ಕನ್ನಡದಲ್ಲಿ ಕಲ್ಯಾಣಿ ಹೆಸರಲ್ಲಿ ನಟಿಸಿದ್ದ ಮಲಯಾಳಂ ಚೆಲುವೆ ಕಾವೇರಿಯದ್ದು ಕೂಡ ದುರಂತ ದಾಂಪತ್ಯದ ಕಥೆ. ಸಂಭ್ರಮ, ರಾಮಕೃಷ್ಣ ಮತ್ತು ಹೆಬ್ಬುಲಿ ಚಿತ್ರಗಳಲ್ಲಿ ನಟಿಸಿದ ನಟಿ ಕಲ್ಯಾಣಿ,ಎಲ್ಲೂ ಎಕ್ಸ್ಪೋಸ್ ಮಾಡದೆ ನಟಿಸುವ ಈ ನಟಿಗೆ ಭಾರಿ ಬೇಡಿಕೆಯಿತ್ತು.
ಈಕೆ ಮುಟ್ಟಿದ್ದೆಲ್ಲಾ ಚಿನ್ನ,ಚಿತ್ರರಂಗದ ಜನ ಈಕೆಯನ್ನು ಬಂಗಾರದ ಸಿಂಹಾಸನದ ಮೇಲೆ ಕೂರಿಸಿದರು.ಆದರೆ?.ಯಾವಾಗ ಡೈರೆಕ್ಟರ್ ಸೂರ್ಯ ಕಿರಣ್ರನ್ನು ಮದುವೆಯಾದರೋ ಆಗಿನಿಂದ ಶುರುವಾಯಿತು ದುರದೃಷ್ಟ. ಬಂದ ಅವಕಾಶಗಳನ್ನೂ ಕಾಲಿಂದ ಒದ್ದರು ಕಲ್ಯಾಣಿ. ಈಕೆಯ ಹಣ ನೋಡಿ ತನ್ನ ಬಲೆಗೆ ಹಾಕಿಕೊಂಡ ಗಂಡ……… ಕಲ್ಯಾಣಿಯ ಹಣದಲ್ಲಿ ಸಿನಿಮಾ ನಿರ್ಮಾಣ ಮಾಡಿದ. ಆದರೆ ಆತ ಪತ್ನಿಯ ಜೊತೆ ಸೇರಿ ಮಾಡಿದ ಯಾವ ಸಿನಿಮಾ ಕೂಡ ಸಕ್ಸಸ್ ಕಾಣಲಿಲ್ಲ. ಕಲ್ಯಾಣಿ ಬಳಿ ಇದ್ದ ಹಣ ಎಲ್ಲಾ ಖಾಲಿಯಾಗಿತ್ತು. ಸಿನಿಮಾದಲ್ಲಿ ಅವಕಾಶವೂ ಇರಲಿಲ್ಲ. ಕೊನೆಗೆ ಗಂಡನ ಹಿಂಸೆ ತಾಳಲಾರದೆ ವಿಚ್ಚೇದನ ಪಡೆದುಕೊಂಡರು ಕಲ್ಯಾಣಿ
ಹೆಬ್ಬುಲಿ ಮತ್ತಿತರ ಸಿನಿಮಾಗಳಲ್ಲಿ ಚಿಕ್ಕ ಪುಟ್ಟ ಪಾತ್ರ ಮಾಡುವಾಗಲೇ ಕಾವೇರಿಗೆ ವಿಚ್ಛೇದನ ಆಗಿಹೋಗಿತ್ತು . ಆರ್ಥಿಕವಾಗಿ ತುಂಬಾ ಕಷ್ಟ ಪಡುತ್ತಿದ್ದರು ಈ ನಟಿ. ಕೊನೆಗೆ ಏನಾಯಿತೋ ಗೊತ್ತಿಲ್ಲ,ವಾರದ ಹಿಂದೆ ಕೇರಳದ ಕೂಯಿಪ್ಪಾಡು ಅನ್ನೋ ಕುಗ್ರಾಮದಲ್ಲಿ ನಾಟಿ ವೈದ್ಯ ಮಾಡಿಸಿಕೊಳ್ಳುವಾಗ ಜನರ ಕಣ್ಣಿಗೆ ಬಿದ್ದಿದ್ದಾರೆ. ಅರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಈಕೆ ದೊಡ್ಡ ದೊಡ್ಡ ಆಸ್ಪತ್ರೆಗಳಿಗೆ ಹೋಗಲು ಹಣ ಇಲ್ಲದೆ ನಾಟಿ ವೈದ್ಯರ ಬಳಿ ತೋರಿಸಿಕೊಲ್ಲುತ್ತಿದ್ದಾರಂತೆ. ಗುರುತು ಸಿಗದಷ್ಟು ರೀತಿ ಬದಲಾಗಿದ್ದಾರಂತೆ ಕಲ್ಯಾಣಿ.
Pingback: elangqqid.club
Excellent article. Keep posting such kind of info on your
page. Im really impressed by your blog.
Hey there, You’ve performed a fantastic job. I’ll definitely digg it and personally recommend to my friends.
I am confident they’ll be benefited from this site.
Pingback: kapan sertifikasi tw 4 2022 cair