ಸಚಿನ್ ಚೆಲುವರಾಯಸ್ವಾಮಿ, ಸಂಗೀತ ಭಟ್ ಮತ್ತು ಕಿಶೋರ್ ನಟಿಸಿರುವ ‘ಕಮಲ್ ಶ್ರೀದೇವಿ’ ಸಿನಿಮಾ ಸೆಪ್ಟೆಂಬರ್ 19 ರಂದು ತೆರೆಗೆ ಬರಲಿದೆ.
ವಿಎ ಸುನಿಲ್ ಕುಮಾರ್ ನಿರ್ದೇಶಿಸಿದ ಈ ಚಿತ್ರದಲ್ಲಿ ರಮೇಶ್ ಇಂದಿರಾ, ಮಿತ್ರ ಮತ್ತು ಉಮೇಶ್ ಕೂಡ ನಟಿಸಿದ್ದಾರೆ. ಚಿತ್ರವನ್ನು ಸ್ವರ್ಣಾಂಬಿಕಾ ಪಿಕ್ಚರ್ಸ್ ಅಡಿಯಲ್ಲಿ ಬಿ ಕೆ ಧನಲಕ್ಷ್ಮಿ ನಿರ್ಮಿಸಿದ್ದಾರೆ. ರಾಜವರ್ಧನ್ ಸಹ-ನಿರ್ಮಾಣ, ಕೀರ್ತನ್ ಸಂಗೀತ ಸಂಯೋಜಿಸಿದ್ದಾರೆ.
ಚಿತ್ರದಲ್ಲಿ ಪೊಲೀಸ್ ಪಾತ್ರದಲ್ಲಿ ನಟ ಕಿಶೋರ್ ಅವರು ನಟಿಸಿದ್ದಾರೆ. “ಕಮಲ್ ಶ್ರೀದೇವಿಯ ಭಾಗವಾಗಲು ನನಗೆ ಸಂತೋಷವಾಗಿದೆ. ಏಕೆಂದರೆ ಇವತ್ತಿಗೆ ಬಹಳ ಪ್ರಸ್ತುತವಾದ ವಿಷಯ ಈ ಸಿನಿಮಾದಲ್ಲಿದೆ. ಅತ್ಯಾಚಾರ, ಕೊಲೆ ಎನ್ನುವುದು ಪ್ರತಿನಿತ್ಯದ ಸುದ್ದಿಯಾಗಿದೆ. ಧರ್ಮಸ್ಥಳದಲ್ಲಿ ಸೌಜನ್ಯ ಪ್ರಕರಣವಾಗಿ 12 ವರ್ಷವಾಯಿತು. ಇದೂ ದೊಡ್ಡ ಮಟ್ಟದ ಸುದ್ದಿಯಾಯಿತು. ಆದರೆ, ಇನ್ನೂ ನ್ಯಾಯ ಸಿಕ್ಕಿಲ್ಲ ಎನ್ನುವಾಗ ನಮ್ಮ ನ್ಯಾಯದ ವ್ಯವಸ್ಥೆ, ಪೊಲೀಸ್ ವ್ಯವಸ್ಥೆ ಮೇಲೆ ಪ್ರಶ್ನಾರ್ಥಕ ಚಿಹ್ನೆ ಬರುತ್ತದೆ. ನಮ್ಮನ್ನು ದನಿ ಎತ್ತುವುದಕ್ಕೆ ಈ ಸಿನಿಮಾ ಪ್ರೇರೇಪಿಸುತ್ತದೆ. ಹೀಗಾಗಿ ನಾನು ಈ ಸಿನಿಮಾ ಒಪ್ಪಿಕೊಂಡೆ” ಎಂದು ಹೇಳಿದ್ದಾರೆ.
ನಾಯಕನಾಗಿ ನಟಿಸಿರುವ ಸಚಿನ್ ಚೆಲುವರಾಯಸ್ವಾಮಿ ಅವರು ನಿರ್ದೇಶಕ ಸುನಿಲ್ ಅವರ ಸ್ಪಷ್ಟತೆ ಮತ್ತು ತಂಡದ ಸಮರ್ಪಣೆ ಪ್ರಕ್ರಿಯೆಯ ಪ್ರತಿಯೊಂದು ಹೆಜ್ಜೆಯನ್ನು ಸಾರ್ಥಕಗೊಳಿಸಿದೆ ಎಂದು ಹೇಳಿದ್ದಾರೆ.
ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸಂಗೀತಾ ಭಟ್ ಅವರು ಮಾತನಾಡಿ, ಶ್ರೀದೇವಿಯಂತಹ ಪಾತ್ರವನ್ನು ನಾನು ಮಾಡಬಹುದೇ ಎಂಬ ಬಗ್ಗೆ ನಿರ್ದೇಶಕರಿಗೆ ಆರಂಭದಲ್ಲಿ ಸ್ವಲ್ಪ ಹಿಂಜರಿಕೆ ಇತ್ತು. ಆದರೆ ಚಿತ್ರೀಕರಣದ ಬಳಿಕ ಅವರು ತೃಪ್ತರಾಗಿದ್ದಾರೆ ಎಂದು ಹೇಳಿದ್ದಾರೆ.





Be the first to comment