತಾಗುವುದೇ ಒಂದು ಏಳೆಯ ಕತೆಯಾಗಿದೆ. ಕಮಲಿಯಾಗಿ ಅಮೂಲ್ಯಗೌಡ, ಇವರೊಂದಿಗೆ ಹಿರಿಯ ನಟಿ ಪದ್ಮವಾಸಂತಿ ಉಳಿದಂತೆ ನಿರಂಜನ್, ರಚನಾ, ಅಂಕಿತಾ, ಚಂದ್ರಕಲಾಮೋಹನ್, ಬೆಂಗಳೂರುನಾಗೇಶ್ ಮುಂತಾದವರು ನಟಿಸಿದ್ದಾರೆ. ಕತೆ ಜೀ ಚಾನಲ್, ಸಂಗೀತ ಶರತ್, ಸಂಭಾಷಣೆ ಸತ್ಯ.ಕೆ. ಛಾಯಗ್ರಹಣ ಇಂದ್ರಧನುಷ್, ಸಂಕಲನ ಇಮ್ರಾನ್ಮುದ್ದೆಬಿಹಾಳ್, ಕಾರ್ಯನಿರ್ವಾಹಕ ನಿರ್ಮಾಪಕ ಅರವಿಂದಶಶಿ, ವ್ಯವಸ್ಥಾಪಕರು ಸೋಮನಾಥ್ ನಿರ್ವಹಿಸಿದ್ದಾರೆ.
ಹಲವು ಚಿತ್ರಗಳನ್ನು ನಿರ್ದೇಶನ ಮಾಡಿರುವ ಅರವಿಂದ್ಕೌಶಿಕ್ ಆಕ್ಷನ್ ಕಟ್ ಹೇಳಿದ್ದಾರೆ. ಕೊಡೈಕನಾಲ್ ಸುಂದರ ತಾಣಗಳಲ್ಲಿ ಚಿತ್ರೀಕರಣಗೊಂಡ ಮೊದಲ ಧಾರವಾಹಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಾಂಚನಾಗಂಗಾ, ರಿಷಿ, ಮಿಲನ ಚಿತ್ರಗಳಲ್ಲಿ ಸಣ್ಣ ಪಾತ್ರಕ್ಕೆ ಬಣ್ಣ ಹಚ್ಚಿರುವ ರೋಹಿತ್.ಎಸ್. ಈ ಹಿಂದೆ ನಾಗಮಣಿ ಧಾರವಾಹಿಗೆ ಸಹ ನಿರ್ಮಾಪಕರಾಗಿದ್ದರು. ಕಮಲಿಗೆ ಪೂರ್ಣ ಪ್ರಮಾಣದಲ್ಲಿ ಹಣ ಹೂಡುವುದರ ಮೂಲಕ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಇವರೊಂದಿಗೆ ನಿರ್ದೇಶಕರ ಪತ್ನಿಯ ಸತ್ವ ಮೀಡಿಯಾ ಪ್ರೊಡಕ್ಷನ್ ಕೈ ಜೋಡಿಸಿದೆ. ಇತರೆ ಧಾರವಾಹಿಗಳಂತೆ ಟಿಆರ್ಪಿಯಲ್ಲಿ ಮುಂದಿರುವ ‘ಕಮಲಿ’ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 7 ಘಂಟೆಗೆ ಪ್ರಸಾರವಾಗುತ್ತಿದೆ.
Be the first to comment