ಮಣಿರತ್ನಂ ಹಾಗೂ ಕಮಲ್ ಹಾಸನ್ ಕಾಂಬಿನೇಷನ್ ನ ‘ಥಗ್ ಲೈಪ್ ‘ ಕರ್ನಾಟಕ ಹೊರತುಪಡಿಸಿದರೆ ದೇಶಾದ್ಯಂತ ಗುರುವಾರ ಬಿಡುಗಡೆಯಾಗಿದ್ದು, ಬೆಂಗಳೂರಿನಲ್ಲಿರುವ ಕೆಲವು ಕಮಲ್ ಹಾಸನ್ ಅಭಿಮಾನಿಗಳು ತಮಿಳುನಾಡಿನ ಹೊಸೂರಿಗೆ ತೆರಳಿ ಸಿನಿಮಾ ವೀಕ್ಷಿಸಿದ್ದಾರೆ.
ಬೆಂಗಳೂರಿನಲ್ಲಿರುವ ಕಮಲ್ ಬೆಂಬಲಿಗರು 42 ಕಿ. ಮೀ.ದೂರದ ಹೊಸೂರುಗೆ ತೆರಳಿ ಸಿನಿಮಾ ವೀಕ್ಷಿಸುತ್ತಿರುವ ಫೋಟೋ, ವಿಡಿಯೋಗಳು ಕೆಲ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ತಮಿಳು ಸುದ್ದಿವಾಹಿನಿಗಳು ಹೊಸೂರಿನ ಚಿತ್ರಮಂದಿರದ ಮುಂದೆ ನಿಂತಿರುವ ಅಭಿಮಾನಿಗಳನ್ನು ತೋರಿಸಿವೆ.
ತಮಿಳುನಾಡಿನಲ್ಲಿ ಅದ್ದೂರಿಯಾಗಿ ಚಿತ್ರ ಬಿಡುಗಡೆಯಾಗಿದೆ. ಅಭಿಮಾನಿಗಳು ಥಿಯೇಟರ್ ಮುಂದೆ ಪಟಾಕಿ ಸಿಡಿಸಿ, ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಚಿತ್ರದ ಕುರಿತು ಚರ್ಚೆ ಮಾಡುತ್ತಿದ್ದಾರೆ. ಕೆಲವರು ಸೂಪರ್ ರೇಟಿಂಗ್ ಕೊಡುತ್ತಿದ್ದರೆ, ಮತ್ತೆ ಕೆಲವರು ಮಣಿರತ್ನಂ ಹಾಗೂ ಕಮಲ್ ಹಾಸನ್ ಕಾಂಬಿನೇಷನ್ ನಲ್ಲಿ 1987 ರಲ್ಲಿ ಬಂದಿದ್ದ ‘ನಾಯಕನ್’ ಜೊತೆಗೆ ‘ಥಗ್ ಲೈಪ್ ‘ ಹೋಲಿಸುತ್ತಿದ್ದಾರೆ.
ಕೊಯಂಬತ್ತೂರಿನಲ್ಲಿ ಕೆಲ ಅಭಿಮಾನಿಗಳು ‘ನಾವು ಕ್ಷಮೆ ಕೇಳಲ್ಲ’ ಎಂಬ ಬರಹ ಇರುವ ಟಿ- ಶರ್ಟ್ ಧರಿಸುವ ಮೂಲಕ ಕಮಲ್ ಹಾಸನ್ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
—-

Be the first to comment