ತಮಿಳು ಸ್ಟಾರ್ ನಟ ಕಮಲ್ ಹಾಸನ್ ವಿಕ್ರಮ್ ಸಿನಿಮಾದ ಬಳಿಕ ಮತ್ತೊಂದು ಸಿನಿಮಾ ಘೋಷಣೆ ಮಾಡಿದ್ದಾರೆ.
ಚಿತ್ರವನ್ನು ಚದುರಂಗ ವೇಟ್ಟೈ ಸೇರಿದಂತೆ ಹಲವು ಚಿತ್ರಗಳನ್ನು ಮಾಡಿರುವ ನಿರ್ದೇಶಕ ಹೆಚ್.ವಿನೋದ್ ನಿರ್ದೇಶನ ಮಾಡಲಿದ್ದಾರೆ. ಕಮಲ್ ತಮ್ಮದೇ ಬ್ಯಾನರ್ ನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ ಎನ್ನುವುದು ವಿಶೇಷ ಆಗಿದೆ.
ಸದ್ಯ ಇಂಡಿಯನ್ 2 ಸಿನಿಮಾದ ಶೂಟಿಂಗ್ ನಲ್ಲಿ ಕಮಲ್ ಬ್ಯುಸಿಯಾಗಿದ್ದಾರೆ.ನಿರ್ದೇಶಕ ಹೆಚ್.ವಿನೋದ್ ನಿರ್ದೇಶನದ ತುನಿವು ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಈ ಸಿನಿಮಾ ಬಿಡುಗಡೆ ಆದ ಬಳಿಕ ಕಮಲ್ ಜೊತೆ ಅವರು ಕೈ ಜೋಡಿಸಲಿದ್ದಾರೆ.
ವಿಕ್ರಮ್ ಸಿನಿಮಾದ ಯಶಸ್ಸಿನ ನಂತರ ಕಮಲ್ ಹಾಸನ್ ಲುಕ್ ಸಂಪೂರ್ಣವಾಗಿ ಬದಲಾಗಿದೆ. ಸಿನಿಮಾ ಮಾಡಿ ಸಾಲದ ಸುಳಿಯಲ್ಲಿ ಸಿಲುಕಿಕೊಂಡಿದ್ದ ಕಮಲ್ ಹಾಸನ್ ಅವರಿಗೆ ವಿಕ್ರಮ್ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿಕೊಟ್ಟಿದೆ.
___

Be the first to comment