ಮತ್ತೆ ಒಂದಾದ ಕಮಲ್ – ಮಣಿರತ್ನಂ

35 ವರ್ಷಗಳ ನಂತರ ಮಣಿರತ್ನಂ ಮತ್ತು ಕಮಲ್ ಹಾಸನ್ ಜೊತೆಯಾಗಿ ಕೆಲಸ ಮಾಡಲಿದ್ದಾರೆ.

ಕಮಲ್ ಹಾಗೂ ಮಣಿರತ್ನಂ ಮತ್ತೆ ಒಂದಾಗಿ ಸಿನಿಮಾ ಮಾಡ್ಬೇಕು ಅನ್ನೋದು ಅಭಿಮಾನಿಗಳ ಬಹು ದಿನಗಳ ಆಸೆ ಆಗಿದೆ. ಹೊಸ ಸಿನಿಮಾವನ್ನು ಉದಯನಿಧಿ ನಿರ್ಮಾಣ ಮಾಡಲಿದ್ದು, ಎ.ಆರ್.ರೆಹಮಾನ್ ಸಂಗೀತ ಸಂಯೋಜನೆ ಮಾಡಲಿದ್ದಾರೆ.

ಈ ಹಿಂದೆ 1987ರ ನಾಯಗನ್ ಚಿತ್ರದಲ್ಲಿ ಒಂದಾಗಿ ಕಾಣಿಸಿಕೊಂಡಿದ್ದ ಆ ಬಳಿಕ ಮತ್ತೆ ಇವರಿಬ್ಬರು ಸಿನಿಮಾ ಮಾಡಲೇ ಇಲ್ಲ. ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕಲೆಕ್ಷನ್ ಮಾಡಿದ್ದ ನಾಯಗನ್ ಚಿತ್ರದ ನಟನೆಗೆ ಕಮಲ್ ಹಾಸನ್ ಗೆ ರಾಷ್ಟ್ರ ಪ್ರಶಸ್ತಿಯೂ ಸಂದಿತ್ತು. ಈಗ ಈ ಜೋಡಿ ಮತ್ತೆ ಒಂದಾಗುತ್ತಿದ್ದಾರೆ.

ಇದು ಕಮಲ್ ಹಾಸನ್ ಅವರ 234ನೇ ಸಿನಿಮಾವಾಗಿದ್ದು, 2024ರಲ್ಲಿ ಸಿನಿಮಾ ತೆರಿಗೆ ಬರಲಿದೆ.

ಸದ್ಯ ಕಮಲ್ ಹಾಸನ್ ನಟನೆಯ ವಿಕ್ರಮ್ ಏಜೆಂಟ್ ಚಿತ್ರ ಬಿಡುಗಡೆ ಆಗಿದ್ದು ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.

ಅಂತೆಯೇ ಮಣಿರತ್ನಂ ನಿರ್ದೇಶನದ ಪೊನ್ನಿಯನ್ ಸೆಲ್ವನ್ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಸೌಂಡ್ ಮಾಡಿದೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!