ಕಮಲ್ ಶ್ರೀದೇವಿ

ಕೆ ಆರ್ ಮಾರ್ಕೆಟ್ ನಲ್ಲಿ ‘ಕಮಲ್ ಶ್ರೀದೇವಿ’ ತಂಡದ ಫೋಟೋ ಶೂಟ್!

ತನ್ನ ವಿಭಿನ್ನ ಶೀರ್ಷಿಕೆಯ ಮೂಲಕ ಗಮನ ಸೆಳೆದಿರುವ ಕಮಲ್ ಶ್ರೀದೇವಿ ಚಿತ್ರತಂಡ ಬೆಂಗಳೂರಿನ ಪ್ರಮುಖ ಮಾರುಕಟ್ಟೆಯಾದ ಕೆ ಆರ್ ಮಾರುಕಟ್ಟೆಯಲ್ಲಿ ಓಡಾಡಿ ಫೋಟೋ ಶೂಟ್ ಮಾಡಿದೆ.

ರಾಜವರ್ಧನ್ ಕ್ರಿಯೇಟಿವ್ ಹೆಡ್ ಸಾರಥ್ಯದ ಕಮಲ್ ಶ್ರೀದೇವಿ ಚಿತ್ರತಂಡ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿ ಇತ್ತೀಚೆಗೆ ಮಹಾಕಾಳಿ ದೇವಸ್ಥಾನದಲ್ಲಿ ಚಿತ್ರಿಕರಣಕ್ಕೆ ಚಾಲನೆ ನೀಡಿತ್ತು. ಈಗ ಚಿತ್ರತಂಡ ಕಥೆಯ ಥೀಮ್ ನಲ್ಲಿ ಕ್ಯಾಂಡಿಡ್ ಫೋಟೋ ಶೂಟ್ ಮಾಡಿದೆ.

ನಾಯಕ ಸಚಿನ್ ಚೆಲುವರಾಯಸ್ವಾಮಿ, ನಾಯಕಿ ಸಂಗೀತಾ ಭಟ್, ಮತ್ತೊಬ್ಬ ನಟಿ ಅಕ್ಷಿತ ಬೋಪಯ್ಯ ಅವರು ಕೆಆರ್ ಮಾರುಕಟ್ಟೆಯ ಹೂ ಅಂಗಡಿ, ಹಣ್ಣು ಅಂಗಡಿ, ಅರಿಶಿಣ, ಕುಂಕುಮ, ಬಳೆ ಅಂಗಡಿಗಳಲ್ಲಿ ಪೋಸ್ ಕೊಟ್ಟಿದ್ದಾರೆ. ಕೆವಿನ್ ಶರ್ವಿನ್ ಮಸ್ಕರೇನಸ್ ಅವರು ತಮ್ಮ ಕ್ಯಾಮರಾದಲ್ಲಿ ಚಿತ್ರದ ಥೀಮ್ ನ್ನು ಕ್ಯಾಂಡಿಡ್ ಆಗಿ ಸೆರೆ ಹಿಡಿದಿದ್ದಾರೆ.

ಕಮಲ್ ಶ್ರೀದೇವಿ

ಈ ಫೋಟೋ ಶೂಟ್ ಗೆ, ಸಿನಿಮಾಕ್ಕೆ ಲಿಂಕ್ ಇದೆ. ಚಿತ್ರ ನೋಡಿದಾಗ ಇದು ಗೊತ್ತಾಗುತ್ತದೆ ಎಂದು ನಿರ್ದೇಶಕ ಸುನಿಲ್ ಕುಮಾರ್ ಹೇಳಿದ್ದಾರೆ.

ಕಮಲ್ ಶ್ರೀದೇವಿ ಚಿತ್ರಕ್ಕೂ ಫೋಟೋ ಶೂಟಿಗೆ ನಿಕಟ ಸಂಬಂಧವಿದೆ. ಕಮಲ್ ಪಾತ್ರ ಹಾಗೂ ಸಂಗೀತ ಭಟ್ ಹಾಗೂ ಅಕ್ಷಿತಾ ಅವರ ಪಾತ್ರ ಏನು ಎನ್ನುವುದು ಈ ಫೋಟೋಗಳನ್ನು ನೋಡಿದಾಗ ಗೊತ್ತಾಗುತ್ತದೆ ಎಂದು ನಾಯಕ ಸಚಿನ್ ಹೇಳಿದ್ದಾರೆ.

ಕಮಲ್ ಶ್ರೀದೇವಿ ಚಿತ್ರದಲ್ಲಿ ಕಿಶೋರ್, ರಮೇಶ್ ಇಂದಿರಾ, ಸಂಗೀತಾ ಭಟ್ ಸೇರಿದಂತೆ ಪ್ರತಿಭಾವಂತರು ನಟಿಸುತ್ತಿದ್ದಾರೆ. ಸ್ವರ್ಣಾಂಬಿಕ ಪಿಚ್ಚರ್ಸ್ ಬ್ಯಾನರ್ ನಡಿ ಡಿಕೆ ಧನಲಕ್ಷ್ಮಿ ನಿರ್ಮಾಣದ ಈ ಚಿತ್ರವನ್ನು ಎನ್ ಚೆಲುವರಾಯಸ್ವಾಮಿ ಅರ್ಪಿಸುತ್ತಿದ್ದಾರೆ. ಪಿ ಎ ಸುನಿಲ್ ಕುಮಾರ್ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ.

ಕಮಲ್ ಶ್ರೀದೇವಿ

Be the first to comment

Leave a Reply

Your email address will not be published. Required fields are marked *

Translate »
error: Content is protected !!